ಬಂದೋಬಸ್ತಿನಲ್ಲಿ ಗರ್ಭಿಣಿ ಪೇದೆ : ಮೇಲಾಧಿಕಾರಿಗಳೇ ಇತ್ತ ಗಮನ ಕೊಡಿ..

ಕನ್ನಡನೆಟ್ ನ್ಯೂಸ್ : ಲಾಕಡೌನ್ ಸಂದರ್ಭದಲ್ಲಿ ರಾಜ್ಯದ ಹಲವೆಡೆ ಪೋಲಿಸರ ವರ್ತನೆಗೆ ಟೀಕೆಗಳು ಬರುತ್ತಿರುವ ಸಂದರ್ಭದಲ್ಲಿಯೇ , ಅವರ ಕರ್ತವ್ಯ ನಿಷ್ಠೆಗೂ ಸಲಾಂ ಹೇಳಲೇಬೇಕಿದೆ. 14 ದಿನ ಕಠಿಣ ಸೆಮಿಲಾಕ್ ಡೌನ್ ಹಿನ್ನೆಲೆ ಕೊಪ್ಪಳದಲ್ಲಿ ಸಿಂಪಿಲಿಂಗಣ್ಣ ರಸ್ತೆ, ಭಾಗ್ಯನಗರ, ಜವಾಹರ ರಸ್ತೆ, ಐ ಬಿ ರಸ್ತೆ ಸೆರಿದಂತೆ ಬ್ಯಾರಿಕೇಡ್ ಹಾಕಿ ಜನರು ಹೊರಗಡೆ ಓಡಾಡದಂತೆ ಪೊಲೀಸರು ಬಂದೋಬಸ್ತ್ ಮಾಡುತ್ತಿದ್ದಾರೆ. ಇದರಲ್ಲಿ ಗರ್ಭಿಣಿ ಪೇದೆಯೊಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗರ್ಭಿಣಿ ಶೋಭಾ ಪೊಲೀಸ್ ಪೇದೆ ಅವರು ಟೆನ್ಷನ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.‌ಕಳೆದ ಕ್ಲೋಸ್ ಡೌನ್ ನಲ್ಲೂ‌ ಬಿಸಿಲಿನಲ್ಲೂ ಕಾರ್ಯನಿರ್ವಹಿಸಿದ್ದಾರೆ. ಸರ್ಕಾರ ಗರ್ಭಿಣಿಯರಿಗೆ ಕೆಲಸಕ್ಕೆ ಒಂದಿಷ್ಟು ವಿನಾಯಿತಿ ನೀಡಿದೆ, ಸಾಧ್ಯಾವಾದ್ರೆ ಕಚೇರಿಯಲ್ಲಿ ಕೆಲಸ ನೀಡಲು ತಿಳಿಸಲಾಗಿದೆ. ಆದ್ರೆ ಶೋಭ ಅವರು ಗರ್ಭಿಣಿಯಿದ್ದರೂ ಲಾಕ್ ಡೌನ್ ಬಂದೋಬಸ್ತ್ ಗೆ ಹಾಕಲಾಗಿದೆ. ಜನರು ಓಡಾಡುವುದರಿಂದ ಬ್ಯಾರಿಕೇಡ್ ಹಾಕುವುದು ತೆಗೆಯುವುದು ಜನರನ್ನು ಮನವಿ ಮಾಡುವುದು ಅವರನ್ನು ಕಂಟ್ರೋಲ್ ಮಾಡುವದರಲ್ಲಿ ಸುಸ್ತಾಗುತ್ತಾರೆ. ಅಗತ್ಯ ವಸ್ತು, ಆಸ್ಪತ್ರೆಗೆ ಬರುವ ಜನರು ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿಯುತ್ತಾರೆ. ಅದರಲ್ಲೂ ಶೋಭಾ ಅವರು ಜನರಿಗೆ ಓಡಾಡಲು ಎಷ್ಟೆ ಮನವಿ ಮಾಡಿದ್ರೂ ಕೇಳುವುದಿಲ್ಲ. ಜಿಲ್ಲೆಯ ಡಿವೈಎಸ್ಪಿ ಕೂಡ ಮಹಿಳಾ ಅಧಿಕಾರಿಯಾಗಿದ್ದು, ಕೋವಿಡ್ ಸಂದರ್ಭದಲ್ಲಿ ಗರ್ಭಿಣಿ ಪೇದೆ ಶೋಭಾ ಅವರನ್ನು ಬಂದೋಬಸ್ತ್ ಗೆ ಹಾಕಿರುವುದು ಸರಿನಾ? ಎನ್ನುವುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ. ಅದರಲ್ಲೂ ಬಿಸಿಲಿನಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಡ್ಯೂಟಿ ಹಾಕಿರುವುದು ಎಷ್ಟು ಸರಿ? ಕೆಲ ಮಹಿಳಾ ಪೇದೆಗಳೂ ಶೋಭಾ ಅವರ ವಿಷಯದಲ್ಲಿ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಇತ್ತ ಗಮನಿಸಬೇಕಾಗಿದೆ.

Please follow and like us:
error