ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ನಿರಾಣಿ ಒಂದು ಪೈಸೆ ನೀಡಿಲ್ಲ- ಬಸವಜಯ ಮೃತ್ಯುಂಜಯ ಸ್ವಾಮೀಜಿ


ಕೊಪ್ಪಳ : ಸಿಎಂ ಯಡಿಯೂರಪ್ಪ ಅವಧಿಯಲ್ಲಿ ಮೀಸಲಾತಿ ಸಿಗುವ ವಿಶ್ಚಾಸವಿದೆ,ಸಿಎಂ ಅವರು ವಿಧಾನಸೌಧದಲ್ಲಿ ನಮಗೆ ಮಾತು ಕೊಟ್ಟಿದ್ದಾರೆ ಬಸನಗೌಡ ಪಾಟೀಲ್ ಯತ್ನಾಳ ಸದನದ ಒಳಗೇ ಸಮುದಾಯದ ಪರ ಹೋರಾಟ ಮಾಡಿದ್ದಾರೆ ಮೀಸಲಾತಿಗಾಗಿ ಸಮಾಜ ಒಗ್ಗಟ್ಟಾಗಿದೆ; ತಾವುದೇ ಭಿನ್ನಾಭಿಪ್ರಾಯ ಇಲ್ಲ. ಮಂತ್ರಿ ಸ್ಥಾನ ನೀಡಿದ ನಂತರ ಪಾದಯಾತ್ರೆ ನಿಲ್ಲಿಸುತ್ತೇನೆ ಅಂತಾ ಮುರಿಗೇಶ ನಿರಾಣಿ ಸಿಎಂಗೆ ಹೇಳಿದ್ದರು ಅದರಂತೆ ನಿರಾಣಿ ಅವರು ಸಚಿವರಾಗುತ್ತಿದ್ದಂತೆ ಪಾದಯಾತ್ರೆ ನಿಲ್ಲಿಸಲು ಹೇಳಿದರು. ಆದರೆ ನಾವು ಮೀಸಲಾತಿ ಗಾಗಿ ಹೋರಾಟ ನಿಲ್ಲಿಸಲಿಲ್ಲ, ಯಾವ ಪದವಿ ಕೊಟ್ಟರೂ ನಮ್ಮ ಸಮುದಾಯದ ಮೀಸಲಾತಿ ಹೋರಾಟ ನಿಲ್ಲುವುದಿಲ್ಲ ಎಂದು
ಪಂಚಮಸಾಲಿ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಮೀಸಲಾತಿ ಹೋರಾಟದಲ್ಲಿ ಭಾಗಿಯಾಗಿದ್ದವರಿಗೆ ಧನ್ಯವಾದ ಅರ್ಪಿಸಲು ನಗರಕ್ಕೆ ಆಗಮಿಸಿದ್ದ ಸ್ವಾಮಿಜಿ ನಗರದ ಕುಷ್ಟಗಿ ರಸ್ತೆಯಲ್ಲಿರುವ ಪಂಚಮಸಾಲಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ವಿಜಯಾನಂದ ಕಾಶಪ್ಪನವರ್ ಅವರನ್ನು ಕಳೆದ 2017ರಲ್ಲೇ ಅಧ್ಯಕ್ಷರಾಗಿ ಮಾಡಲಾಗಿದೆ ಅವರಿಗೆ ಧ್ವಜ ಹಸ್ತಾಂತರ ಮಾಡಿದ್ದೇವೆ ಅಷ್ಟೇ. ಪಾದಯಾತ್ರೆ ಲೆಕ್ಕ ಕೊಡಿ ಎಂದು ಸಚಿವ ನಿರಾಣಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸ್ವಾಮಿಜಿ ನಾವು ಯಾರು ಕೇಳಿದ್ರೂ ಲೆಕ್ಕ ಕೊಡೋದಕ್ಕೆ ಸಿದ್ದರಿದ್ದೇವೆ,ನಮ್ಮ ಹೋರಾಟಕ್ಕೆ ಸಚಿವ ಮುರಿಗೇಶ ನಿರಾಣಿ ಒಂದೂ ಪೈಸ ಕೊಟ್ಟಿಲ್ಲ,ಹೋರಾಟಕ್ಕೆ ಒಂದಷ್ಟು ವಾಹನ ವ್ಯವಸ್ಥೆ ಮಾಡಿರಬಹುದಷ್ಟೇ ಇದರ ಹೊರತಾಗಿ ಇತರೇ ಶಾಸಕರು- ಸಚಿವರಂತೆ ಹೋರಾಟಕ್ಕೆ ಹಣ ಕೊಟ್ಟಿಲ್ಲ ಇವರೆಗಂತೂ ಮುರುಗೇಶ ನಿರಾಣಿ ಹೋರಾಟದ ಕಾರ್ಯಕ್ರಮಕ್ಕೆ ಧನ ಸಹಾಯ ಮಾಡಿಲ್ಲ ಮುಂದೆ ಸಹಾಯ ಮಾಡಬಹುದು ಕೇಳುತ್ತೇವೆ
ಬಸನಗೌಡ ಪಾಟೀಲ್ ಯತ್ನಾಳ ಯಾವ ಸಮುದಾಯದ ವಿರುದ್ಧವೂ ಮಾತನಾಡಿಲ್ಲ ಕುತಂತ್ರಿಗಳು ಎಲ್ಲ ಸಮುದಾಯದಲ್ಲಿ ಇದ್ದಾರೆ ಆ ಕುತಂತ್ರಿಗಳ ಬಗ್ಗೆ ಮಾತನಾಡಿದರೆ ಯಾರೂ ನಮ್ಮ ಬಗ್ಗೆ ಮಾತಾಡಿದ್ರು ಅಂತಾ ತಿಳಕೋಬಾರದು ಯಾವುದೇ ಸಮುದಾಯ ನಮಗೆ ಅಂದಿದ್ದಾರೆ ಅಂತಾ ಯಾಕೆ ತಿಳಿದುಕೊಳ್ಳಬೇಕು ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆಯನ್ನು ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಮರ್ಥಿಸಿದರು. ಈ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯದ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಭೂತೆ, ಕಳಕನಗೌಡ, ಅಮರೇಶ ಕರಡಿ, ಸಂಗಮೇಶ ಬಾದವಾಡಗಿ , ಕರಿಯಪ್ಪ ಮೇಟಿ ಸೇರಿದಂತೆ ಇನ್ನಿತರರು ಉಪಸ್ತಿತರಿದ್ದರು.

Please follow and like us:
error