fbpx

ಬಳ್ಳಾರಿ ಮಳೆಗೆ ಕೊಚ್ಚಿಹೋದ ಸೇತುವೆ

ಬಳ್ಳಾರಿ : ಜಿಲ್ಲೆಯ ಸಿರುಗುಪ್ಪ ತಾಲೂಕಿನ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ಕಾಮಗಾರಿ ಹಂತದಲ್ಲಿದ್ದ ಸೇತುವೆ ಕೊಚ್ಚಿ ಹೋಗಿದೆ.ಸಿರುಗುಪ್ಪ ತಾಲ್ಲೂಕಿನ ರಾರಾವಿ ಗ್ರಾಮದ ಬಳಿಯ ಇರುವ ಯಲ್ಲಮ್ಮನ ಹಳ್ಳದ ಸೇತುವೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗಾಗಿ ನಿರ್ಮಿಸಿದ ಪೂರಕ ಸೇತುವೆ ಹಳ್ಳಕ್ಕೆ ನೀರು ಬಂದದ್ದರಿಂದ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿ ಅಂತರಾಜ್ಯ ಸಂಪರ್ಕ ಬಂದ್ ಆಗಿದೆ.
ಹಣ್ಣು, ತರಕಾರಿ ಸೇರಿದಂತೆ ದಿನ ನಿತ್ಯದ ಅಗತ್ರ ವಸ್ತುಗಳು ಅಂತರಾಜ್ಯದ ಗಡಿಭಾಗಗಳಲ್ಲಿ ಸಂಚರಿಸುವ ವಾಹನಗಳು ಕಿಲೊ ಮೀಟರ್ ಗಟ್ಟಲೇ ನಿಂತಿವೆ. ಸೀಮಾಂದ್ರಕ್ಕೆ ಓಡಾಡುವ ವಾಹನಗಳಿಗೆ ತೊಂದರೆಯಾಗದಂತೆ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸಿದ್ದರು. ಚಿಕಿತ್ಸೆ ಸೇರಿದಂತೆ, ರಸಗೊಬ್ಬರ ಮತ್ತು ಕ್ರಿಮಿನಾಶಕ ಖರೀದಿಗೆ ಆಗಮಿಸುವ ರೈತರಿಗೂ ತೊಂದರೆ ಯಾಗಿದ್ದು ಕಳಪೆಯಾಗಿ ನಿರ್ಮಿಸಿರುವ ಗುತ್ತಿಗೆದಾರನಿಗೆ ಹಿಡಿಶಾಪ ಹಾಕುತ್ತಿದ್ದಾರೆ.

Please follow and like us:
error
error: Content is protected !!