ಪಿಯುಸಿ ಪೂರಕ ಪರೀಕ್ಷೆ ಕೋವಿಡ್ ದೃಡಪಟ್ಟ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ : ಮಾಹಿತಿ ನೀಡಲು ಮನವಿ

ಕೊಪ್ಪಳ :    ದಿ  07-09-2020 ರಿಂದ 19-09-2020 ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪೂರಕ ಪರಿಕ್ಷೆಗೆ ಕೊವಿಡ್‌-19 ದೃಢಪಟ್ಟ ವಿದ್ಯಾರ್ಥಿಗಳಿದ್ದಲ್ಲಿ ಈ ಕೇಳಗಿನ ಹೆಲ್ಬಲೈನ್‌ ಗಳಿಗೆ ಮಾಹಿತಿ ತಿಳಿಸಲು ಕೋರಲಾಗಿದೆ..ದಿನಾಂಕ 07-09-2020 ರಿಂದ 19-09-2020 ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯು ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 5 ಕೆಂದ್ರಗಳಲ್ಲಿ ನಡೆಯಲಿದ್ದು ಸದರಿ ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿಧ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕಗಳನ್ನು ಧರಿಸಿಕೊಂಡು ಹಾಜರಾಗಬೇಕು

ಕೊಪ್ಪಳ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಹಾಜರಾಗುವ ಯಾವುದಾದರು ವಿದ್ಯಾರ್ಥಿಗಳಿಗೆ ಕೊವಿಡ್‌-19 ದೃಢಪಟ್ಟಿದ್ದರೆ ಅಂತಹ ವಿಧ್ಯಾರ್ಥಿಗಳು ಈ ಕೆಳಗಿನ ದೂರವಾಣಿ ಕರೆಗಳಿಗೆ ಅಥವಾ ತಮ್ಮ ಕಾಲೇಜಿನ ಪ್ರಾಚಾರ್ಯರಿಗೆ ಕರೆ ಮಾಡಿ ನೊಂದಣಿ ಮಾಡುವದು ಕಡ್ಡಾಯವಾಗಿರುತ್ತದೆ ಅಂತವರಿಗೆ ಕೋವಿಡ್‌ ಕೇರ ಸೆ೦ಟರ್‌ ತಳಕಲ್‌.ತಾ.ಕುಕನುರು ಹಾಗು ಕೋವಿಡ್‌ ಕೇರ ಸೆಂಟರ್‌ ಗಂಗಾವತಿ ಇಲ್ಲಿ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲಾಗುವದು ಅಂತಹ ವಿದ್ಯಾರ್ಥಿಗಳು/ಪಾಲಕರು/ಪ್ರಾಚಾರ್ಯರು ಈ ಕೆಳಗೆ

ನೀಡಿದ ಸಹಾಯವಾಣಿಗಳಿಗೆ ಕರೆ ಮಾಡಲು  ಕೋರಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಕೊಪ್ಪಳ-08539-225001

Please follow and like us:
error