ಪಂಚಮಸಾಲಿಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೃಹತ್ ಪಾದಯಾತ್ರೆ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆರಂಭಿಸಿರೋ ಪಾದಯಾತ್ರೆ ಇಂದು ಕೊಪ್ಪಳ ಜಿಲ್ಲಾ ಕೇಂದ್ರ ತಲುಪಿದೆ. ಬೆಳಗ್ಗೆ ಕೊಪ್ಪಳ ಜಿಲ್ಲಾ ಕೇಂದ್ರ ಪ್ರವೇಶಿಸಿದ ಶ್ರೀಗಳನ್ನು ಸಂಸದ ಸಂಗಣ್ಣ ಕರಡಿ ಸೇರಿ ಸಮುದಾಯದ ಜನರು ಸ್ವಾಗತಿಸಿದರು.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ವೀಣಾ ವಿಜಯಾನಂದ ಕಾಶಪ್ಪನವರ್, ಮಾಜಿ ಸಂಸದ ಶಿವರಾಮಗೌಡ , ಕಿಶೋರಿ ಬೂದನೂರ , ಕರಿಯಪ್ಪ ಮೇಟಿ , ಬಸವರಾಜ್ ಬೂತೆ ಸೇರಿ ವಿವಿಧ ಮುಖಂಡರು ಪಕ್ಷಾತೀತವಾಗಿ ಪಾದಯಾತ್ರೆಯಲ್ಲಿ ಭಾಗವಹಿಸಿದರು. ಭಾಗ್ಯನಗರ ಮತ್ತು ಕೊಪ್ಪಳದ ಪ್ರಮುಖ ರಸ್ತೆ ಮೂಲಕ ಪಾದಯಾತ್ರೆ ಹೊಸಪೇಟೆ ಮಾರ್ಗವಾಗಿ ಮುಂದುವರಿಯಿತು.

Please follow and like us:
error