ಬಜೆಟ್ ಯುವಜನ ವಿರೋಧಿ, ರೈತ ವಿರೋಧಿ, ಜನಸಾಮಾನ್ಯರ ವಿರೋಧಿ -ಸಿ.ವಿ ಚಂದ್ರಶೇಖರ

ಜೆಡಿಎಸ್ ಕಾಂಗ್ರೆಸ್ ಅಪವಿತ್ರ ಮೈತ್ರಿ ಸರ್ಕಾರದ ಮುಖ್ಯಮಂತ್ರಿಗಳು ಮಂಡಿಸಿರುವ ಬಜೆಟ್ ಯುವಜನ ವಿರೋಧಿ, ರೈತ ವಿರೋಧಿ, ಜನಸಾಮಾನ್ಯರ ವಿರೋಧಿ ಬಜೆಟ್ ಇದಾಗಿದ್ದು ರಾಜ್ಯದ ಜನತೆಯ ನಿರೀಕ್ಷೆಯನ್ನು ಸಂಪೂರ್ಣ ಹುಸಿಗೊಳಿಸಿದೆ ಹಾಗೂ ಅಭಿವೃದ್ಧಿಪರ ಯೋಜನೆಗಳನ್ನು ಘೋಷಣೆ ಮಾಡಿಲ್ಲ, ಘೋಷಣೆಯಾಗಿರುವ ಯೋಜನೆಗಳು ಕೂಡ ಈ ಹಿಂದಿನ ಬಜೆಟ್ ನಲ್ಲಿನ ಯೋಜನೆಗಳಂತೆ ಸಮರ್ಪಕ ಜಾರಿಗೊಳ್ಳದೆ ಜನತೆಯ ಮೂಗಿಗೆ ತುಪ್ಪ ಸವರುವ ಪ್ರಯತ್ನವನ್ನು ಮುಖ್ಯಮಂತ್ರಿಗಳು ಮಾಡುತ್ತಾರೆ.
ತೀರಾ ಸಂಕಷ್ಟದಲ್ಲಿರುವ ರೈತರ ಕುರಿತು, ಬರ ಪರಿಹಾರದ ಕುರಿತು ಕೇಂದ್ರದತ್ತ ಬೆರಳು ತೋರಿಸುತ್ತಾ ತಮ್ಮ ಅಧಿಕಾರ ಮತ್ತು ಶಾಸಕರನ್ನು ಉಳಿಸಿಕೊಳ್ಳಲು ಎಣಗಾಡುತ್ತಾ ರಾಜ್ಯದ ಅಭಿವೃದ್ಧಿಯನ್ನು ಅಧೋಗತಿಗೆ ತಳ್ಳುತ್ತಿರುವ ಬಹುಮತವಿಲ್ಲದ ಅತೃಪ್ತರ ಅತಂತ್ರ ಸರ್ಕಾರದ ಈ ಬಜೆಟ್ ಜನಸಾಮಾನ್ಯರ ವಿರೋಧಿ ಬಜೆಟ್ ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾದ  ಸಿ.ವಿ ಚಂದ್ರಶೇಖರ  ಪ್ರತಿಕ್ರಿಯೆ ನೀಡಿದರು..

Please follow and like us:
error