ಮಾನವ ಸಮಾಜ ಕಟ್ಟಬೇಕು – ಶಾಸಕ ಆನಂದ್ ಸಿಂಗ್

ಹೊಸಪೇಟೆ -ಜು. 31- ಮಾನವ ಸಮಾಜ ಕಟ್ಟಬೇಕು, ಅದರ ಮುಖಾಂತರ ವಿಚಾರಗಳನ್ನು ಬಲಪಡಿಸಿ ಸಂಘಟನಾ ಶಕ್ತಿಯಿಂದ ಸಮಾಜವನ್ನು ಜಾಗೃತಗೊಳಿಸಬೇಕೆಂದು ಶಾಸಕ ಆನಂದ್ ಸಿಂಗ್ ತಿಳಿಸಿದರು.ಅವರು ಹೊಸಪೇಟೆ ನಗರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಬೇಡ ಜಂಗಮ ಸಮಾಜದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಮಾಜವನ್ನು ಜಾಗೃತಗೊಳಿಸಿದರೆ ಶೋಷಣೆ ತಡೆಯಬಹುದು, ಸಂಘಟಯಿಂದ ಶಕ್ತಿ ಪ್ರದರ್ಶನವಾಗಿ ಇಲ್ಲವೆಂದರೆ ಸಮಾಜ ಉಳಿಸುವುದು ಕಷ್ಟ ಸಾಧ್ಯ , ಈ ನಿಟ್ಟಿನಲ್ಲಿ ವೀರಶೈವ ಸಮಾಜದ ಬೇಡ ಜಂಗಮ ಸಮಾಜವು ಸಂಘಟಿತರಾಗಿ ತಮ್ಮ ಹಕ್ಕುಗಲಿಗೆ ಹೋರಾಟ ನಡೆಸುತ್ತಿದ್ದು ಅದಕ್ಕೆ ತಮ್ಮ ಸಂಪೂರ್ಣ ಬೆಂಬಲ ಸಹಕಾರ ಯಾವತ್ತು ಇರುತ್ತದೆ ಎಂದು ಆಶ್ವಾಸನೆ ನೀಡಿದರು.LINGAಅವರು  ನನ್ನ ಸುತ್ತಮುತ್ತಲೂ ಅನೇಕ ಧರ್ಮದ ಜಾತಿಯವರು ಇರುತ್ತಾರೆ ಆದರೆ ನಾನು ಎಂದಿಗೂ ಜಾತಿ ಆಧಾರದ ಮೇಲೆ ಜನಸಂಖ್ಯೆಯನ್ನು ಅಳೆದಿಲ್ಲ, ಮಾನವ ಸಮಾಜ ನಿರ್ಮಾಣವಾಗಬೇಕು ಎಂದು ತಿಳಿಸಿದರು. ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸುವುದರಿಂದ ಮುಂದಿನ ವಿದ್ಯಾಭ್ಯಾಸದಲ್ಲಿ ಅವರಿಗೆ ಸ್ಪೂರ್ತಿ ನೀಡಿದಂತಾಗುವುದು ಎಂದರು. ಅಧ್ಯಕ್ಷತೆಯನ್ನು ಸಮಾಜದ ಗೌರವಾಧ್ಯಕ್ಷ ಗೊಗ್ಗ ವಿಶ್ವನಾಥ, ಅಧ್ಯಕ್ಷ ಎಸ್.ಎಂ. ಕಾಶಿನಾಥಯ್ಯ, ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಪ್ರಕಾಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಲಿ ಸಿದ್ದಯ್ಯ, ಎಂ.ವಿರುಪಾಕ್ಷಯ್ಯ ಸ್ವಾಮಿ, ಎನ್.ಎಂ.ವಿರೇಶ್ವರಯ್ಯ, ಕೆ.ಬಿ.ಶ್ರಿನಿವಾಸ ರೆಡ್ಡಿ, ಡಾ.ಚಂದ್ರಶೇಖರ ಶಾಸ್ತ್ರಿ, ಹೆಚ್.ಎಂ.ಶಶಿಭೂಷಣ, ಹೆಚ್.ಎಲ್ ಕೊಟ್ರೇಶಪ್ಪ, ಎಂ.ನಿರಂಜನ ಮೂರ್ತಿ ಅಂಜುಮಾನ್ ಕಮಿಟಿ ಅಧ್ಯಕ್ಷ ಹೆಚ್.ಎನ್.ಎಫ್ ಮಹಮ್ಮದ್ ಇಮಾಮ್ ನಿಯಾಜಿ, ವಾಲ್ಮೀಕಿ ಸಮಾಜದ ಗುಜ್ಜಲ ಶಿವರಾಮಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply