ನೂರಾರು ಕೋಟಿ ಸಿಕ್ಕಿದೆ ಎನ್ನುವ  ಸುದ್ದಿ ಸಂಪೂರ್ಣ ಆಧಾರರಹಿತ – ಜಿ.ಪರಮೇಶ್ವರ

ಬೆಂಗಳೂರು : ಐಟಿ ಅಧಿಕಾರಿಗಳು ಪರಿಶೀಲನೆ  ನಡೆಸಿದ್ದು , ಮಂಗಳವಾರ ವಿಚಾರಣೆಗೆ ಕರೆದಿದ್ದಾರೆ . ಅಂದು ಅವರ ಎಲ್ಲಾ ಪ್ರಶ್ನೆಗಳಿಗೂ ಸಮಂಜಸ ಉತ್ತರ ಹಾಗೂ ದಾಖಲೆ ಪತ್ರವನ್ನು ನೀಡಲಿದ್ದೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ . ಜಿ . ಪರಮೇಶ್ವರ್‌ ಹೇಳಿದ್ದಾರೆ . ಸದಾಶಿವನಗರದಲ್ಲಿ 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಕೆಲ ಮಾಧ್ಯಮದಲ್ಲಿ 3 , 500 ಕೋಟಿ ರೂ . ಕಿಕ್ ಬ್ಯಾಕ್ ತೆಗೆದುಕೊಂಡಿದ್ದಾರೆ ಹಾಗೂ 400 ಕೋಟಿ ರೂ . ನಗದು ಸಿಕ್ಕಿದೆ ಎಂದು ಪ್ರಸಾರ ಮಾಡಿದ್ದಾರೆ . ಆದರೆ ಇದು ಸಂಪೂರ್ಣ ಆಧಾರ ರಹಿತವಾದದ್ದು . ಮಾಧ್ಯಮಗಳು ಸುದ್ದಿ ಪ್ರಸಾರ ಮಾಡುವ ಮೊದಲು ಸತ್ಯಾಸತ್ಯತೆಯನ್ನು ಅರಿಯಲಿ ಎಂದರು . ಐಟಿ ಅಧಿಕಾರಿಗಳು ಮನೆ ಸೇರಿದಂತೆ ಕಾಲೇಜಿನಲ್ಲಿ ಪರಿಶೀಲನೆ ನಡೆಸಿದ್ದಾರೆ . ಅದಕ್ಕೆ ಸೂಕ್ತ ದಾಖಲಾತಿಯನ್ನು ನೀಡಿದ್ದೇನೆ . ಬಳಿಕ ಕೆಲ ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿದ್ದಾರೆ . ಅಂತೆಯೇ ಸಮರ್ಪಕ ಉತ್ತರ ನೀಡಿದ್ದೇನೆ . ವೈದ್ಯಕೀಯ ಸೀಟು ಹಂಚಿಕೆ ನೀಟ್ ಮೂಲಕ ಆಗಲಿದೆ . ನಾನು 30 ವರ್ಷ ಕಾಲೇಜು ಮಂಡಳಿಯಲ್ಲಿ ಸದಸ್ಯನಿದ್ದರೂ ಹೆಚ್ಚಾಗಿ ಕಾಲೇಜು ಕಾರ್ಯ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರಲಿಲ್ಲ . ನನ್ನ ಸಹೋದರ ನಿಧನದ ಬಳಿಕ ಜವಾಬ್ದಾರಿ ನನ್ನ ಮೇಲಿದೆ . ದಾಖಲಾತಿ ವಿಷಯದಲ್ಲಿ ನನಗೆ ಹೆಚ್ಚು ಮಾಹಿತಿ ಇರಲಿಲ್ಲ . ಸಹೋದರ ಮಗ ಆನಂದ್ ಕೂಡ ಇರುತ್ತಿದ್ದರು . ದಾಖಲಾತಿ ವಿಷಯದಲ್ಲಿ ನೇರ ಹೊಣೆಗಾರಿಕೆ ಇರಲಿಲ್ಲ ಎಂದರು . ಐಟಿ ಅಧಿಕಾರಿಗಳು ಸಂಪೂರ್ಣ ಪರಿಶೀಲನೆ ಪೂರ್ಣ ಪರಿಶೀಲನೆ ಮುಗಿಸಲಿ . ನಂತರ ನಮ್ಮ ಬಳಿಯ ಇರುವ ಎಲ್ಲಾ ದಾಖಲಾತಿ ನೀಡುತ್ತೇವೆ . ಅದಕ್ಕೆ ಸಮಂಜಸ ಉತ್ತರ ನೀಡುತ್ತೇನೆ ಎಂದರು .

Please follow and like us:

Related posts