ಬೆಂಗಳೂರು :- ಕೋವಿಡ್-19 ಹಿನ್ನೆಲೆ, ರಾಜ್ಯ ಸರ್ಕಾರವು ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರಿಕೆ ಚಟುವಟಿಕೆಯಲ್ಲಿ ತೊಡಗಿರುವ ಕೂಲಿ ಕಾರ್ಮಿಕರಿಗೆ ನೇರವಾಗಿ ಆಧಾರ್ ಲಿಂಕ್ ಹೊಂದಿರುವ ಬ್ಯಾಂಕ್ ಖಾತೆಗೆ ತಲಾ ರೂ.2000 ಪಾವತಿಸಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
“ಸೇವಾಸಿಂಧು”ವಿನಲ್ಲಿ ಅಗತ್ಯ ದಾಖಾಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅರ್ಜಿಗಳನ್ನು ಭರ್ತಿ ಮಾಡುವ ಕೆಲಸಕ್ಕೆ ಕಂಪ್ಯೂಟರ್ ಆಪರೇಟರ್ಗಳಿಗೆ ತರಬೇತಿ ನೀಡಲಾಗಿದೆ. “ಸೇವಾಸಿಂಧು”ವಿನಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಫೋರ್ಟಲ್ನಲ್ಲಿ ನಿಗದಿತ ಅರ್ಜಿ ನಮೂನೆ, ಮುಚ್ಚಳಿಕೆ ಪತ್ರದ ನಮೂನೆ ಮತ್ತು ಸಲ್ಲಿಸಬೇಕಾದ ದಾಖಾಲಾತಿಗಳ ವಿವರಗಳು ಲಭ್ಯವಿದ್ದು, ಸೌಲಭ್ಯದ ಬಗ್ಗೆ ಪ್ರಚಾರ ಮತ್ತು ತಿಳುವಳಿಕೆ ನೀಡಲು ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರ ಕಛೇರಿಯ, ಗಾರ್ಮೆಂಟ್ಸ್ ತರಬೇತಿ ಸಂಸ್ಥೆ ಅಪೆರಲ್ ಪಾರ್ಕನಲ್ಲಿ ವಿದ್ಯುತ್ ಮಗ್ಗ ನೇಕಾರರ ಸಹಕಾರ ಸಂಘಗಳ ಪ್ರತಿನಿಧಿಗಳಿಗೆ, ನೇಕಾರರ ಹೋರಾಟ ಸಮಿತಿ, ನೇಕಾರರ ಹೋರಾಟ ವೇದಿಕೆ, ನೇಕಾರ ಮುಖಂಡರು, ಮಾಸ್ಟರ್ ವೀವರ್ಸ್ ಮುಂತಾದ ಪ್ರತಿನಿಧಿಗಳಿಗೆ ಮಾಹಿತಿ ಸಭೆ ಹಮ್ಮಿಕೊಳ್ಳಲಾಗಿದೆ.
ಮಾಹಿತಿ ಅಥವಾ ಸ್ಪಷ್ಟೀಕರಣ ಅಗತ್ಯತೆ ಕಂಡುಬಂದಲ್ಲಿ ನೇರವಾಗಿ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ. ಮದ್ಯವರ್ತಿಗಳು ನೇಕಾರರಿಗೆ ತಪ್ಪು ಮಾಹಿತಿ ನೀಡಿ ವಂಚಿಸುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ಪ್ರಕರಣಗಳು ಕಂಡುಬಂದಲ್ಲಿ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು
