ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಾನ್ಪಡೆಯವರಿಗೆ ನುಡಿನಮನ

ಕೊಪ್ಪಳ ನ್ಯೂಜ್ : ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ, ಎಡಪಂಥಿಯ ನಾಯಕ ಕಾಮ್ರೇಡ್ ದಿ: ಮಾರುತಿ ಮಾನ್ಪಡೆಯವರ ಗೌರವ ಸ್ಮರಣೆ ಸಭೆ ನಡೆಯಿತು.

ನಿವೃತ್ತ ಪ್ರಿನ್ಸಿಪಾಲರು ಮತ್ತು ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ, ಮಾನ್ಪಡೆಯವರು ಮಹಾನ್ ಪಡೆಯನ್ನು ಕಟ್ಟಿಕೊಂಡು ಹೋರಾಡಿದರು.

ದೇಶದಲ್ಲಿ ಐಕ್ಯತಾ ಚಳವಳಿ ಬಲಿಷ್ಠಗೊಳ್ಳುವ ಸಂದರ್ಭದಲ್ಲಿ ಮಾನಪಡೆಯವರು ನಮ್ಮಗಲಿದ್ದಾರೆ.

ಕಳೆದ ಸಪ್ಟೆಂಬರ್ 21 ರಿಂದ 28 ರವರೆಗೆ ಬೆಂಗಳೂರಿನಲ್ಲಿ ನಡೆದ ರೈತರ ಐಕ್ಯತಾ ಹೋರಾಟ ದುಡಿಯುವ ಜನರಿಗೆ ಒಳ್ಳೆಯ ಸಂದೇಶವನ್ನು ಕೊಟ್ಟಿತ್ತು.

ನಿರುದ್ಯೋಗ, ಬಡತನ, ರೈತರ ಆತ್ಮಹತ್ಯೆಯ ಅಜಂಡಗಳನ್ನು ಹಿನ್ನೆಲೆಗೆ ತಳ್ಳಲಾಗಿದೆ.

ಕೋಮುವಾದಿ ಶಕ್ತಿಗಳು
ಭಾವನಾತ್ಮಕ ವಿಷಯಗಳನ್ನು ಜನರ ತಲೆಯಲ್ಲಿ ತುಂಬಿ ದೇಶವನ್ನು ಆಳುತ್ತ ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿ ಕಾಯುತ್ತಿದ್ದಾರೆ

ಈ ಸಂದರ್ಭದಲ್ಲಿ ಎಡಪಂಥಿಯ ಹೋರಾಟಗಾರರು ವಿಚಾರಗಳ ಬೇದ ಮರೆತು, ಕೋಮುವಾದಿ ಸರ್ವಾಧಿಕಾರಿ ಸರ್ಕಾರದ ವಿರುದ್ಧ ಹೋರಾಡುತ್ತ ಜನರಿಗೆ ಸರಿಯಾದ ನ್ಯಾಯ ಕೊಡಿಸಬೇಕೆಂದರು.

ಕರ್ನಾಟಕ ರೈತ ಸಂಘ (AIKKS) ರಾಜ್ಯಾಧ್ಯಕ್ಷರಾದ ಡಿ ಹೆಚ್ ಪೂಜಾರ್ ಮಾತನಾಡಿ,

ಆಸ್ತಿ ಗಳಿಕೆ ಅಧಿಕಾರದ ಸ್ವಾರ್ಥ, ಕೇವಲ ಕುಟುಂಬ ನಿರ್ವಹಣಿಯಲ್ಲಿ ತೊಡಗಿಕೊಂಡು ಸತ್ತವರ ಸಾವಿನ ಭಾರ, ಹಕ್ಕಿಯ ಪುಕ್ಕದಷ್ಟಾಗಿರುತ್ತದೆ.

ದುಡಿಯುವ ಜನರ ವಿಮೋಚನೆಗಾಗಿ ಸಮಾಜದ ಬದಲಾವಣೆಗಾಗಿ ಹೋರಾಡಿ ಮಡಿದವರ ಸಾವಿನ ಭಾರ ಬೆಟ್ಟದಷ್ಟಾಗಿರುತ್ತದೆ.

ದುಡಿಯುವ ಜನರ ಪರವಾಗಿ ರಾಜಿ ರಹಿತವಾಗಿ ಹೋರಾಡುವವರ ಸಂಖ್ಯೆ ಬೆರಳೆಣಿಕೆಯಷ್ಟಿದೆ.

ಹಾಗಾಗಿ ಚಳವಳಿಯನ್ನು ಬಲಿಷ್ಠಗೊಳಿಸುವುದರೊಂದಿಗೆ ನಾಯಕರ ಕೊರತೆಯನ್ನು ತುಂಬಿಕೊಳ್ಳಬೇಕಾಗಿದೆ.

ಜನರ ವಿಮೋಚನೆಯ ಪರ್ಯಾಯ ರಾಜಕೀಯ ವಿಚಾರಗಳನ್ನು ಕೆಳ ಹಂತದಲ್ಲಿ ಕೊಂಡೊಯ್ಯುಬೇಕಾಗಿದೆ.

ಜನ ಸಾಮಾನ್ಯರಿಗೆ, ದೇಶದ ರಾಜಕೀಯ ಆರ್ಥಿಕ ವಿಚಾರಗಳ ತಿಳುವಳಿಕೆ ಮೂಡಿಸುವುದರೊಂದಿಗೆ ಸಾಮಾಜಿಕ ವ್ಯವಸ್ಥೆಯನ್ನು ಬದಲಾಯಿಸಬೇಕಾಗಿದೆ.

ಹೋರಾಟಗಳು ಕೇವಲ ಆರ್ಥಿಕ ಅಜಂಡಗಳಿಗೆ ಸೀಮಿತವಾಗಬಾರದು.

ಚಳವಳಿಯನ್ನು ಸುಧಾರಣಾವಾದಿಂದ, ಸಂಪೂರ್ಣ ಬದಲಾವಣೆಯ ರಾಜ್ಯಾಧಿಕಾರದ ಕಡೆಗೆ ಕೊಂಡೊಯ್ಯದಿದ್ದರೆ, ಕಮ್ಯೂನಿಸ್ಟ್ ಇತಿಹಾಸಕ್ಕೆ ದ್ರೋಹ ಮಾಡಿದಂತಾಗುತ್ತದೆ.

ಮಾರಕಟ್ಟೆ ಪೈಪೋಟಿ, ಭಾರೀ ಲಾಭಕ್ಕಾಗಿ ನಿಸರ್ಗವನ್ನು ವಿಧ್ವಂಸಗೊಳಿಸುವ ಕಾರ್ಪೊರೇಟ್ ಬಂಡವಾಳಿಗರು ಜಗತ್ತಿಗೆ ದೊಡ್ಡ ಅಪಾಯ ತಂದೊಡ್ಡಿದ್ದಾರೆ.

ನೈಸರ್ಗಿಕ ಅಸಮತೋಲನದಿಂದಲೆ ಮರಣಾಂತಿಕ ಕೊರೋನಾ ಮಹಾ ವೈರಸ್ ಜನ್ಮ ತಾಳಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಬಲಿಷ್ಠ ಜನಾಂದೋಲನ ರೂಪಿಸಬೇಕೆಂದು ಕರೆ ಕೊಟ್ಟರು.

ಹಿರಿಯ ಪತ್ರಕರ್ತರು ಮತ್ತು ಬರಹಗಾರಾದ ವಿಠಪ್ಪ ಗೋರಂಟ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಮಾರುತಿ ಮಾನ್ಪಡೆಯವರ ಹೋರಾಟದ ಸ್ಮರಣೆ ಯ ಈ ದಿನದಂದು ಐಕ್ಯತಾ ಚಳವಳಿಗೆ ದೃಡ ಸಂಕಲ್ಪ ಮಾಡಬೇಕಾಗಿದೆ.

ದಲಿತರ, ರೈತರ, ಕಾರ್ಮಿಕರ ವಿಮೋಚನೆಯ ಸೈದ್ಧಾಂತಿಕ ರಾಜಕೀಯ ಹೋರಾಟವನ್ನು ತೀವ್ರಗೊಳಸಬೇಕಾಗಿದೆ.

ಕಾಶಿಮ್ ಸರ್ದಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಬಸವರಾಜ ಶೀಲವಂತರ, ಗಾಳೆಪ್ಪ ಕಡೆಮನಿ, ಕೆ.ಬಿ.ಗೋನಾಳ, ಹನುಮೇಶ ಕಲ್ಮಂಗಿ, ಶಿವಪ್ಪ ಹಡಪದ್ ಇತರರು ಭಾಗವಹಿದ್ದರು.

Please follow and like us:
error