ಪದವಿ ವಿದ್ಯಾರ್ಥಿಗಳ ಅಂಕಪಟ್ಟಿ ಡಿಜಿಟಲೀಕರಣ ಖಾಸಗಿ ಕಂಪನಿಗೆ : ಎಸ್ಎಫ್ಐ ವಿರೋಧ

ಕೊಪ್ಪಳ: ಪದವಿ, ಸ್ನಾತಕೋತ್ತರ ಪದವಿ ಹಾಗೂ ವೃತ್ತಿಪರ ಕೋರ್ಸಿನ ವಿದ್ಯಾರ್ಥಿಗಳ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ನಕಲಿ ಮಾಡುವುದನ್ನು ತಪ್ಪಿಸಲು ಅಂಕಪಟ್ಟಿಯನ್ನು ಡಿಜಿಟಲೀಕರಣಕ್ಕೆ ಒಳಪಡಿಸಿ ಖಾಸಗಿ ಕಂಪನಿಗೆ ಕೊಡಲು ಮುಂದಾದ ರಾಜ್ಯ ಸರ್ಕಾರದ ನಡೆಯನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (Sfi) ಸಂಘಟನೆಯ ತೀವ್ರವಾಗಿ ಖಂಡಿಸುತ್ತದೆ ಎಂದು ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗದ ಇಂದು ಕೊಪ್ಪಳದಲ್ಲಿ ನೆಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅವರು ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಟೀಕಿಸುತ್ತ ಮಾತನಾಡಿ ವಿದ್ಯಾರ್ಥಿಗಳ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ನೈಸರ್ಗಿಕ ವಿಕೋಪದಿಂದ ಹಾನಿಯಾಗುವುದನ್ನು ತಪ್ಪಿಸಲು ಹಾಗೂ ದೀರ್ಘಕಾಲ ಸಂಗ್ರಹಿಸಿಡಲು ಪಾರದರ್ಶಕತೆಯನ್ನು ಹೆಚ್ಚಿಸುವುದು, ವಿದ್ಯಾರ್ಥಿಗಳಿಗೆ ಸುಲಭವಾಗಿ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳು ದೊರಕುವಂತೆ ಮಾಡಲು ಹಾಗೂ ನಕಲಿ ಪ್ರಮಾಣಪತ್ರ ಅವಳಿ ತಡೆಯುವ ಹೆಸರಿನಲ್ಲಿ ಯುಜಿಸಿಯ ನಿಯಮದ ಪ್ರಕಾರ ಡಿಜಿಟಲೀಕರಣ ಮಾಡಲು ವಿರೋಧ ಇಲ್ಲ ಡಿಜಿಟಲೀಕರಣವನ್ನು ಸರಕಾರ ಸ್ವಾಮ್ಯದಲ್ಲಿರುವ ಕಂಪನಿ ಮಾಡಿದರೆ ಒಪ್ಪಬಹುದು ಆದರೆ ಮೇ.ಕೀಯೋನಿಕ್ಸ್ ಕಂಪನಿಯವರುಸೂಚಿಸವು ಖಾಸಗಿ ಕಂಪನಿಗೆ ಅಕೌಂಟ್ ಗೆ ಅಂಕಪಟ್ಟಿಗೆ ಕಟ್ಟುವ ಹಣವನ್ನು ಕಟ್ಟಲು ಸೂಚಿಸುವುದಕ್ಕೆ ಎಸ್ಎಫ್ಐ ಸಂಘಟನೆ ಆಕ್ರೋಶ ವ್ಯಕ್ತಪಡಿಸಿತು.

ಈಗಾಗಲೇ ಬೆಂಗಳೂರು ವಿಶ್ವವಿದ್ಯಾಲಯ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ಡಿಜಿಟಲೀಕರಣ ಮಾಡಿದ್ದು ಅಲ್ಲಿ ಅಟ್ಯಾಸ್ಟಿಕ್ ಎಂಬ ಖಾಸಗಿ ಕಂಪನಿಗೆ ಕೊಟ್ಟಿರುವುದರಿಂದ ಆ ವಿಶ್ವವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ, ವಿದ್ಯಾರ್ಥಿಗಳಿಗೆ ಅಂಕಪಟ್ಟಿಯಲ್ಲಿ ಹಲವಾರು ಲೋಪದೋಷಗಳು, ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಪ್ರಮಾಣ ಪತ್ರ ಕೊಡದೆ ಇರುವುದು ಮತ್ತು ವಿದ್ಯಾರ್ಥಿಗಳಿಂದ ಮನಬಂದಂತೆ ಶುಲ್ಕ ವಸೂಲಿ ಮಾಡುವುದು ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಆದ್ದರಿಂದ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಸಚಿವರಾದ ಡಾ: ಅಶ್ವತ್ ನಾರಾಯಣ್ ಅವರು ಯುಜಿಸಿ ನಿಯಮಗಳ ಉಲ್ಲಂಘನೆ ಮಾಡಿ ಮೇ. ಕೀಯೋನಿಕ್ಸ್ ಕಂಪನಿಗೆ ಕೊಟ್ಟು ಅದರ ಅನುಷ್ಠಾನದಲ್ಲಿ ಮತ್ತೊಂದು ಖಾಸಗಿ ಕಂಪನಿ ನಿರ್ವಹಣೆ ಮಾಡಲು ಹೊರಟಿರುವುದನ್ನು ಎಸ್ಎಫ್ಐ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಏಕೆಂದರೆ ಸರ್ಕಾರ ವಿದ್ಯಾರ್ಥಿಗಳ ಹಣವನ್ನು ತನಗೆ ತೆಗೆದುಕೊಳ್ಳದ ಬಿಟ್ಟು ಯಾರೋ ಸ್ವಾರ್ಥಕ್ಕಾಗಿ ಒಂದು ಖಾಸಗಿ ಕಂಪನಿಯನ್ನು ಉದ್ದಾರ ಮಾಡಲು ಹೊರಟಿದೆ ಪ್ರತಿವರ್ಷ ರಾಜ್ಯದಲ್ಲಿ ಸುಮಾರು 5 ಲಕ್ಷ ವಿದ್ಯಾರ್ಥಿಗಳಿಗೆ ಒಬ್ಬ ವಿದ್ಯಾರ್ಥಿಗೆ ಒಂದು ವರ್ಷಕ್ಕೆ 1654 ರೂಪಾಯಿಯಂತೆ ಲೆಕ್ಕ ಹಾಕಿದರೆ 8 ಕೋಟಿ 27 ಲಕ್ಷ ರೂಪಾಯಿ ಹಣವನ್ನು ಖಾಸಗಿ ಕಂಪನಿಗೆ ಕೊಡಲು ಮುಂದಾಗಿರುವುದು ಸರಿಯಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪುಸ್ತಕವನ್ನು ರಾಜ್ಯ ಸರ್ಕಾರ ಮೊದಲು ಕನ್ನಡಕ್ಕೆ ಅನುವಾದ ಮಾಡಿ ಬಿಡುಗಡೆಗೊಳಿಸಿ ರಾಜ್ಯದ ಜನತೆ ಮುಂದಿಟ್ಟು, ರಾಜ್ಯದ ವಿಧಾನಸಭೆಯಲ್ಲಿ ಅದರ ಸಾಧಕ-ಬಾಧಕಗಳ ಕುರಿತು ಸಾಹಿತಿಗಳು, ಉಪನ್ಯಾಸಕ, ಶಿಕ್ಷಕರು, ಶಿಕ್ಷಣ ತಜ್ಞರು ಮತ್ತು ಕನ್ನಡಪರ ಮತ್ತು ವಿದ್ಯಾರ್ಥಿ ಸಂಘಟನೆಗಳ ಒಳಗೊಂಡಂತೆ ಸಮಗ್ರವಾಗಿ ಚರ್ಚಿಸಿದೆ ಜಾರಿಗೆ ಮುಂದಾದರೆ ಸಚಿವರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದರು.

ಕೊಪ್ಪಳ Sfi ಜಿಲ್ಲಾ ಅಧ್ಯಕ್ಷ ಸುಭಾನ್ ಸೈಯದ್ ಮಾತನಾಡಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಈ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ದಾಖಲಾತಿಗೆ ಮುಂದಾಗಿದ್ದು ಆದರೆ ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ 1475 ರೂಪಾಯಿ ಹಣ್ಣ ಹೆಚ್ಚಳ ಮಾಡಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (Sfi) ಸಂಘಟನೆಯ ವಿರೋಧಿಸಿತ್ತದೆ. ಏಕೆಂದರೆ ಈ ವರ್ಷವೂ ಕರೋನದಿಂದ ಅನೇಕ ಜನ ಉದ್ಯೋಗವನ್ನು ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ, ಅಲ್ಲದೆ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಶುಲ್ಕವನ್ನು ಹೆಚ್ಚಳ ಮಾಡಬಾರದು ಎಂದು ಆದೇಶ ಮಾಡಿದೆ. ಆದೇಶ ಇದ್ದರೂ ಸಹ ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ವಿಶ್ವವಿದ್ಯಾಲಯ ಶುಲ್ಕ ಹೆಚ್ಚಳ ಮಾಡಿರುವ ಆದೇಶವನ್ನು ವಾಪಸ್ ಪಡೆಯಬೇಕು ಇಲ್ಲದಿದ್ದಲ್ಲಿ ವಿಶ್ವವಿದ್ಯಾಲಯಕ್ಕೆ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಸುಭಾನ್ ಸೈಯದ್ ಇದ್ದರು.

Please follow and like us:
error