ಪತ್ರಕರ್ತರಿಗೆ ವಸತಿ ಯೋಜನೆ- ವಿ.ಸೋಮಣ್ಣ

ಬೆಂಗಳೂರು : ಪತ್ರಕರ್ತರನ್ನು ವಸತಿ ಯೋಜನೆಯಲ್ಲಿ ತರಲಾಗುವುದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಸಲ್ಲಿಸಿದ ಮನವಿ ಸ್ವೀಕರಿಸಿ, ಮಾತನಾಡಿ, ಮನೆ ಇಲ್ಲದವರು ಆರ್ಥಿಕವಾಗಿ ಹಿಂದುಳಿದಿದ್ದರೆ, ಅವರಿಗೆ ಆದ್ಯತೆ ಮೇಲೆ ಮನೆ ಕೊಡಿಸಲಾಗುವುದು ಎಂದರು.

ಹೊಸ ಬಡಾವಣೆಯಲ್ಲಿ ನಿವೇಶನ ಕೊಡಿಸುವ ಪ್ರಯತ್ನ ಮಾಡಲಾಗುವುದು. ಈಗಾಗಲೇ ಕರಲ ಜಿಲ್ಲೆಯಲ್ಲಿ ಈ ಬಗ್ಗೆ ಕ್ರಮ ವಹಿಸಲಾಗಿದೆ ಎಂದರು. ರಾಜ್ಯಾದ್ಯಕ್ಷರಾದ ಶಿವಾನಂದ ತಗಡೂರ, ಪ್ರದಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error