ಪ್ರಚೋದನಕಾರಿ ಭಾಷಣ ಸೋಮಶೇಖರ ರೆಡ್ಡಿ ವಿರುದ್ದ ದೂರು ದಾಖಲು

ಪ್ರಚೋದನಕಾರಿ ಭಾಷಣ ಹಿನ್ನೆಲೆ ದೂರು ನೀಡಿದ ಕಾಂಗ್ರೆಸ್.  ಪೌರತ್ವ ಕಾಯ್ದೆ ಪರ ಮಾತನಾಡಲು ಹೋಗಿ ನಾಲಿಗೆ ಹರಿಬಿಟ್ಟಿದ್ದ ಶಾಸಕ

ಬಳ್ಳಾರಿ : NRC ಮತ್ತು CAA ಕಾಯ್ದೆ ಬೆಂಬಲಿಸಿ ನಡೆದ ಬಹಿರಂಗ ಸಮಾವೇಶದಲ್ಲಿ ಪ್ರಚೋನಕಾರಿ ಭಾಷಣ ಮಾಡಿದ ಬಳ್ಳಾರಿ ಶಾಸಕ ಜಿ. ಸೋಮ ಶೇಖರ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಗಾಂಧಿನಗರ ಠಾಣೆಯಲ್ಲಿ  ದೂರು ನೀಡಿದರು.
ದೇಶಭಕ್ತ ನಾಗರೀಕ ವೇದಿಕೆಯಿಂದ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಭಾಷಣ ಮಾಡಿದ ಜಿ.ಸೋಮಶೇಖರ ರೆಡ್ಡಿ, ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಕೀಳು ಶಬ್ದಗಳನ್ನು ಬಳಸಿದ್ರು. ಅಲ್ಲದೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಒಪ್ಪದವರು, ವಿರೋಧಿಸುವವರು ದೇಶವನ್ನು ಬಿಟ್ಟು ಹೋಗಿ ಎಂದು ಪ್ರಚೋದನಾಕಾರಿ ಮಾತುಗಳನ್ನಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಪ್ರಚಾರ ಸಮಿತಿ ಅಧ್ಯಕ್ಷ ಜೆ.ಎಸ್.ಆಂಜನೇಯಲು ದೂರ ದಾಖಲಿಸಿದ್ದಾರೆ. ನಂತರ ಮಾತನಾಡಿದ ಅವರು, ಈ ದೇಶ ಅವರಪ್ಪನ ಆಸ್ತಿನಾ ಎಂದು ವಾಗ್ದಾಳಿ ನಡೆಸಿದ್ರು. ಅಲ್ಲದೇ  ನಿಮ್ಮ ಬೆದರಿಕೆಗೆ ಕಾಂಗ್ರೆಸ್ ಕೈ ಕಟ್ಟಿ ಕುಳಿತಿಲ್ಲ. ನೀವು ಸಹ ಮೈ ಮೇಲೆ ಎಚ್ಚರಿಕೆಯಿಟ್ಟು ಕೊಂಡು ಮಾತನಾಡಬೇಕು. ಹೆಚ್ಚು ಕಮ್ಮಿಯಾದರೆ, ನಿಮ್ಮ ಮನೆ ತೂರಿ ಪ್ರತಿಭಟನೆ ಮಾಡುತ್ತೇವೆ ಎಂದು  ಶಾಸಕ ಸೋಮಶೇಖರ ರೆಡ್ಡಿಗೆ ತಿರುಗೇಟು ನೀಡಿದರು. ಅಲ್ಲದೇ ಸೋಮಶೇಖರ ರೆಡ್ಡಿ ವಿರುದ್ಧ ದೇಶ ದ್ರೋಹಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ರು.

Please follow and like us:
error