ನೆಲ್ಲಿಕಾಯಿ ಆರೋಗ್ಯಕ್ಕೆ ಲಾಭ….!

ನೆಲ್ಲಿಕಾಯಿ ಎಲ್ಲಾ ಕಾಲದಲ್ಲೂ ದೊರೆಯುತ್ತದೆ ಇದನ್ನು ಪ್ರತಿನಿತ್ಯ ತಿಂದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶ ದೊರೆಯುತ್ತದೆ, 14ಯಾವುದೇ ಆರ್ಯುವೇದ ಅಂಗಡಿಗಳಲ್ಲಿ ಕೇಳಿದರೆ ನೆಲ್ಲಿಕಾಯಿಯ ಜ್ಯೂಸ್ ದೊರೆಯುತ್ತದೆ. ಇದನ್ನು ಪ್ರತಿನಿತ್ಯ ನಿಗದಿತ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದು. ಇಲ್ಲಿ ನಾವು ನೆಲ್ಲಿಕಾಯಿ ಜ್ಯೂಸ್ ಅನ್ನು ಪ್ರತಿದಿನ ಕುಡಿದರೆ ದೊರೆಯುವ  ಪ್ರಮುಖ ಪ್ರಯೋಜನಗಳು.

  1. ಅಸ್ತಮಾವನ್ನು ಕಮ್ಮಿ ಮಾಡುತ್ತದೆ ಇದನ್ನು ನಿಗದಿತ ಪ್ರಮಾಣದಲ್ಲಿ ಜೇನು ಜೊತೆ ತೆಗೆದುಕೊಳ್ಳುತ್ತಾ ಬಂದರೆ ಅಸ್ತಮಾ ಕಾಯಿಲೆ ಕಡಿಮೆಯಾಗುವುದು. ಉಸಿರಾಟದ ತೊಂದರೆ ಅನುಭವಿಸುತ್ತಿರುವವರೆಗೆ ಇದು ಅತ್ಯುತ್ತಮವಾದ ಔಷಧಿಯಾಗಿದೆ.
  2. ಮಲಬದ್ಧತೆ ಸಮಸ್ಯೆಯಿಂದ ತುಂಬಾ ಕಾಲದಿಂದ ಬಳಲುತ್ತಿರುವವರು ಆಮ್ಲ ಜ್ಯೂಸ್ ಕುಡಿದರೆ ಈ ಸಮಸ್ಯೆ ಗುಣಮುಖವಾಗುವುದು.
  3. ತಾಜಾ ನೆಲ್ಲಿಕಾಯಿ ರಸವನ್ನು ಜೇನು ಜೊತೆ ಮಿಶ್ರಣ ಮಾಡಿ ಕುಡಿದರೆ ಇದು ರಕ್ತವನ್ನು ಶುದ್ಧೀಕರಿಸುತ್ತದೆ.
  4. ನೆಲ್ಲಿಕಾಯಿ ಜ್ಯೂಸ್ ಅನ್ನು ಪ್ರತಿದಿನ ಎರಡು ಬಾರಿ ಕುಡಿದರೆ ಉರಿ ಮೂತ್ರದ ಸಮಸ್ಯೆ ಇರುವುದಿಲ್ಲ.
  5. ಸೆಕೆಗಾಲದಲ್ಲಿ ದೇಹ ಬೆಂದು ಹೋದ ಅನುಭವ ಉಂಟಾಗುವುದು, ಸೆಕೆಯನ್ನು ತಡೆಯಲು ಪ್ರತೀದಿನ ಸ್ವಲ್ಪ ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಇದು ದೇಹವನ್ನು ತಂಪಾಗಿಡುತ್ತದೆ.
  6. ಮುಟ್ಟಿನ ಸಮಯದಲ್ಲಿ ತುಂಬಾ ರಕ್ತಸ್ರಾವವಾಗುತ್ತಿದ್ದರೆ ಹಣ್ಣಾದ ಬಾಳೆ ಹಣ್ಣನ್ನು ತಿಂದು ಈ ಆಮ್ಲವನ್ನು ಕುಡಿದರೆ ತುಂಬಾ ರಕ್ತಸ್ರಾವವಾಗುವುದಿಲ್ಲ.
  7. ನೆಲ್ಲಿಕಾಯಿ ಜ್ಯೂಸ್ ಅನ್ನು ಸ್ವಲ್ಪ ಜೇನಿಗೆ ಮಿಶ್ರಣ ಮಾಡಿ ಪ್ರತಿದಿನ ಬೆಳಗ್ಗೆ ಕುಡಿಯುತ್ತಾ ಬಂದರೆ ಮುಖದಲ್ಲಿ ಬಿಳಿ ಮಚ್ಚೆ, ಮೊಡವೆ, ಬ್ಯ್ಯಾಕ್ ಹೆಡ್ಸ್ ಈ ರೀತಿಯ ಯಾವುದೇ ಸಮಸ್ಯೆ ಕಂಡು ಬರುವುದಿಲ್ಲ, ಮುಖದ ಕಾಂತಿ ಹೆಚ್ಚುವುದು.
  8. ದೇಹದಲ್ಲಿ ಕೆಂಪು ರಕ್ತ ಕಣ ಕಡಿಮೆಯಾದರೆ ರಕ್ತ ಹೀನತೆ ಉಂಟಾಗುವುದು, ನೆಲ್ಲಿಕಾಯಿ ಜ್ಯೂಸ್ ರಕ್ತಹೀನತೆಯನ್ನು ತಡೆಯುತ್ತದೆ
  9. ನೆಲ್ಲಿಕಾಯಿ ಜ್ಯೂಸ್ ಸ್ನಾಯುಗಳಿಗೆ ಶಕ್ತಿಯನ್ನು ತುಂಬುತ್ತದೆ, ಹೃದಯದ ನರಗಳ ಅರೋಗ್ಯ ಹೆಚ್ಚಿಸಿ, ಹೃದಯ ಸಂಬಂಧಿತ ಸಮಸ್ಯೆ ಬರುವುದನ್ನು ತಡೆಯುತ್ತದೆ.
  10. ಪೈಲ್ಸ್ ಅಥವಾ ಮೂಲವ್ಯಾಧಿ ಸಮಸ್ಯೆ ಇರುವವರಿಗೆ ಮಲಬದ್ಧತೆ ಕಂಡು ಬರುವುದು ಸಹಜ. ಈ ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಆ ಸಮಸ್ಯೆಯಿಂದ ಪಾರಾಗಬಹುದು.
  11. ನೆಲ್ಲಿಕಾಯಿ ಕ್ಯೂವ್ಸ್ ಕುಡಿಯುವುದರಿಂದ ಕ್ರಮೇಣ ಕಣ್ಣಿನ ಆರೋಗ್ಯ ಹೆಚ್ಚುವುದು.
  12. ಮುಖದಲ್ಲಿ ಅಕಾಲಿಕ ನೆರಿಗೆಯನ್ನು ತಡೆಗಟ್ಟುತ್ತದೆ, ತ್ವಚೆ ರಕ್ಷಣೆಯನ್ನು ಮಾಡುತ್ತದೆ.
  13. ನೆಲ್ಲಿಕಾಯಿ ಜ್ಯೂಸ್ ಅನ್ನು ಅರಿಶಿಣ ಹಾಗೂ ಜೇನು ಜೊತೆ ಕುಡಿದರೆ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.
  14. ನೆಲ್ಲಿಕಾಯಿ ಜ್ಯೂಸ್  ಕುಡಿಯುವುದರಿಂದ ದೇಹದಲ್ಲಿರುವ ಅಧಿಕ ಕೊಬ್ಬಿನಂಶ ಕರಗುತ್ತದೆ, ಇದರಿಂದ ನೀವು ಸಮತೂಕವನ್ನು ಪಡೆಯಬಹುದು.

 

Related posts

Leave a Comment