ಪ್ಲಾಸ್ಮಾ ದಾನಿಗಳಿಗೆ 5 ಸಾವಿರ ಆರೈಕೆ ಭತ್ಯೆ ನೀಡಲು ನಿರ್ಧಾರ

ಬೆಂಗಳೂರು : ಪ್ಲಾಸ್ಮಾ ದಾನಿಗಳಿಗೆ 5 ಸಾವಿರ ಆರೈಕೆ ಭತ್ಯೆ ನೀಡಲು ನಿರ್ಧರಿಸಲಾಗಿದೆ ಅದರ ಮಾಹಿತಿ ಇಲ್ಲಿದೆ ಓದಿ

ಪ್ರಸ್ತಾವನೆ : ಮೇಲೆ ಓದಲಾದ ಪತ್ರದಲ್ಲಿ ದಿನಾಂಕ : 30.6.2020 ರಂದು ಕೋವಿಡ್ -19 ಗೆ ಸಂಬಂಧಿಸಿದ ಮಾನವ ಶಕ್ತಿ ಮತ್ತು ತರಬೇತಿ ಕಾರ್ಯಪಡೆಯ ತಜ್ಞರ ಸಮಿತಿಯ ಸಭೆ ನಡೆಸಿದ್ದು , ಸದರಿ ಸಭಯ , ಕೋವಿಡ್ -19 ಸೋಂಕಿನಿಂದ ಚೇತರಿಸಿಕೊಂಡವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ 14 ರಿಂದ 28 ದಿನಗಳೊಳಗಾಗಿ ಸಕ್ರಿಯ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಪ್ಲಾಸ್ಮಾ ದಾನ ಮಾಡಿದ ಅಂತಹವರಿಗೆ ಗುಣಮಟ್ಟದ ಆಹಾರ ವೆಚ್ಚವಾಗಿ ರೂ .5000.00 ( ಐದು ಸಾವಿರ ) ಗಳವರೆಗೂ ನೀಡಬಹುದೆಂದು ಶಿಫಾರಸ್ಸು ಮಾಡಿರುತ್ತಾರೆ , ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ ಸರ್ಕಾರದ ಆದೇಶ ಸ x ಆಕುಕ 240 ಸಿಜಿಎಂ 2020 ಬೆಂಗಳೂರು , ದಿನಾಂಕ : 15.07.2020 ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕೋವಿಡ್ -19 ಸೋಕಿನಿಂದ ಗುಣಮುಖರಾದವರು ಆಸ್ಮತ್ರೆಯಿಂದ ಬಿಡುಗಡೆ ಹೊಂದಿದ 14 ರಿಂದ 28 ದಿನಗಳೊಳಗಾಗಿ ಸಕ್ರಿಯ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಪ್ರಾಸ್ಮಾ ದಾನ ಮಾಡಿದಲ್ಲಿ ಅವರಿಗೆ ಆರೈಕೆ ಭತ್ಯೆಯಾಗಿ ರೂ .5000 / – ( ಐದು ಸಾವಿರ ರೂಪಾಯಿಗಳು ಮಾತ್ರ ) ಗಳನ್ನು ನೀಡಲು ಕೆಳಕಂಡ ಪರತ್ತುಗಳಿಗೊಳಪಡಿಸಿ ಅನುಮೋದನೆ ನೀಡಿದೆ .

Please follow and like us:
error