ಪೋಲಿಸ್ ಜೀಪ್ ನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಿದ್ದರಾಮಯ್ಯ

ಬಾಗಲಕೋಟೆ :  ಬಾದಾಮಿ ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳ ಭೇಟಿಯಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ  ತಮ್ಮ ಇನ್ನೊವಾ ಕಾರನ್ನು ಬಿಟ್ಟು ಪೋಲಿಸ್ ಜೀಪ್ ಹತ್ತಿದರು. 

ಮುಮರೊಡ್ಡಿಕೊಪ್ಪ ಗ್ರಾಮಕ್ಕೆ‌ ಸರಿಯಾದ ರಸ್ತೆ ಇಲ್ಲದ‌ಕಾರಣ  ಹೆಬ್ಬಳ್ಳಿ ಗ್ರಾಮದ ಸಮೀಪ ಮುಮರೊಡ್ಡಿ ಗ್ರಾಮದ ಕ್ರಾಸ ಬಳಿ ವಾಹನ ಬದಲಾಯಿಸಿದರು. ಬೆಂಬಲಿಗರೊಂದಿಗೆ ಪೊಲೀಸ್ ಜೀಪ್ ಹತ್ತಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಮುಮರೊಡ್ಡಿಕೊಪ್ಪ ಗ್ರಾಮಕ್ಕೆ‌ ಸರಿಯಾದ ರಸ್ತೆ  ಅಲ್ಲದೇ ಮಳೆಯಿಂದಾಗಿ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ. ಹೀಗಾಗಿ  ಬೆಂಬಲಿಗರೊಂದಿಗೆ ಪೊಲೀಸ್ ಜೀಪ ಹತ್ತಿ ಗ್ರಾನಗಳಿಗೆ ತೆರಳಿದರು.

Please follow and like us:
error