ಬದುಕಿನಲ್ಲಿ ಧಾರ್ಮಿಕ, ಲೌಕಿಕ ಶಿಕ್ಷಣ ಬಹಳ ಮುಖ್ಯ- ಇಕ್ಬಾಲ್ ಅನ್ಸಾರಿ

ಕೊಪ್ಪಳ : ತಂಗಳ್ ರನ್ನು ನೋಡುವುದು ಭೇಟಿಯಾಗುವುದೇ ಒಂದು ಪುಣ್ಯದ ಕೆಲಸ. ಕೇರಳದಲ್ಲಿ ಧಾರ್ಮಿಕ ಶಿಕ್ಷಣ ಉತ್ತಮವಾಗಿದೆ. ಆದರೆ ಕರ್ನಾಟಕದಲ್ಲಿ ಧಾರ್ಮಿಕ ಶಿಕ್ಷಣದ ಕೊರತೆಯಿದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮಸದಾರ್ ಎಜು ಮತ್ತು ಚಾರಿಟಿ ಸಂಸ್ಥೆ ಕೊಪ್ಪಳದಲ್ಲಿ ೨೭ನೇ ಮದ್ರಾಸಾ ಆರಂಭಿಸುತ್ತಿದೆ. ಇಂತಹ ಶಿಕ್ಷಣ ಸಂಸ್ಥೆಗಳಿಂದ ಧಾರ್ಮಿಕ ಮತ್ತು ಮಾಡರ್ನ ಶಿಕ್ಷಣವೂ ನೀಡುತ್ತಿದೆ. ಇದರಿಂದಾಗಿ ಎಲ್ಲರಿಗೂ ಇದು ಅವಶ್ಯಕವಾಗಿರುವಂಥಹದ್ದು. ಬದುಕಿನಲ್ಲಿ ಶಿಕ್ಷಣ ಬಹಳ ಮುಖ್ಯ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು.

ಕೊಪ್ಪಳ ನಗರದಲ್ಲಿ ನಡೆದ ಮಸದಾರ್ ಸಂಸ್ಥೆಯ ಮದರಸಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಲೌಕಿಕ ಬದುಕಿಗಾಗಿ ಶಿಕ್ಷಣ ಅವಶ್ಯಕವಿದೆ. ನಮ್ಮಲ್ಲಿ ಶಿಕ್ಷಣದ ಕೊರತೆಯಿದೆ. ಕುರತಂಗಳ   ಅಷ್ಟು ಸರಳವಾಗಿ ಎಲ್ಲರಿಗೂ ಲಭ್ಯವಾಗುವುದಿಲ್ಲ.  ದೊಡ್ಡ ವ್ಯಕ್ತಿತ್ವ ಹೊಂದಿರುವಂಥವರು.  ಅವರು ಇಲ್ಲಿ ಬಂದಿರುವುದು ನಮ್ಮ ಪುಣ್ಯವೇ.  ಅವರ ದುವಾಕ್ಕಾಗಿ ಇಲ್ಲಿ ಬಂದಿದ್ದೇವೆ. ಇದು ನನ್ನ ಭಾಗ್ಯವೇ ಸರಿ.  ಅವರು ನಮ್ಮೆಲ್ಲರಿಗಾಗಿ ದುವಾ ಮಾಡಲಿದ್ದಾರೆ. ಎಲ್ಲರೂ ಒಂದಾಗಬೇಕಾಗಿರುವುದು ಅವಶ್ಯ. ನಮ್ಮಲ್ಲಿಯ ಎಲ್ಲ ಗುಂಪುಗಾರಿಕೆಗಳನ್ನು ಮರೆತು ಒಂದಾಗಬೇಕಿದೆ. ಒಂದಾದರೆ ಎಲ್ಲವೂ ಸಾಧ್ಯ. ಸರಿ, ತಪ್ಪುಗಳನ್ನು ಮೇಲಿನವನು ನೋಡುತ್ತಿದ್ದಾನೆ. ನಾವು ನಮ್ಮ ನಮ್ಮಲ್ಲಿಯೇ ಗೋಡೆಗಳನ್ನು ಕಟ್ಟಿಕೊಂಡಿದ್ದೇವೆ.  ಇದಾಗಬಾರದು.  ಬೇರೆಯವರ ತಪ್ಪುಗಳನ್ನು ಹುಡುಕುವ ಕೆಲಸ ಮಾಡಬಾರದು.  ನಾವು ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗಬೇಕಿದೆ.   ಬದುಕಿನ ಕೊನೆಯ ತನಕ ಕಲಿಕೆ ನಿರಂತರವಾಗಿರುವಂಥಹದ್ದು . ಮಸದಾರ್  ಶಿಕ್ಷಣ ಸಂಸ್ಥೆ ಸೇವೆಗಾಗಿ ಇರುವಂಥಹದ್ದು. ಇದರ ಬಗ್ಗೆ ಯಾವುದೇ ಅನುಮಾನಗಳು ಬೇಡ. ಇವರ ಜೊತೆ ನಾವೆಲ್ಲ ಸಾಥ್ ನೀಡಬೇಕಿದೆ ಎಂದು ಹೇಳಿದರು.

ವೇದಿಕೆಯ ಮೇಲೆ ಉಲೆಮಾಗಳು, ಗುರುಗಳು ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error