ಪೋಲಿಸರ ಕಾರ್ಯಾಚರಣೆ : ಅಂತರಾಜ್ಯ ಮನೆಗಳ್ಳರ ಬಂಧನ

ಅಂತರಾಜ್ಯ ಮನೆಗಳ್ಳರ ಬಂಧನ ಖಚಿತ ಬಾತ್ತಿ ಮೇರೆಗೆ ಕೊಪ್ಪಳ ಜಿಲ್ಲಾ ಪೊಲೀಸ್ ರೇಣುಕಾ ಸುಕುಮಾರ ರವರ ಮಾರ್ಗದರ್ಶನ ಮೇರೆಗೆ ಗಂಗಾವತಿಯ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಕಳೆದ ವಾರ ದಿನಾಂಕ : 20 – 05 – 2019 ರಂದು ಮಧ್ಯ ಪ್ರದೇಶದ ಆಲಿರಾಜಪುರ ಜಿಲ್ಲೆಯ ಅಂಬುವಾ ದಲ್ಲಿ ಸ್ಥಳೀಯ ಪೊಲೀಸರ ನೆರವಿನಿಂದ ಚಾಕಚಕ್ಯತೆಯಿಂದ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ ಮಧ್ಯ ಪ್ರದೇಶ ರಾಜ್ಯದ ಕುಖ್ಯಾತ ಅಂತರಾಜ್ಯ ಮನೆಗಳ್ಳರನ್ನು ಬಂಧಿಸಿ ಸದರಿ ಆರೋಫಿತರಿಂದ 15 ಮನೆಗಳ್ಳತನಕ್ಕೆ ಸಂಭಂದಿಸಿದ ಸುಮಾರು 10 ಲಕ್ಷ ಮೌಲ್ಯದ ಬಂಗಾರದ

ಆಭರಣಗಳು , ಬೆಳ್ಳಿಯ ಆಭರಣಗಳು , ನಗದು ಹಣ ಹಾಗೂ ಎರಡು ಮೋಟಾರ ಸೈಕಲಗಳನ್ನು ಜಪ್ತಿಪಡಿಸಿಕೊಂಡು ಶ್ಲಾಘನಿಯ ಕರ್ತವ್ಯ ನಿರ್ವಹಿಸಿರುತ್ತಾರ . ಇತ್ತಿಚೆಗೆ ಗಂಗಾವತಿ ನಗರ , ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯ ಹೊಸಕೇರಾ , ಹಣವಾಳ , ಅಥಣಿ , ಜಮಖಂಡಿ ಮುಂತಾದ ಕಡೆಗಳಲ್ಲಿ ಸರಣಿ ಮನೆಕಳ್ಳತನ ನಡೆದಿದ್ದು ಇರುತ್ತದೆ . ಸದರಿ ಮನೆಗಳ್ಳತನಗಳು ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದ್ದು ಇರುತ್ತದೆ . ಸದರಿ ಸರಣಿ ಮನೆಗಳ್ಳತನಗಳ ಪತ್ತೆಗಾಗಿ ಮಾನ್ಯ ಎಸ್ ವಿ ಕೊಪ್ಪಳ ರವರ ಮಾರ್ಗದರ್ಶನದಲ್ಲಿ ಗಂಗಾವತಿಯ ಡಿ . ಎಸ್ . ಪಿ ರವರಾದ ಬಿ . ಪಿ ಚಂದ್ರಶೇಖರ ರವರ ನೇತೃತ್ವದಲ್ಲಿ ಒಂದು ವಿಶೇಷ ತನಿಖಾ ತಂಡವನ್ನು ರಚಿಸಿದ್ದು , ಸದರಿ ವಿಶೇಷ ತಂಡದಲ್ಲಿ ಗಂಗಾವತಿ ನಗರ ಠಾಣೆಯ ಉದಯರವಿ , ಪಿಐ , ಜೆ ಆರ್ ನಿಕ್ಕಂ ಪಿ ಎ , ಡಿಸಿಐಬಿ , ಘಟಕ ಕೊಪ್ಪಳ : ಪಿಎಸ್‌ಐ ಗಳಾದ ಪ್ರಶಾಂತ ಹೆಚ್ . ಎಸ್ , ವಿನಾಯಕ ಹಾಗೂ ಸಿಬ್ಬಂದಿ ಜನರಾದ ಚಿರಂಜೀವಿ , ಮಂಜಪ್ಪ , ಅನಿಲಕುಮಾರ , ವಿಶ್ವನಾಥ , ಮೈಲಾರಪ್ಪ , ವಿರೇಶ , ಯಮನೂರಪ್ಪ , ದೇವೇಂದ್ರಪ್ಪ , ನರಸಪ್ಪ , ರಾಘವೇಂದ್ರ , ಮಲ್ಲಪ್ಪ , ಮತ್ತು ಪ್ರಸಾದ್ ರವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು . ಸದರಿ ತಂಡವು ವೈಜ್ಞಾನಿಕವಾಗಿ ಹಾಗೂ ವೃತ್ತಿಪರವಾಗಿ ತನಿಖೆ ಕೈಗೊಂಡು ಮನೆಗಳ್ಳತನ ಮಾಡುವ ವೃತ್ತಿ ಪರ ಆರೋಪಿಗಳ ಮೇಲೆ ನಿಗಾ ಪೂರೈಸಿ ದಿನಾಂಕ : 20 – 05 – 2019 ರಂದು ಮಧ್ಯಪ್ರದೇಶದ ರಾಜ್ಯದ ಅಲಿರಾಜಪುರ ಜಿಲ್ಲೆಯ ಅಂಬುವಾದಲ್ಲಿ ಇಬ್ಬರೂ ಆರೋಫಿತರನ್ನು ಹಾಗೂ ಜಬುವಾ ಜಿಲ್ಲೆಯ ಪಾರಾದಲ್ಲಿ ಸ್ಥಳೀಯ ಪೊಲೀಸರ ಸಹಾಯದಿಂದ ಜಂಟಿಯಾಗಿ ದಾಳಿ ಮಾಡಿ ಆರೋಪಿತರಾದ 01 ] ಮುಕೇಶ ತಂದೆ ಬಾಯಿ ಸಿಂಗ್ ಬಿಲವಾ ವಯ 21 ವರ್ಷ ಉ : ವ್ಯವಸಾಯ ಜಾ : ಬಿಲವಾ ಸಾ : ಬಡಹುತ್ತಿ ಪೋಸ್ಟ್ : ಉದಯಗರ್ ತಾ ಜೋಬಟ್ ಜೆ : ಅಲಿರಾಜಪುರ ( ಮಧ್ಯಪ್ರದೇಶ ) , 02 ] ಜಶ್ವಂತಸಿಂಹ @ ಠಾಕೂರ್ ತಂದೆ ವೇಲ್ ಸಿಂಪ ಅಲಾವ್ ವಯ 26 ವರ್ಷ ಜಾಅಲಾವ್ ಉ : ಕೂಲಿ ಕೆಲಸ ಸಾ : ಉಮಾಲಿ ಹೋತಾ : ಜೋಬಟ್ ಜಿ : ಅಲಿರಾಜಪುರ ( ಮಧ್ಯಪ್ರದೇಶ ) , 03 ) ಸಂದೀಪ ಸೋನಿ @ ಛೋಟು ಶೇರ್ ತಂದೆ ಅಶೋಕ ಸೋನಿ ವಯಸ್ಸು 25 ವರ್ಷ ಜಾ ; ಸೋನಿ ಉ : ಬೆಳ್ಳಿ ಬಂಗಾರದ ವ್ಯಾಪಾರ ಸಾ : ಪಾರಾ ಜೋಷಾರಾ ತಾ : ಜಿಲ್ಲೆ : ಜಬುಅ ( ಮಧ್ಯಪ್ರದೇಶ ) , ರವರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಂತರ ಹೆಚ್ಚಿನ ತನಿಖೆಗಾಗಿ ಮಾನ್ಯ ನ್ಯಾಯಾಲಯದಿಂದ ಪೋಲೀಸ್ ಕಸ್ಟಡಿ ಪಡೆದು ತನಿಖೆ ಮುಂದುವರೆಸಿದ್ದು ಆರೋಫಿತರು ತನಿಖಾ ಕಾಲಕ್ಕೆ ಒಟ್ಟು 15 ಗಂಭೀರ ಸ್ವರೂಪದ ಮನೆಗಳ್ಳತನ ಮಾಡಿರುವುದಾಗಿ ತಿಳಿಸಿದ್ದು , ಸದರಿ ಆರೋಪಿತರಿಂದ ಕಳವಿಗೆ ಹೋದ 1 ) 140 ಗ್ರಾಂ ಬಂಗಾರದ ಆಭರಣಗಳು , 2 ) 390 ಗ್ರಾಂ ಬೆಳ್ಳಿಯ ಆಭರಣಗಳು , 3 ) ನಗದು ಹಣ 4 ) ಎರಡು ಮೋಟಾರ ಸೈಕಲಗಳನ್ನು ಹೀಗೆ ಒಟ್ಟು 10 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿಪಡಿಸಿಕೊಳ್ಳಲಾಗಿರುತ್ತದೆ .

ಸದರಿ ಆರೋಪಿತರು ತನಿಖಾ ಕಾಲಕ್ಕೆ ಗಂಗಾವತಿ ನಗರ ಠಾಣಾ ವ್ಯಾಪ್ತಿಯಲ್ಲಿ ಎರಡು , ಗಂಗಾವತಿ ಗ್ರಾಮೀಣ ವ್ಯಾಪ್ತಿಯಲ್ಲಿ ಹಣವಾಳ , ಹೊಸಕೇರಿ , ಯಲ್ಲಿ ಮೂರು ಕಡೆ , ಅರ್ಥನೆಯಲ್ಲಿ ಎರಡು ಕಡೆ , ಹಾಗೂ ಜಮಖಂಡಿಯಲ್ಲಿ ಎರಡು ಕಡೆ ಮನೆ ಕಳ್ಳತನ ಮಾಡಿರುವ ತಿಳಿಸಿರುತ್ತಾರೆ . ಸದರಿ ಆರೋಫಿತರು ಕರ್ನಾಟಕದ ಇನ್ನು ಹಲವು ಕಡೆಗಳಲ್ಲಿ ಮನೆಗಳ್ಳತನ ಮಾಡಿರುವ ಬಗ್ಗೆ ಶಂಕೆ ಇದ್ದು ತನಿಖೆ ಮುಂದುವರೆದಿರುತ್ತದೆ . ಮಿಂಚಿನ ಕಾರ್ಯಾಚರಣೆ ಮಾಡಿ ವೃತ್ತಿಪರವಾಗಿ ಮನೆಗಳ್ಳತನ ಮಾಡುವ ಮೂರು ಅಂತರಾಜ್ಯ ಮನೆಗಳ್ಳರನ್ನು ಬಂಧಿಸಿ 15 ಮನೆಗಳ್ಳತನದ ಪ್ರಕರಣಗಳನ್ನು ಬೇಧಿಸಿ ವೈಜ್ಞಾನಿಕವಾಗಿ ಹಾಗೂ ವೃತ್ತಿಪರವಾಗಿ ತನಿಖೆ ಕೈಗೊಂಡು ಸಾರ್ವಜನಿಕರು ಪೊಲೀಸರ ಮೇಲೆ ಹೆಚ್ಚಿನ ವಿಶ್ವಾಸ ಉಂಟು ಮಾಡುವಂತೆ ಶ್ಲಾಘನೀಯ ಕರ್ತವ್ಯ ಮಾಡಿದ ವಿಶೇಷ ತನಿಖಾ ತಂಡದ ಕಾರ್ಯವನ್ನು ಮಾನ್ಯ ಎಸ್ ಪಿ ಕೊಪ್ಪಳ ರವರು ಶ್ಲಾಘಿಸಿ ತನಿಖಾ ತಂಡಕ್ಕೆ ವಿಶೇಷ ಬಹುಮಾನವನ್ನು ಘೋಷಣೆ ಮಾಡಿದ್ದಾರೆ.

Please follow and like us:
error