fbpx

ಪೂರ್ವಾನುಮತಿ ಇಲ್ಲದೆ ಗ್ರಾ.ಪಂ. ಕೇಂದ್ರ ಸ್ಥಾನ ಬಿಡದಿರಲು ಸೂಚನೆ


ಕೊಪ್ಪಳ, ಸ

: ಗ್ರಾಮ ಪಂಚಾಯತ ಮಟ್ಟದ ಅಧಿಕಾರಿ, ಸಿಬ್ಬಂದಿಗಳು ಪೂರ್ವಾನುಮತಿ ಇಲ್ಲದೆ ಗ್ರಾಮ ಪಂಚಾಯತಿಯ ಕೇಂದ್ರ ಸ್ಥಾನವನ್ನು ಬಿಟ್ಟು ತಾಲ್ಲೂಕು ಕೇಂದ್ರ ಸ್ಥಾನ/ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಕಂಡು ಬಂದಲ್ಲಿ ಅಂತವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.
 ಗ್ರಾಮ ಪಂಚಾಯತ ವ್ಯಾಪ್ತಿಯ ಪಂಚಾಯತ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ದ್ವಿ.ದ.ಲೆ.ಸ., ಇತರೆ ಸಿಬ್ಬಂದಿ ದಿನನಿತ್ಯ ತಾಲ್ಲೂಕು ಕೇಂದ್ರ, ಜಿಲ್ಲಾ ಕೇಂದ್ರ ಸ್ಥಾನಕ್ಕೆ ಯಾವುದೇ ಪೂರ್ವಾನುಮತಿ ಇಲ್ಲದೇ ಭೇಟಿ ನೀಡುತ್ತಿರುವುದು ಕಂಡುಬAದಿರುತ್ತದೆ. ಇದರಿಂದಾಗಿ ಗ್ರಾ.ಪಂ. ಮಟ್ಟದಲ್ಲಿ ಸಾರ್ವಜನಿಕರಿಗೆ ಪಂಚಾಯತಿ ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿ ದೊರೆಯದೇ ಇರುವ ಬಗ್ಗೆ ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ದೂರುಗಳು ಸ್ವೀಕೃತವಾಗಿವೆ. ಆದ್ದರಿಂದ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಯಾವುದೇ ಸಭೆ ಕರೆಯಬೇಕಾಗಿದ್ದಲ್ಲಿ ವಾರದ ಪ್ರತಿ ಮಂಗಳವಾರದAದು ಮಾತ್ರ ಸಭೆಯನ್ನು ನಿಗದಿಪಡಿಸಬೇಕು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಮ ಪಂಚಾಯತಿಗೆ ಸಂಬAಧಿಸಿದ ಕೆಲಸಗಳೇನಾದರೂ ಇದ್ದಲ್ಲಿ ಮಧ್ಯಾಹ್ನ 4 ಗಂಟೆಯ ನಂತರ ತಾಲ್ಲೂಕು ಮಟ್ಟದ ಕಚೇರಿಗಳಿಗೆ ಭೇಟಿ ನೀಡಬೇಕು. ಪೂರ್ವಾನುಮತಿ ಪಡೆಯದೆ ಗ್ರಾ.ಪಂ. ಕೇಂದ್ರ ಸ್ಥಾನವನ್ನು ಬಿಡುವ ಯಾವುದೇ ಸಿಬ್ಬಂದಿ ತಾಲ್ಲೂಕು/ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಕಂಡುಬAದಲ್ಲಿ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು.
 ತಾಲ್ಲೂಕು ಪಂಚಾಯತಿಗಳಲ್ಲಿನ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು(ಗ್ರಾ.ಉ.), ತಾಲ್ಲೂಕು ಯೋಜನಾಧಿಕಾರಿ, ಸಹಾಯಕ ಲೆಕ್ಕಾಧಿಕಾರಿ ಮತ್ತು ಸಿಬ್ಬಂದಿವರ್ಗದವರ ಸಭೆಯನ್ನು ಜಿಲ್ಲಾ ಪಂಚಾಯತ ಕಾರ್ಯಾಲಯದಲ್ಲಿ ಕರೆಯಬೇಕಾಗಿದ್ದಲ್ಲಿ ಗುರುವಾರದಂದು ಕರೆಯಲಾಗುವುದು. ಜಿಲ್ಲಾ ಪಂಚಾಯತ ಅಥವಾ ತಾಲ್ಲೂಕು ಪಂಚಾಯತಿಗಳಲ್ಲಿ ಈ ಮೇಲೆ ಸೂಚಿಸಿದ ದಿನಗಳನ್ನು ಹೊರತುಪಡಿಸಿ ಬೇರೆ ದಿನದಂದು ಸಭೆ ಕರೆಯುವ ಅವಶ್ಯಕತೆ ಬಿದ್ದಲ್ಲಿ, ಸಾಧ್ಯವಾದಷ್ಟು ಈ ಸಭೆಗಳನ್ನು ಟೆಲಿಕಾನ್ಫರೆನ್ಸ್ ಕಾಲ್ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಬೇಕು ಎಂದು ತಿಳಿಸಿದ್ದಾರೆ.

Please follow and like us:
error
error: Content is protected !!