ಪಿಸ್ತೂಲ್ , ಚಾಕು ತೋರಿಸಿ ಸಿನಿಮಿಯ ರೀತಿಯಲ್ಲಿ  ಕಿಡ್ನಾಪ್

ರಾಯಚೂರು :  ಲಿಂಗಸೂಗೂರು ಪಟ್ಟಣದಲ್ಲಿ ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಪಿಸ್ತೂಲ್ ಚಾಕು ತೋರಿಸಿ ದುಷ್ಕರ್ಮಿಗಳು ವ್ಯಕ್ತಿಯನ್ನು ಅಪಹರಿಸಿದ ಘಟನೆ ನಡೆದಿದೆ

ಶನಿವಾರ ಮಧ್ಯಾಹ್ನ 12.30ರ ಹೊತ್ತಿಗೆ  ಲಿಂಗಸೂಗೂರು  ಬಸ್ ಸ್ಟ್ಯಾಂಡ್ ಎದುರು ನಾಲ್ಕು ಜನ ಅಪರಿಚಿತರು  MH14 3566 ನಂಬರ್  ಕಾರಿನಲ್ಲಿ ಬಂದಿದ್ದಾರೆ.  ವ್ಯಕ್ತಿಯೊಡನೆ ಸ್ನೇಹಿತರಂತೆ ಮಾತನಾಡಿ ನಂತರ ಕಾರಿನಲ್ಲಿ ಬಲವಂತವಾಗಿ ಹತ್ತಿಸಲು ಯತ್ನಿಸಿದ್ದಾರೆ. ಆಗ ಯುವಕ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸ್ಥಳೀಯರು ನೆರವಿಗೆ ಧಾವಿಸಲು ಮುಂದಾಗುತ್ತಿದ್ದಂತೆ ಚಾಕು ಮತ್ತು ಪಿಸ್ತೂಲ್ ತೋರಿಸಿ ಹೆದರಿಸಿದ್ದಾರೆ. ಬಳಿಕ ಬಲವಂತವಾಗಿ ಯುವನಕನನ್ನು ಕಾರು ಹತ್ತಿಸಿ ಕರೆದೊಯ್ದಿದ್ದಾರೆ.  ಈ ಕಿಡ್ನಾಪ್ ನಲ್ಲಿ ಯಾವುದೋ ಹಣಕಾಸಿನ ವ್ಯವಹಾರ ಇರಬೇಕು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ವಾಹನ ಮಸ್ಕಿ ಮಾರ್ಗದಲ್ಲಿ ಸಾಗಿದೆ.  ಇದುವರೆಗೆ  ಯಾರೂ ದೂರು ನೀಡದ ಕಾರಣ  ಕಿಡ್ನಾಪ್ ಆಗಿರುವ ಯುವಕನ ಕುರಿತು ಮಾಹಿತಿ  ತಿಳಿದುಬಂದಿಲ್ಲ. ರಾಜ್ಯದ ಎಲ್ಲ ಚೆಕ್ ಪೋಸ್ಟ್ ಗಳಿಗೆ ಮಾಹಿತಿ ನೀಡಿದ್ದು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಡಾ.ಸಿ.ಬಿ.ವೇದಮೂರ್ತಿ  ಎಂದು ಹೇಳಿದ್ದಾರೆ

Please follow and like us:
error