ಪಂಚಮಸಾಲಿ ೨ಎ ಮೀಸಲಾತಿ : ಶ್ರೀಗಳಿಗೆ ಸಿಎಂ ಮಾತನಾಡುವ ಭರವಸೆ- ಕರಡಿ ಸಂಗಣ್ಣ

ಯತ್ನಾಳಗೆ ಅಸಮಾಧಾನ ಇದ್ದರೆ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಲಿ: ಸಂಗಣ್ಣ

ಕೊಪ್ಪಳ: ಯತ್ನಾಳರಿಗೆ ಅನ್ಯಾಯ, ಅಸಮಾಧಾನ ಇದ್ರೆ ಪಕ್ಷದ ಚೌಕಟ್ಟಿನಲ್ಲಿ ಬಗೆ ಹರಿಸಿಕೊಳ್ಳಬೇಕು ಎಂದು ಶನಿವಾರ ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ಸುದ್ದಿಗಾರರಿಗೆ ತಿಳಿಸಿದರು.

ಈ ವಿಷಯ ತಿಳಿಸಿ ಮಾತನಾಡಿದ ಅವರು, ಹಾಗೇನಾದರೂ ಸಮಸ್ಯೆ ಇದ್ದರೆ ಪಕ್ಷದ ವರಿಷ್ಠರು, ಹೈಕಮಾಂಡ್ ಬಳಿ ಹೇಳಬೇಕು. ಅದನ್ನ ಬಿಟ್ಟು ಈ ರೀತಿ ಬಹಿರಂಗ ಹೇಳಿಕೆ ನೀಡಿ ಪಕ್ಷಕ್ಕೆ, ಮುಖಂಡರಿಗೆ ಮುಜುಗರ ತರಬಾರದು ಎಂದು ಕಿಡಿ ಕಾರಿದರು.

ಯಾವ ಕಾರಣಕ್ಕೆ ಯತ್ನಾಳ ಅವರಿಗೆ ನೀಡಲಾಗಿದ್ದ ಭದ್ರತೆ ಹಿಂಪಡೆದಿದ್ದಾರೊ ಗೊತ್ತಿಲ್ಲ. ಸಿಡಿ ಇದ್ದರೆ ಮೊದಲು ಹೊರಗೆ ಬರಲಿ, ಆಮೇಲೆ ತನಿಖೆ ಆಗೇ ಆಗುತ್ತೆ ಎಂದರು.

ಪಂಚಮಸಾಲಿ ಸಮಾಜದ ಪಾದಯಾತ್ರೆ ಕೊಪ್ಪಳಕ್ಕೆ ಬರ್ತಾ ಇದೆ. ನಾನು ಸಹ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವೆ. ಪಾದಯಾತ್ರೆ ಶುರುವಾಗುವ ಮುನ್ನವೇ ಸಚಿವ ಸಿ.ಸಿ.ಪಾಟೀಲ ಜೊತೆಗೂಡಿ ಸಿಎಂ ಭೇಟಿಯಾಗಿದ್ದೇವೆ. ಪಾದಯಾತ್ರೆಯಿಂದ ತೊಂದರೆ ಆಗುತ್ತೆ, ಸರಕಾರಕ್ಕೂ ಮುಜುಗರ ಅಂತ ಹೇಳಿದ್ದೇವೆ ಎಂದು ತಿಳಿಸಿದರು.

ಪಂಚಮಸಾಲಿ ಶ್ರೀಗಳೊಂದಿಗೆ ಮಾತನಾಡುವಂತೆ ಸಿಎಂಗೆ ಮನವಿ ಮಾಡಿಕೊಂಡಿದ್ದೇವೆ. ಶೀಘ್ರದಲ್ಲೇ ಮಾತನಾಡುವುದಾಗಿ ಸಿಎಂ ಭರವಸೆ ನೀಡಿದಾರೆ ಎಂದು ಕರಡಿ ಸಂಗಣ್ಣ ತಿಳಿಸಿದರು.

Please follow and like us:
error