ಬಳ್ಳಾರಿ : ಮತ್ತೊಂದು ಕೊರೋನಾ ಪಾಸಿಟಿವ್ ಕೇಸ್

ಬಳ್ಳಾರಿ- ಬಳ್ಳಾರಿಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಕೇಸ್ ಕನ್ಪರ್ಮ ಆಗಿದೆ. 42 ವರ್ಷದ ಮಹಿಳೆಗೆ ಕೊರೋನಾ ಸೋಂಕು ಧೃಡವಾಗಿದೆ ಇದರಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ೫೨ಕ್ಕೆ ಏರಿಕೆಯಾಗಿದೆ‌ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆ- ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ- ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ 42 ವರ್ಷದ ಮಹಿಳೆ- ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಿಂದ ಕೊವೀಡ್ ಆಸ್ಪತ್ರೆಗೆ ಶೀಫ್ಟ್ ಮಾಡಲಾಗಿದೆ.
ಬಳ್ಳಾರಿ- ಗಣಿನಾಡು ಬಳ್ಳಾರಿಯಲ್ಲಿ 10 ಸಾವಿರ ದಾಟಿದ ಕೊರೋನಾ ಟೆಸ್ಟ್ಗಳು. ಇದುವರೆಗೆ 10,232 ಜನರ ರಕ್ತದ ಮಾದರಿ ಮತ್ತು ಗಂಟಲು ದ್ರವ ಪರೀಕ್ಷೆ ಮಾಡಿದೆ ಬಳ್ಳಾರಿ ಜಿಲ್ಲಾಡಳಿತ- ಇದ್ರಲ್ಲಿ 10049 ಜನರ ವರದಿ ನೆಗೆಟಿವ್ ಇವೆ- 51 ಜನರಿಗೆ ಪಾಸಿಟಿವ್ ಇದೆ- ಇನ್ನೂ 132 ಜನರ ಲ್ಯಾಬ್ ರಿಪೋರ್ಟ್ ಬರಬೇಕಿದೆ- 27 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ- ಇನ್ನೂ 23 ಪ್ರಕರಣಗಳು ಸಕ್ರಿಯವಾಗಿವೆ- 881 ಜನರು ಮಾತ್ರ ಕ್ವಾರೆಂಟೆನ್ ನಲ್ಲಿದ್ದಾರೆ- 2400 ಜನರು 28 ದಿನಗಳ ಕಾಲದ ಕ್ವಾರೆಂಟೆನ್ ಮುಗಿಸಿದ್ದಾರೆ- ಇದುವರೆಗೆ ಕೊರೋನಾ ಮಹಾಮಾರಿಗೆ ಒಬ್ಬರು ಮಾತ್ರ ಬಲಿಯಾಗಿದ್ದಾರೆ- 3 ಲಕ್ಷದ 41 ಸಾವಿರದ 377 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದೆ- ಬಳ್ಳಾರಿ ಡಿಸಿ ಎಸ್.ಎಸ್. ನಕುಲ್ ಮಾಹಿತಿ ನೀಡಿದರು.

Please follow and like us:
error