ನೈಟ್ ಕರ್ಪ್ಯೂ ಹಿನ್ನೆಲೆ
ಬಸ್ ಸಂಚಾರಕ್ಕೆ ಯಾವುದೇ ತೊಂದರೆ, ವ್ಯತ್ಯಯ ಇಲ್ಲ- ಡಿಸಿಎಂ ಲಕ್ಷ್ಮಣ ಸವದಿ

ಬೆಳಗಾವಿ : ರಾಜ್ಯದಲ್ಲಿ ಇಂದಿನಿಂದ  ಕೊರೊನಾ ಎರಡನೇ ಅಲೆ ಬರುವ ಸಾಧ್ಯತೆ ಹಿನ್ನಲೆ ರಾಜ್ಯದಲ್ಲಿ ನೈಟ್ ಕರ್ಪ್ಯೂ  ಇಂದಿನಿಂದ ರಾಜ್ಯದಲ್ಲಿ ಒಂಬತ್ತು ದಿನಗಳ ಕಾಲ ನೈಟ್ ಕರ್ಪ್ಯೂ ಜಾರಿ.
ಬಸ್ ಸಂಚಾರಕ್ಕೆ ಯಾವುದೇ ತೊಂದರೆ, ವ್ಯತ್ಯಯ ಆಗುವುದಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಸವದಿ ಸಿಎಂ ಅವರು ಕರೆ ಮಾಡಿ ಸಾರಿಗೆ ಸಂಚಾರದಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಲು ಹೇಳಿದ್ದಾರೆ.ರಾತ್ರಿ ಹೊರಡುವ ಬಸ್ ಗಳಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ.ಸರಕು ಸಾಕಾಣಿಕೆ ವಾಹನಗಳು ಎಂದಿನಂತೆ ಇರಲಿವೆ. ಟ್ಯಾಕ್ಸಿ ಸಂಘ, ಬಾರ್ ಮಾಲೀಕರು ನೈಟ್ ಕರ್ಪ್ಯೂಗೆ ವಿರೋಧ ಸರಿಯಿಲ್ಲ.
ಜೀವ ಅಮೂಲ್ಯ ಮೊದಲು ಜೀವ ಇದ್ದಾಗ ಎಲ್ಲಾ ಜೀವ ರಕ್ಷಣೆ ಮೊದಲ ಆದ್ಯತೆ.
ಇಂದು ಮಾರ್ಗಸೂಚಿ ಬಿಡುಗಡೆಯಾಗಲಿದೆ.
ಎಲ್ಲದಕ್ಕೂ ವಿರೋಧ ಮಾಡುವುದು ಪರಿಪಾಠ ಆಗಿದೆ. ಎಲ್ಲದಕ್ಕೂ ವಿರೋಧ ಮಾಡುವುದೇ ಧರ್ಮ ಅಂತಾ ತಿಳಿದ್ದಾರೆ, ಜೀವದ ಜತೆಗೆ ಚೆಲ್ಲಾಟ ಆಗಬಾರದು.
ಮತ್ತೆ ಲಾಕ್ ಡೌನ್ ಆಗುವುದಿಲ್ಲ ಅಂತಾ ತಿಳಿದುಕೊಂಡಿದ್ದೇವೆ
ಮುಂಜಾಗ್ರತಾ ಕ್ರಮವಾಗಿ ನೈಟ್ ಕರ್ಪ್ಯೂ ಜಾರಿಮಾಡಿದ್ದೇವೆ ಎಂದು ಡಿಸಿಎಂ  ಹೇಳಿದ್ದಾರೆ

Please follow and like us:
error