ಪತ್ರಿಕಾ ವಿತರಕರಿಗೆ, ಕೇಬಲ್ ಟಿವಿ ಆಪರೇಟರ್ಸ್ ಗಳಿಗೆ ಲಸಿಕೆ ಹಾಕಲು ಮನವಿ

ಕನ್ನಡನೆಟ್ ನ್ಯೂಸ್ :: ಪತ್ರಿಕಾ ವಿತರಕರಿಗೆ ಮತ್ತು ಕೇಬಲ್ ಟಿವಿ ಆಪರೇಟರ್ಸ್ ಗಳಿಗೆ ಲಸಿಕೆ ಹಾಕಲು ಕೋರಿ ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪನವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ  ಶಿವಾನಂದ ತಗಡೂರು ಮನವಿ ಸಲ್ಲಿಸಿದ್ದಾರೆ

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಪತ್ರಕರ್ತರನ್ನು ಫ್ರಂಟ್ ಲೈನ್ ವಾರಿಯರ್ಸ್‌ ಎಂದು ಘೋಷಿಸಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಯಲ್ಲಿರುವ ಪತ್ರಕರ್ತರಿಗೆ ಲಸಿಕೆ ನೀಡಲು ಕ್ರಮ ಕೈಗೊಂಡಿದ್ದು ಸ್ವಾಗತಾರ್ಹ ಮತ್ತು ಅಭಿನಂದನೀಯ. ಹಾಗೆಯೇ ಪತ್ರಕರ್ತರ ಕುಟುಂಬ ಸದಸ್ಯರಿಗೂ ಈ ಸೌಲಭ್ಯ ವಿಸ್ತರಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ

ಮಳೆ, ಗಾಳಿ, ಬಿಸಿಲೆನ್ನದೆ ಸದಾ
ಪತ್ರಿಕೆಗಳ ವಿತರಣಾ ಕಾಯಕದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಪತ್ರಿಕಾ ವಿತರಕರಿಗೂ, ಕೇಬಲ್‌ ಆಪರೇಟರ್ಸ್ ಗಳಿಗೂ ಕೋವಿಡ್ ವಾರಿಯರ್ಸ್‌ ಎಂದು ಪರಿಗಣಿಸಿ ಲಸಿಕೆ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇನೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ವಿನಂತಿಸಿಕೊಂಡಿದ್ದಾರೆ.

Please follow and like us:
error