ಪ್ರವಾಹ ಪೀಡಿತರು ಬಿಕ್ಷುಕರಲ್ಲ- ಯತ್ನಾಳ

 ಮತ್ತೆ ಕೇಂದ್ರದ ವಿರುದ್ದ ಹರಿಹಾಯ್ದ ಶಾಸಕ
ಭಾಗಲಕೋಟೆ :  ಪ್ರವಾಹ ಪೀಡಿತರೇನು ಭಿಕ್ಷೆ ಬೇಡುತ್ತಿಲ್ಲ. ಸಂತ್ರಸ್ತರು ಎಲ್ಲರೂ ಅನುಕೂಲಸ್ಥರಿದ್ದಂತವರು. ಏನೋ ದುರ್ದೈವದಿಂದ ಇಂತಹ ಕಷ್ಟ ಅವರಿಗೆ ಬಂದಿದೆ. ನಾವು ಅವರನ್ನು ಭಿಕ್ಷುಕರಂತೆ ನೋಡಬಾರದು. ನೋಡಿದರೆ ಬರುವ ಚುನಾವಣೆಯಲ್ಲಿ ನಮಗೂ ಭಿಕ್ಷೆ ಹಿಡಿಯುವ ಪರಿಸ್ಥಿತಿ ಬರುತ್ತದೆ ಅಂತಾ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕೇಂದ್ರ ಸರ್ಕಾರದ ತೀಕ್ಷ್ಣ ಎಚ್ವರಿಕೆ ನೀಡಿದರು.

ಪ್ರವಾಹ ಪರಿಹಾರ ಕೇಂದ್ರದ  ನಿರ್ಲಕ್ಷ್ಯ ವಿಚಾರವಾಗಿ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ಮಾತನಾಡಿದ ಯತ್ನಾಳ್, ಕೇಂದ್ರ ಸರಕಾರದ ವಿರುದ್ದ ಮತ್ತೆ ಅಸಮಾಧಾನದ ಜೊತೆಗೆ ಎಚ್ಚರಿಕೆ ನೀಡಿದ್ರು. ‌

ಎಲ್ಲಿ ಜನ ಕಷ್ಟದಲ್ಲಿದ್ದಾರೊ, ಎಲ್ಲಿ ಪ್ರವಾಹಪೀಡಿತರಿದ್ದಾರೊ ಅವರಿಗೆ ಸೂಕ್ತ ಪರಿಹಾರ ಕೊಡಬೇಕು. ಪ್ರವಾಹಪೀಡಿತರಿಗೆ ಸೂಕ್ತ ಪರಿಹಾರ ಕೊಡದಿರುವುದಕ್ಕೆ ಜನರಲ್ಲಿ ಸಿಟ್ಟಿದೆ. ನಾಲ್ಕುನೂರು ಕೋಟಿ ರೂಪಾಯಿಯನ್ನು ನಾಲ್ಕೆ ದಿನಕ್ಕೆ ಬಿಹಾರಕ್ಕೆ ಕೊಡುತ್ತೀರಿ. ೨೫ ಸಂಸದರನ್ನು ಕೊಟ್ಟ ಕರ್ನಾಟಕಕ್ಕೆ ೬೫ ದಿನ ಆದರೂ ಪರಿಹಾರ ಕೊಡೋದಿಲ್ಲ. ಪ್ರವಾಹದ ನಿರ್ಲಕ್ಷ್ಯದ ಬಗೆಗಿನ  ತಮ್ಮೊಳಗಿನ ಭೇಗುಧಿಯನ್ನು ಕೊಲ್ಹಾಪುರ ಸಾಂಗ್ಲಿ ಚುನಾವಣೆಯಲ್ಲಿ ಜನ ಹೊರಹಾಕಿದ್ದಾರೆ. ಆ ಪರಿಸ್ಥಿತಿ ಕರ್ನಾಟಕದಲ್ಲಿ ಮುಂದುವರೆಯಬಾರದು ಅಂತಾ ಎಚ್ವರಿಕೆ ನೀಡಿದ್ರು. ಜೊತೆಗೆ ರಾಜ್ಯ ಪ್ರವಾಹ ಪರಿಸ್ಥಿತಿ ಉಸ್ತುವಾರಿಗಾಗಿ ಕೇಂದ್ರದ ಒಬ್ಬ ಮಂತ್ರಿಯನ್ನು ನೇಮಿಸಬೇಕು. ಆ ಮೂಲಕ ಪ್ರವಾಹಪೀಡಿರಗೆ ಯೋಗ್ಯ ಪರಿಹಾರ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಅಂತಾ ಆಗ್ರಹಿಸಿದರು. ಮಹಾರಾಷ್ಟ್ರ ಹರಿಯಾಣಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ವಿಚಾರ, ಒಟ್ಟಾರೆ ಜನರ ಭಾವನೆಯೆ ಬೇರೆ ಇದೆ. ಜನ ಏನು ತೀರ್ಪು ಕೊಟ್ಟಿದ್ದಾರೆ, ಇದರ‌ ಮೇಲೆ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನರ ಭಾವನೆ ಏನಿದೆ ಅಂತ ತಿಳಿದುಕೊಳ್ಳಬೇಕು. ರಾಜ್ಯದಲ್ಲಿ ಯಡಿಯೂರಪ್ಪ ನಾಯಕತ್ವದಿಂದಲೇ ನಾವು ೧೦೪ ಸ್ಥಾನ ಗೆದ್ದಿದ್ದೇವೆ. ಮಹಾರಾಷ್ಟ್ರದಲ್ಲಿ  ನಾವೆಷ್ಟು ಸ್ಥಾನದಲ್ಲಿ ಗೆದ್ದಿದ್ದೇವೆ,

ಶಿವಸೇನೆ ಎಷ್ಟು ಗೆದ್ದಿದೆ?ತಿಳಿದುಕೊಳ್ಳಬೇಕು. ಚುನಾವಣೆಯಲ್ಲಿ ಸ್ಥಳೀಯ ನಾಯಕತ್ವ ಬೇಕು. ಹೇಗೆ ದೇಶಕ್ಕೆ ಮೋದಿ,ಅಮಿತ್ ಶಾ ಇದಾರೆ. ಅದೇ ರೀತಿ ರಾಜ್ಯಕ್ಕೂ,ಜಿಲ್ಲೆಗೂ ಸ್ಥಳೀಯ ನಾಯಕತ್ವ ಬೇಕು. ಅದರ‌ ಮೇಲೆ ನಾವು ಚುನಾವಣೆಗೆ ಹೋಗಬೇಕು. ನಾವೇನು‌ ಬೇಕಾದ ನಿರ್ಣಯ ಕೈಗೊಂಡರೆ  ಜನ ಅದನ್ನು ಒಪ್ಪಬೇಕು ಅಂತೇನಿಲ್ಲ. ಎರಡು ರಾಜ್ಯದ ಚುನಾವಣೆ ನೋಡಿಕೊಂಡು ರಾಜ್ಯ ಬಿಜೆಪಿಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಉಪ ಚುನಾವಣೆಯೊಳಗೆ ಸೂಕ್ತ ನಿರ್ಣಯ ಕೈಗೊಳ್ಳಬೇಕು ಅಂತಾ ಒತ್ತಾಯಿಸಿದರು.

Please follow and like us:
error