ಪೈಲೆಟ್ ತರಬೇತಿ ಸಂಸ್ಥೆ ಪ್ರಾರಂಭಿಸಲು ಕೇಂದ್ರ ಸರ್ಕಾರಕ್ಕೆ ಮನವಿ – ಸಚಿವ ಬಸವರಾಜ ರಾಯರಡ್ಡಿ

????????????????????????????????????

????????????????????????????????????

 ಕರ್ನಾಟಕ ರಾಜ್ಯದ ಬೆಂಗಳೂರು ಅಥವಾ ಮೈಸೂರಿನಲ್ಲಿ ಅತ್ಯುತ್ತಮ ವ್ಯವಸ್ಥಿತ ಪೈಲೆಟ್ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಅಶೋಕ ಗಜಪತಿ ರಾಜು ಅವರಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಮನವಿ ಪತ್ರ ಸಲ್ಲಿಸಿದರು. ನವದೆಹಲಿಯಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಅಶೋಕ ಗಜಪತಿ ರಾಜು ಅವರನ್ನು ರಾಜ್ಯ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಖುದ್ದು ಭೇಟಿಯಾಗಿ ಮನವಿ ಪತ್ರವನ್ನು ಸಲ್ಲಿಸಿದರು. ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಗಳಿಸಿರುವ ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಸದ್ಯ ಬೆಂಗಳೂರಿನ ಜಕ್ಕೂರಿನಲ್ಲಿ ಪೈಲಟ್ ತರಬೇತಿ ಸಂಸ್ಥೆ ಇದ್ದು, ಇಲ್ಲಿ ಕೇವಲ ೨೦ ಅಭ್ಯರ್ಥಿಗಳಿಗೆ ಮಾತ್ರ ತರಬೇತಿಗೆ ಅವಕಾಶವಿದೆ. ಅಲ್ಲದೆ ಗರಿಷ್ಟ ೦4 ಆಸನ ಸಾಮರ್ಥ್ಯದ ವಿಮಾನ ಹಾರಾಟ ಪೈಲಟ್‌ಗಾಗಿ ಮಾತ್ರ ತರಬೇತಿ ನೀಡಲು ಇಲ್ಲಿ ಸಾಧ್ಯವಿದ್ದು, ಸುತ್ತಮುತ್ತಲೂ ಎತ್ತರದ ಕಟ್ಟಡಗಳು ಹಾಗೂ ಫ್ಲೈ ಓವರ್‌ಗಳಿರುವುದರಿಂದ ತೊಂದರೆ ಇದೆ. ಆದ್ದರಿಂದ ಬೆಂಗಳೂರು ನಗರಕ್ಕೆ ಇನ್ನಷ್ಟು ಉನ್ನತ ಸ್ಥಾನಮಾನ ನೀಡಲು ಅನುಕೂಲವಾಗುವಂತೆ, ಇಲ್ಲಿ ನಾಗರಿಕ ವಿಮಾನಯಾನದ ಡೈರೆಕ್ಟರ್ ಜನರಲ್ ಅವರ ನಿಯಂತ್ರಣದಲ್ಲಿ ಉನ್ನತ ದರ್ಜೆಯ ವಿಮಾನ ಪೈಲಟ್ ತರಬೇತಿ ಸಂಸ್ಥೆಯನ್ನು ರಾಜ್ಯದಲ್ಲಿ ಪ್ರಾರಂಭಿಸಬೇಕಿದೆ. ಬೆಂಗಳೂರಿನಲ್ಲಿ ಈ ಹಿಂದೆ ಬಹುತೇಕ ವಿಮಾನಗಳ ಸಂಚಾರಕ್ಕೆ ಬಳಸಲಾಗುತ್ತಿದ್ದ ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸದ್ಯ ಸೀಮಿತ ವಿಮಾನಗಳಿಗೆ ಮಾತ್ರ ಬಳಕೆಯಾಗುತ್ತಿದ್ದು, ಏರ್‌ಸ್ಟ್ರಿಪ್‌ನಲ್ಲಿ ವಿಮಾನ ಸಂಚಾರ ದಟ್ಟಣೆ ಇಲ್ಲ. ಅದೇ ರೀತಿ ಮೈಸೂರು ಬಳಿಯ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲೂ ಸಹ ವಿಮಾನಗಳ ಸಂಚಾರದ ದಟ್ಟಣೆ ಅತ್ಯಂತ ಕಡಿಮೆ ಇದೆ. ದೊಡ್ಡ ವಿಮಾನದ ಪೈಲಟ್ ತರಬೇತಿಗಾಗಿ ಇಲ್ಲಿನ ಅಭ್ಯರ್ಥಿಗಳು ಬೇರೆ ದೇಶಕ್ಕೆ ಹೋಗಿ ಪಡೆಯಬೇಕಾದ ಸ್ಥಿತಿ ಇರುವುದರಿಂದ, ನಮ್ಮಲ್ಲಿ ಎ-೩೨೦ ಸಿಮ್ಯುಲೇಟರ್ ಟ್ರೈನಿಂಗ್ ಸೌಲಭ್ಯ ದೊರೆಯುವಂತೆ ಮಾಡಲು ಈ ಎರಡೂ ವಿಮಾನ ನಿಲ್ದಾಣಗಳಲ್ಲಿ ಪೈಲಟ್ ತರಬೇತಿ ಸಂಸ್ಥೆ ಪ್ರಾರಂಭಕ್ಕೆ ಎಲ್ಲ ಮೂಲಭೂತ ಸೌಕರ್ಯಗಳು ಲಭ್ಯವಿರುವುದರಿಂದ, ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣ ಅಥವಾ ಮೈಸೂರು ಬಳಿಯ ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಬಳಸಿಕೊಂಡು ಉತ್ತಮ ದರ್ಜೆಯ ವಿಮಾನ ಪೈಲಟ್ ತರಬೇತಿ ಸಂಸ್ಥೆಯನ್ನು ನಾಗರಿಕ ವಿಮಾನಯಾನದ ಡೈರೆಕ್ಟರ್ ಜನರಲ್ ಅವರ ನಿಯಂತ್ರಣದಲ್ಲಿ ಅಥವಾ ಖಾಸಗಿ ಸಂಸ್ಥೆಯ ಜಂಟಿ ಸಹಭಾಗಿತ್ವದಲ್ಲಿ ಬೆಂಗಳೂರು ಅಥವಾ ಮೈಸೂರಿನಲ್ಲಿ ಪ್ರಾರಂಭಿಸುವುದು ಸೂಕ್ತವಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಅಶೋಕ ಗಜಪತಿ ರಾಜು ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದರು. ಅಲ್ಲದೆ ಮೈಸೂರು ಮತ್ತು ಹುಬ್ಬಳ್ಳಿ ನಡುವೆ ಏರ್ ಇಂಡಿಯಾ ವಿಮಾನಯಾನ ಸೇವೆಯನ್ನು ಪ್ರಾರಂಭಿಸುವಂತೆ ಒತ್ತಾಯವನ್ನೂ ಮಾಡಿದರು.ಅಪರ ಮುಖ್ಯ ಕಾರ್ಯದರ್ಶಿ ಭರತ್‌ಲಾಲ್ ಮೀನಾ ಹಾಗೂ ಹುಬ್ಬಳ್ಳಿ-ಧಾರವಾಡ ಮಾಜಿ ಉಪಮೇಯರ್ ದೀಪಕ್ ಚಿಂಚೋರೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Please follow and like us:
error

Related posts

Leave a Comment