ನಿರಂತರ ಮಳೆಗೆ ಗೋಡೆ ಕುಸಿತ : ಮೂವರ ಸಾವು

ಬಾಗಲಕೋಟೆ : ಎಡೆಬಿಡದೆ ಸುರಿಯುತ್ತಿರುವ ಮಳೆ ಮೂವರನ್ನು  ಬಲಿ ತೆಗೆದುಕೊಂಡಿದೆ‌  . ನಿನ್ನೆ ತಡರಾತ್ರಿ ಮನೆಯ ಮಾಳಿಗೆ ಕುಸಿದು ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ತಾಲೂಕಿನ ಕಿರಸೂರು ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ಮಲಗಿದ್ದವರ ಮೇಲೆ ಮನೆಯ ಮಾಳಿಗೆ ಕುಸಿದು ಬಿದ್ದಿದೆ. ಇದರಿಂದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.   ಒಟ್ಟು ಐವರು ಸದಸ್ಯರು ಮನೆಯಲ್ಲಿ ಮಲಗಿದ್ದದರು.  ಎರಡು ಗಂಟೆಗೆ ಈ ಘಟನೆ ನಡೆದಿದೆ ಎನ್ನಲಾಗುತ್ತದೆ. ಮೂವರು ಸಾವನ್ನಪ್ಪಿದ್ದು ತಂದೆ ಈರಪ್ಪ (೬೦),ತಾಯಿ ಗೌರವ್ವ(೫೩),ಮಗ ನಿಂಗಪ್ಪ(೩೨)ಎಂದು ಗುರ್ತಿಸಲಾಗಿದೆ. 

 ನಿಂಗಪ್ಪನ‌ ಪತ್ನಿ ಸವಿತಾ ಹಾಗೂ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ಅಗ್ನಿ ಶಾಮಕ ಸಿಬ್ಬಂಧಿ ಸತತ ಆರು ಗಂಟೆಗಳ ಕಾರ್ಯಾಚರಣೆಯಿಂದ ಮನೆಯ ಅವಶೇಷಗಳ ಅಡಿ ಸಿಲುಕಿದ್ದ ಮೂವರ ಶವಗಳನ್ನ ಹೊರತೆಗೆದಿದ್ದಾರೆ. ಇನ್ನು ಘಟನೆ ತಿಳಿದ ತಕ್ಷಣ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಾಯಕ್ಕ ಮೇಟಿ ಹಾಗೂ ಎಸ್ಪಿ ಲೋಕೇಶ್  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ…

Please follow and like us:
error