fbpx

ಬಳ್ಳಾರಿ ಮೇರಿಜಾನ್ ವತಿಯಿಂದ MR. Bellary Contest-2020 ವಿಜೇತರಿಗೆ ಬಹುಮಾನ ವಿತರಣೆ ಮತ್ತು ಕೊರೋನಾ ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮ

ಬಳ್ಳಾರಿಯ ” ಬಳ್ಳಾರಿ ಮೇರಿ ಜಾನ್ ” ಸಂಸ್ಥೆಯೂ ಕಳೆದ ಹಲವಾರು ವರ್ಷಗಳಿಂದ ಸಮಾಜ ಮುಖಿ ಕೆಲಸ ಮಾಡಿಕೊಂಡು ಬರ್ತಿದೆ. ಈ ನಿಟ್ಟಿನಲ್ಲಿ ಕೊರೋನಾ ಸಮಯದಲ್ಲಿಯೂ ಸಹ ಹಲವಾರು ಕಾರ್ಯಕ್ರಮಗಳನ್ನು ಮಾಡಿದೆ. ಈ ಬಾರಿ ಬಳ್ಳಾರಿಯಲ್ಲಿ ಆಯೋಜನೆ ಮಾಡಿದ್ದ MR. Bellary Contest -2020 ಕಾರ್ಯಕ್ರಮವನ್ನೂ ಸಹ ಆಯೋಜನೆ ಮಾಡಲಾಗಿತ್ತು. ಅದ್ರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯ ಜತೆಗೆ ಈ ಬಾರಿ ಕೊರೋನಾ ಸಮಯದಲ್ಲಿ ಹೋರಾಡಿದ ಕೊರೋನಾ ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮ ಮಾಡಲಾಗುತ್ತಿದೆ‌. ಕಾರ್ಯಕ್ರಮಕ್ಕೆ ಬಳ್ಳಾರಿಯ ಕಲ್ಯಾಣ ಮಠದ ಶ್ರೀ ಕಲ್ಯಾಣ ಸ್ವಾಮೀಜಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕಲ್ಲುಕಂಬ ಪಂಪಾಪತಿ, ಜೆಸ್ಕಾಂ ವಿಭಾಗದ ಸಿಪಿಐ ಗಾಯತ್ರಿ ರೊಡ್ಡ, ಬಳ್ಳಾರಿ ಮೇರಿಜಾನ್ ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ಅಜೀಜ್, ಬೆಸ್ಟ್ ಶಾಲೆಯ ಉಪಾಧ್ಯಕ್ಷರಾದ ಕೊನಂಕಿ ತೀಲಕ್, ಸಿಎಸ್ಆರ್ ಅಸೋಸಿಯೇಷನ್ ನ ಚಾನಾಳ್ ಶೇಖರ್, ತಾರಾನಾಥ ಆಯುರ್ವೇದಿಕ್ ಕಾಲೇಜ್ ನ ವೈದ್ಯರಾದ ಡಾ. ರಾಜೇಶ್ ಸೂಗೂರ್, ಚಿತ್ರಕಲಾವಿದರಾದ ಮೊಹಮ್ಮದ್ ರಫೀಕ್, ಐ ಥಿಂಕ್ ಮಾಲೀಕರಾದ ವಿಕ್ವಾರ್, ನಮ್ಮೂರ ಕಾಫಿ ಮಾಲೀಕರಾದ ಕಾರ್ತಿಕ್, ಗುಲ್ಜಾರ್ ಮಾಲೀಕರಾದ ಸೈಯದ್ ಅಜ್ ಮತ್ ಮತ್ತು ಎಂ ಡಬ್ಲೂ ಫೈಬ್ರೆಂಟ್ ನ ಜಿಯಾ ಅವರು ಮುಖ್ಯ ಅಥಿತಿಗಳಾಗಿ ಭಾಗಿಯಾಗಲಿದ್ದಾರೆ.

ಬಹುಮಾನ ವಿತರಣೆ.

1- ಮೊಹಮ್ಮದ್ ಉಮರ್, ವಿನ್ನರ್.

2- ಮೀನಾ ಕೇತನ್ ರೆಡ್ಡಿ, ಮೊದಲ ರನ್ನರ್ ಅಪ್

3- ವಾಜೀದ್ ಅಲಿ, ಎರಡನೇ ವಿನ್ನರ್ ಅಪ್.

ಕೊರೋನಾ ವಾರಿಯರ್ಸ್ ಗೆ ಸನ್ಮಾನ.

1- ಗಾಯತ್ರಿ ರೊಡ್ಡ, ಜೆಸ್ಕಾಂ ಸಿಪಿಐ, ಬಳ್ಳಾರಿ.

2- ಡಾ‌. ರಾಜೇಶ್ ಸೂಗೂರ್, ತಾರಾನಾಥ ಆರ್ಯುವೇದ ಕಾಲೇಜ್ ಬಳ್ಳಾರಿ.

3- ಕೆ. ನರಸಿಂಹ ಮೂರ್ತಿ, ಸುವರ್ಣ ನ್ಯೂಸ್, ಬಳ್ಳಾರಿ.

4- ಕೆ. ಸುರೇಶ್ ಚೌವ್ಹಾಣ್, ಪ್ರಜಾಟಿವಿ. ಬಳ್ಳಾರಿ.

5- ಮಹಮ್ಮದ್ ಲುಕ್ ಮ್ಯಾನ್, ಪಬ್ಲಿಕ್ ಟಿವಿ ಕ್ಯಾಮೆರಾಮ್ಯಾನ್, ಬಳ್ಳಾರಿ.

6- ಅರುಣ್, ಬಿಪಿ ನ್ಯೂಸ್, ಬಳ್ಳಾರಿ.

7- ವಾಜೀದ್ ಅಲಿ, ತಾರಾನಾಥ್ ಮೆಡಿಕಲ್ ಕಾಲೇಜು ಸಿಬ್ಬಂದಿ.

8- ಸೈಯದ್ ಶಹಾನಾಜ್, ಹೆಲ್ತ್ ಇನ್ಸ್ ಪೇಕ್ಟರ್, ಮಹಾನಗರ ಪಾಲಿಕೆ, ಬಳ್ಳಾರಿ.

9- ಅವಿನಾಶ್,ಬಳ್ಳಾರಿ ರೈಡರ್

ದಿನಾಂಕ- 15-10-2020
ಸಮಯ- ಬೆಳಗ್ಗೆ 11 ಗಂಟೆಗೆ.
ಸ್ಥಳ- ಮುಂಡ್ಲೂರು ರಾಮಪ್ಪ ಸಭಾಂಗಣ, ಬಳ್ಳಾರಿ.

Please follow and like us:
error
error: Content is protected !!