ಪ್ರತಿ ದಿನ ರಾತ್ರಿ 9 ರಿಂದ ಮಾರನೆ ದಿನದ ಬೆಳಿಗ್ಗೆ 6 ರವರೆಗೆ ಕರ್ಪ್ಯೂ

ರಾತ್ರಿ ಕರ್ಪ್ಯೂ : ಪ್ರತಿ ದಿನ ರಾತ್ರಿ 9 ರಿಂದ ಮಾರನೆ ದಿನದ ಬೆಳಿಗ್ಗೆ 6 ರವರೆಗೆ ಕರ್ಪ್ಯೂ ಇರುತ್ತದೆ . ಈ ಸಂದರ್ಭದಲ್ಲಿ ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ . ವಾರಾಂತ್ಯದಲ್ಲಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ರವರೆಗೆ ಕರ್ಪ್ಯೂ ಇರುತ್ತದೆ . ಏನೆಲ್ಲ ಬಂದ್ : * ಶಾಲೆಗಳು , ಕಾಲೇಜುಗಳು , ಕೋಚಿಂಗ್ ಕೇಂದ್ರಗಳು . ( ಆನ್‌ಲೈನ್ , ದೂರಶಿಕ್ಷಣ ಮುಂದುವರೆಸಬಹುದು ) * ಸಿನಿಮಾ ಹಾಲ್‌ಗಳು , ಶಾಪಿಂಗ್ ಮಾಲ್ , ಜಿಮ್ಯಾಷಿಯಂ , ಯೋಗ ಕೇಂದ್ರಗಳು , ಸ್ಪಾ , ಕ್ರೀಡಾ ಕಾಂಪ್ಲೆಕ್ಸ್‌ಗಳು , ಸ್ಟೇಡಿಯಂ , ಈಜುಕೊಳ , ಮನರಂಜನಾ ಅಮ್ಯೂಸ್‌ಮೆಂಟ್ ಪಾರ್ಕ್ , ಬಾರ್ , ಆಡಿಟೋರಿಯಂಗಳು ಮತ್ತಿತರ ಸಮಾವೇಶದ ತಾಣಗಳು

ಎಲ್ಲ ಸಾಮಾಜಿಕ , ರಾಜಕೀಯ , ಕ್ರೀಡಾ , ಮನರಂಜನೆ , ಶೈಕ್ಷಣಿಕ , ಸಾಂಸ್ಕೃತಿಕ , ಧಾರ್ಮಿಕ ಸಮಾವೇಶಗಳು * ಆಟದ ಮೈದಾನದಲ್ಲಿ ಯಾವುದೇ ಕ್ರೀಡಾ ಕೂಟಗಳು ಇದ್ದರೆ ಪ್ರೇಕ್ಷಕರಿಗೆ ಅವಕಾಶ ಇಲ್ಲ . ಆದರೆ , ಕ್ರೀಡಾಳುಗಳ ತರಬೇತಿಗೆ ಅವಕಾಶ ಇದೆ * ಎಲ್ಲಾ ಧಾರ್ಮಿಕ ಸ್ಥಳಗಳು , ಪೂಜಾ , ಪ್ರಾರ್ಥನಾ ಮಂದಿರಗಳಿಗೆ ಭಕ್ತರಿಗೆ ಅವಕಾಶ ಇಲ್ಲ . ಆದರೆ , ಪೂಜಾ ಕೈಂಕರ್ಯ ನಡೆಸಲು ಅರ್ಚಕರಿಗೆ ಅವಕಾಶ ಇದೆ . ಆಯಾ ಧರ್ಮಗಳ ಧಾರ್ಮಿಕ ವಿಧಿ – ವಿಧಾನ ನಡೆಸಲು ಅವಕಾಶ ಇದೆ . * ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್ ಮಾತ್ರ ಒಯ್ಯಲು ಅವಕಾಶ ಇದೆ . * ಮದುವೆ ಸಮಾರಂಭಕ್ಕೆ 50 ಕ್ಕೆ ಜನರಿಗೆ ಮಿತಿ , ಶವ ಸಂಸ್ಕಾರ , ಅಂತಿಮ ದರ್ಶನಕ್ಕೆ 20 ಜನರಿಗಷ್ಟೇ ಅವಕಾಶ .

Please follow and like us:
error