ಪ್ರಸ್ತುತ ದಿನಮಾನಗಳಲ್ಲಿ ತಂತ್ರಜ್ಞಾನ ಬಳಕೆಯ ಅಗತ್ಯವಿದೆ: ಸುರೇಶಕುಮಾರ

ಕೊಪ್ಪಳ: ಪ್ರಸ್ತುತ ದಿನಮಾನಗಳಲ್ಲಿ ಅನೇಕ ಕ್ಷೇತ್ರಗಳಲ್ಲಿ ಬದಲಾವಣೆ ಎಂಬುದು ಬಹಳ ವೇಗವಾಗಿ ಆಗುತ್ತಿರುವುದರಿಂದ ಬದಲಾವಣೆ ತಕ್ಕಂತೆ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾದರೆ ನಾವು ಕೂಡಾ ತಂತ್ರಜ್ಞಾನವನ್ನು ಬಳಿಸಿಕೊಳ್ಳುವ ಅಗತ್ಯವಿದೆ ಎಂದು ಶಿಕ್ಷಣ ಸಚಿವರಾದ ಸುರೇಶಕುಮಾರ ಹೇಳಿದರು.
ಅವರು ಬೆಂಗಳೂರಿನ ನಿವಾಸದಲ್ಲಿ ವಿಕಲಚೇತನ ನೌಕರರ ಸಂಘವು ಹಮ್ಮಿಕೊಂಡಿದ್ದ ಸಂಘದ ವೆಬ್ ಸೈಟ್ ಉದ್ಘಾಟನೆ ಮಾಡಿ ಮಾತನಾಡಿ,ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಒಂದು ಆದೇಶವನ್ನು ಪಡೆಯಬೇಕಾದರೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತು.ಆದರೆ ಇಂದು ತಂತ್ರಜ್ಞಾನದ ಬೆಳವಣಿಗೆಯಿಂದ ಪ್ರಪಂಚದ ಯಾವುದೇ ಸ್ಥಳದಲ್ಲಿ ನಡೆದ ಕಾರ್ಯಕ್ರಮವನ್ನು ಕ್ಷಣ ಮಾತ್ರದಲ್ಲಿ ನೊಡಬಹುದು.ಅದರಂತೆ ವಿಕಲಚೇತನ ನೌಕರರಿಗೆ ಸಂಬAಧಿಸಿದ ಮಾಹಿತಿಗಳು ಜೊತೆಗೆ ಆದೇಶಗಳನ್ನು ಒಳಗೊಂಡ ಎಲ್ಲಾ ಒಳಗೊಂಡ ವೆಬ್ ಸೈಟ್ ರಚನೆ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ.ಎಲ್ಲಾ ವಿಕಲಚೇತನ ನೌಕರರಿಗೆ ಅನೂಕೂಲವಾಗುತ್ತದೆ.ಅದರ ಸಂರ್ಪಕವಾದ ಬಳಕೆಯಾಗಲಿ ಜೊತೆಗೆ ವಿಕಲಚೇತನ ಶಿಕ್ಷಕರ ಬೇಡಿಕೆಗಳು ಕೂಡಾ ನ್ಯಾಯಯುತವಾಗಿದ್ದು ಅವುಗಳನ್ನು ಕೂಡಾ ಈಡೇರಿಸುವ ಬಗ್ಗೆ ಅಧಿಕಾರಿಗಳ ಜೊತೆಗೆ ಸಭೆ ನಡೆಸುವುದಾಗಿ ಭರವಸೆ ನೀಡಿದರು.
ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಶಿಕ್ಷಕರ ವರ್ಗಾವಣೆಯ ಸಮಯದಲ್ಲಿ ವಿಕಲಚೇತನ ಶಿಕ್ಷಕರಿಗೆ ಅವರ ಅಂಗವೈಲತ್ಯೆ ಸಂಬAಧಿಸಿದ ವೈದ್ಯಕೀಯ ಪ್ರಮಾಣ ಪತ್ರವನ್ನು ಪ್ರತಿ ಬಾರಿ ತರಲು ಸೂಚಿಸುವ ಕ್ರಮವನ್ನು ಕೈಬೀಡಬೇಕು.ಈಗಾಗಲೇ ನೇಮಕಾತಿ ಸಮಯದಲ್ಲಿ ವೈದೈಕೀಯ ತಪಾಸಣೆ ಮಾಡಿದ ನಂತರವೇ ನೇಮಕಾತಿ ಆದೇಶವನ್ನು ನೀಡುವುದರ ಜೊತೆಗೆ ವಿಕಲಚೇತನರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಕೊಡುತ್ತಿರುವಾಗ ಯಾಕೇ ಪದೇ ಪದೇ ವೈಧ್ಯಕೀಯ ಪ್ರಮಾಣಪತ್ರವನ್ನು ತರಬೇಕು ಎಂಬುದು ಯಕ್ಷ ಪ್ರಶ್ನೆಯಾಗಿದೆ.ಈ ವಿಷಯದ ಈ ಹಿಂದೆ ಹಲವು ಶಿಕ್ಷಣ ಸಚಿವರಿಗೂ ಮನವಿ ಮಾಡಿದರು ಕೂಡಾ ಯಾವುದೇ ಪ್ರಯೋಜವಾಗಿಲ್ಲ.ಕೂಡಲೇ ಪದೇ ಪದೇ ವೈದ್ಯಕೀಯ ಪ್ರಮಾಣ ಪತ್ರ ಕೇಲುವುದನ್ನು ನಿಲ್ಲಿಸಬೇಕು,ಮೂರು ವರ್ಷ ಒಂದು ಕಡೆಯಲ್ಲಿ ಕಾರ್ಯನಿರ್ವಹಿಸಬೇಕು ಎಂಬ ನಿಯಮದಿಂದ ವಿಕಲಚೇತನ ಶಿಕ್ಷಕರಿಗೆ ವಿನಾಯತಿ ನೀಡಬೇಕು,ಘಟಕದ ಹೊರಗೆ ಎರಡು ಬಾರಿ ವರ್ಗಾವಣೆ ಹೊಂದಲು ಅವಕಾಶ ನೀಡಬೇಕು,ಬಡ್ತಿ ನೀಡುವ ಸಮಯದಲ್ಲಿ ವಿಕಲಚೇತನ ಶಿಕ್ಷಕರಿಗೆ ಎ ಮತ್ತು ಬಿ ವಲಯಗಳ ಹುದ್ದೆಗಳನ್ನು ತೊರಿಸಬೇಕು,ಶಿಕ್ಷಣ ಇಲಾಖೆಯಲ್ಲಿ ವಿಕಲಚೇತನ ನೌಕರರಿಗೆ ಇರುವ ಪ್ಲೆಕ್ಸಿ ಸಮಯ ಜಾರಿಗೆ ಮಾಡಬೇಕು,ಯು.ಡಿ.ಐ.ಡಿ.ಕಾರ್ಡ ಹೊಂದಿರುವ ಶಿಕ್ಷಕರಿಗೆ ಪದೇ ಪದೇ ಪ್ರಮಾಣ ಪತ್ರ ಕೇಳಬಾರದು,ಸೇವಾ ಪುಸ್ತಕದಲ್ಲಿ ವಿಕಲಚೇತನರ ಸಂಪೂರ್ಣವಾದ ಮಾಹಿತಿಯನ್ನು ಭರ್ತಿ ಮಾಡಬೇಕು ಎಂದು ಹೇಳಿದರು.
ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಶ್ರೀನಿವಾಸಗೌಡ,ಜಿಲ್ಲಾ ಖಜಾಂಚಿ ಕಾಶಿನಾಥ ಶಿರಿಗೇರಿ ಮುಂತಾದವರು ಹಾಜರಿದ್ದರು.

Please follow and like us:
error