ಪೋಲಿಸ್ ಇಲಾಖೆಯ ಬಾಹುಬಲಿಯ ಭುಜಬಲ ಪರಾಕ್ರಮ

ಕೊಪ್ಪಳ : ಹಿಟ್ನಾಳ್ ಟೋಲ್ ಗೇಟ್ ಬಳಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರನ್ನು ಪೋಲಿಸರು ಬಂದಿಸಿದರು. ಇದರಲ್ಲಿ ವಿಶೇಷ ಎಂದರೆ ಕೊಪ್ಪಳದ ಬಾಹುಬಲಿ ಎಂದೇ ಖ್ಯಾತರಾಗಿರುವ ಗ್ರಾಮೀಣ ಠಾಣೆಯ ಪಿಎಸೈ ನಾಗರಾಜ್ ಮೇಕಾ ಪ್ರತಿಭಟನೆಯಲ್ಲಿ ತೊಡಗಿದ್ದ ಶರಣೇಗೌಡ ಕೆಸರಟ್ಟಿಯನ್ನು ಅನಾಮತ್ತು ಎತ್ತಿಕೊಂಡು ಬಂದು ವಾಹನದಲ್ಲಿ ಹಾಕಿದರು.  ಮಗುವನ್ನು ಎತ್ತಿಕೊಂಡಂತೆ ಅನಾಯಾಸವಾಗಿ ಎತ್ತಿಕೊಂಡು ಬಂದ  ಪಿಎಸೈಯನ್ನು ನೋಡಿ ಎಲ್ಲರೂ ಕಂಗಾಲಾದ್ರೆ, ಸ್ವತಃ ಶರಣೇಗೌಡ ಕಕ್ಕಾಬಿಕ್ಕಿಯಾದರು. ಆಶ್ಚರ್ಯದಿಂದ  ಮಾತೇ ಹೊರಡದಂತಾಗಿದ್ದ ಅವರನ್ನು ಅನಾಯಾಸವಾಗಿ ವಾಹನದಲ್ಲಿ ಹಾಕಿದರು.

Please follow and like us:
error