fbpx

ಬಳ್ಳಾರಿ ಸ್ವಯಂ ಲಾಕ್ಡೌನ್ ಗೆ ಮುಂದಾದ ವರ್ತಕರು

ಬಳ್ಳಾರಿ : ಗಣಿನಾಡಿನಲ್ಲಿ ಕರೋನಾ ತನ್ನ ಅಟ್ಟಹಾಸ ಮುಂದುವರೆಸಿದೆ. ಗಣಿನಾಡು ಬಳ್ಳಾರಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣ ಧೃಡವಾದ ಹಿನ್ನಲೆಯಲ್ಲಿ ಇಂದಿನಿಂದ ಬಳ್ಳಾರಿ ಸೆಲ್ಫ್ ಲಾಕ್ಡೌನ್ ‌ಮಾಡಲು ವರ್ತಕರು ಮುಂದಾಗಿದ್ದಾರೆ. ಜುಲೈ ಮೂರರಿಂದ ಹನ್ನೊಂದನೇ ತಾರೀಖಿನವರೆಗೆ ಈ ನಿಯಮ ಪಾಲನೆಗೆ ನಿರ್ಧಾರ ಮಾಡಲಾಗಿದೆ. ಬಳ್ಳಾರಿ ನಗರದ ಜನರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರೋ ಅತಂಕದ ಹಿನ್ನೆಲೆಯಲ್ಲಿ ಮಧ್ಯಾಹ್ನ ಮೂರು ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟು ಮಾಡಬೇಕೆಂದು ನಿರ್ಧರಿಸಲಾಗಿದೆ. ಈ ಕುರಿತು ಅಧಿಕೃತ ಆದೇಶ ಹೊರಡಿಸಿದ ಬಳ್ಳಾರಿ ಚೇಂಬರ್ ಆಫ್ ಕಾಮರ್ಸ್ ವ್ಯಾಪಾರ ವಹಿವಾಟಿನೊಂದಿಗೆ ಆರೋಗ್ಯವೂ ಮುಖ್ಯ ಹೀಗಾಗಿ ಸ್ವಯಂ ಲಾಕ್ ಡೌನ್ ನಿರ್ಧಾರ ಎಲ್ಲರೂ ಪಾಲಿಸಲು ಕೋರಲಾಗಿದೆ. ಬೌಷದಿ ಅಂಗಡಿಗಳನ್ನು ಹೊರತುಪಡಿಸಿ ಎಲ್ಲವೂ ಬಂದ್ ಆಗಲಿವೆ.

Please follow and like us:
error
error: Content is protected !!