ಪೋಲಿಸ್ ಎಸ್ಕಾರ್ಟ್ ನಲ್ಲಿ ಬಸ್ ಸಂಚಾರ ಆರಂಭ

ಬೆಂಗಳೂರು : ರಾಜ್ಯದ ವಿವಿದೆಡೆ ಪೋಲಿಸರ ಬೆಂಗಾವಲಿನಲ್ಲಿ ಬಸ್ ಗಳ ಸಂಚಾರ ಆರಂಭವಾಗಿದೆ. ಹಲವೆಡೆ ಕಲ್ಲು ತೂರಾಟದ ಪ್ರಕರಣಗಳು ನಡೆದ ಹಿನ್ನೆಲೆಯಲ್ಲಿ ಪೋಲಿಸರು ಬಸ್ ನಿಲ್ದಾಣಗಳಿಗೆ ಸೂಕ್ತ ಬಂದೋ ಬಸ್ತ ಏರ್ಪಡಿಸಿದ್ದಾರೆ. ಶಿವಮೊಗ್ಗ, ರಾಯಚೂರು, ಭದ್ರಾವತಿ, ಹೊಸಪೇಟೆ ಸೇರಿದಂತೆ ಹಲವೆಡೆ ಪೋಲಿಸರ ಬೆಂಗಾವಲಿನಲ್ಲಿ ಬಸ್ ಗಳ ಸಂಚಾರ ಆರಂಭವಾಗಿವೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಬಸ್ ಗೆ ಕಲ್ಲು ತೂರಿದ ಘಟನೆ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ಬಸ್ ನಿಲ್ದಾಣಗಳಲ್ಲಿ ಬಂದೋಬಸ್ತ್ ಹೆಚ್ಚಿಸಲಾಗಿದೆ. ಇಂದು ಬೆಳಿಗ್ಗೆ ೧೧ ಗಂಟೆಯ ನಂತರ ಪೋಲಿಸರ ಎಸ್ಕಾರ್ಟ ನಲ್ಲಿ ಸಂಚಾರ ಆರಂಭವಾಗಿದೆ.

ಕೊಪ್ಪಳದ ಕೇಂದ್ರಿಯ ಬಸ್ ನಿಲ್ದಾಣದಿಂದ  ಬಸ್ ಗಳು ಹೊರಟಿದ್ದು  ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಡಿಎಸ್ಪಿ ವೆಂಕಟಪ್ಪ ನಾಯಕ್,  ಸಿಪಿಐ ಮಾರುತಿ ಗುಳ್ಳಾರಿ, ಜೆ.ನಿಕ್ಕಂ, ವಿಶ್ವನಾಥ್ ಹಿರೇಗೌಡ್ರ ಅಮರೇಶ ಹುಬ್ಬಳ್ಳಿ ನೇತೃತ್ವ ತಂಡದಿಂದ ಬಂದೋಬಸ್ತ್ ಮಾಡಲಾಗಿದೆ. ಬಸ್ ಗಳಿಗೆ ಕಾದು ಕುಳಿತಿದ್ದ ಜನರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

Please follow and like us:
error