ಪ್ರೀತಿಸಿ ಮದುವೆಯಾದ ಪ್ರೇಮಿಗಳು: ನಾಲ್ವರನ್ನು ಕೊಂದು ಹಾಕಿದ ಸಂಬಂಧಿಕರು

ರಾಯಚೂರು : ಒಂದೆಡೆ ಕರೋನಾದಿಂದ ಜನ ಕಂಗಾಲಾಗಿದ್ದಾರೆ. ಸಾವಿನ ಸಂಖ್ಯೆಯೂ ಮುಂದುವರೆಯುತ್ತಲೇ ಇದೆ ಇದೇ ಸಂದರ್ಭದಲ್ಲಿ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವ ಘಟನೆ ಸಿಂದನೂರಿನಲ್ಲಿ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದಕ್ಕೆ ಸಂಬಂದಿಕರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ನಾಲ್ವರ ಹತ್ಯೆಯಾಗಿದೆ.

ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವತಿ ಸಂಬಂಧಿಕರಿಂದ ನಾಲ್ವರು ಹತ್ಯೆಗೀಡಾಗಿದ್ದಾರೆ. ಸಿಂಧನೂರಿನ ಸುಕಾಲಪೇಟೆಯಲ್ಲಿ ಘಟನೆ. ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆಗೊಳಗಾಗಿದ್ದಾರೆ.ನಾಗರಾಜ, ಹನುಮೇಶ, ಸುಶೀಲಮ್ಮ ಹಾಗೂ ಶ್ರೀದೇವಿ ಹತ್ಯೆಗೀಡಾದ ದುರ್ದೈವಿಗಳು.ಇನ್ನಿಬ್ಬರು ಮಹಿಳೆಯರಿಗೆ ಗಂಭೀರ ಗಾಯಗೊಂಡಿದ್ದು ಅವರನ್ನಹ ಆಸ್ಪತ್ರೆಗೆ ಸೇರಿಸಲಾಗಿದೆ.ಕಳೆದ ಐದು ತಿಂಗಳ ಹಿಂದೆ ಒಂದೇ ಕೋಮಿನ ಯುವಕ ಯುವತಿ ಪ್ರೀತಿಸಿ ಮದುವೆಯಾಗಿದ್ರು.ಮೌನೇಶ ಹಾಗೂ ಮಂಜುಳಾ ಪ್ರೀತಿಸಿ ಮದುವೆಯಾಗಿದ್ರು ಮದುವೆಗೆ ಯುವತಿಯ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು ವಿರೋಧದ ನಡುವೆಯೂ ಮದುವೆಯಾಗಿದ್ದರು. ಇಂದು ಬೆಳಗ್ಗೆ ಯಿಂದಲೆ ಎರಡೂ ಕುಟುಂಬಗಳ ಮಧ್ಯೆ ಗಲಾಟೆ  ಆರಂಭವಾಗಿತ್ತು . ಗಲಾಟೆ ವಿಕೋಪಕ್ಕೆ ತಿರುಗಿ ಯುವತಿಯ ಮನೆಯವರಿಂದ ನಾಲ್ವರ ಹತ್ಯೆಯಾಗಿದೆ. ಜೀವಭಯದಿಂದ ಪೋಲೀಸ್ ಠಾಣೆಗೆ ಹೋಗಿದ್ದ ಪ್ರೀತಿಸಿ ಮದುವೆಯಾಗಿದ್ದ ಯುವಕ ಯುವತಿ ಸೇಪಾಗಿದ್ದಾರೆ ಅಂಬಣ್ಣ ಹಾಗೂ ಪಕ್ಕೀರಪ್ಪ ಎನ್ನುವವರಿಂದ ಕೃತ್ಯ ನಡೆದಿದ್ದು ಅವರನ್ನು ಬಂಧಿಸಲಾಗಿದೆ.

Please follow and like us:
error