ನಿಯಮ ಪಾಲಿಸದ ಅಂಗಡಿಗಳಿಗೆ ಸೀಲ್, ಫೋಕಸ್ ಮಾರ್ಟಗೆ ದಂಡ

ಕೊಪ್ಪಳ : ನಿಯಮ ಪಾಲಿಸದೇ ರಾತ್ರಿ ೮ ಗಂಟೆಯ ಮೇಲೂ ಸಹ  ತೆರೆದಿದ್ದ ಅಂಗಡಿಗಳನ್ನು ಎಸಿ ನಾರಾಯಣರೆಡ್ಡಿ ಕನಕ ರೆಡ್ಡಿ, ನಗರಸಭೆ ಆಯುಕ್ತರು ಸೀಲ್ ಮಾಡಿದರು. ಜೆಪಿ ಮಾರುಕಟ್ಟೆಯಲ್ಲಿ ಪೋಲಿಸರು ಮುಚ್ಚಿಸುವದಕ್ಕೆ ಹೇಳಿ ಹೋದ ನಂತರವೂ ತೆರೆದಿದ್ದ ಚಪ್ಪಲಿ ಅಂಗಡಿ, ಹೊಸಪೇಟೆ ರಸ್ತೆಯ ಪೆಂಟ್ಸ್ ಅಂಗಡಿಗಳನ್ನು ಸೀಜ್ ಮಾಡಲಾಯಿತು. ಕುಷ್ಟಗಿ ಸರ್ಕಲ್ ಬಳಿ ಇರುವ ಫೋಕಸ್ ಮಾರ್ಟನಲ್ಲಿ ಗ್ರಾಹಕರಿಗೆ ಅವಕಾಶ ನೀಡಿದ್ದಾಕ್ಕಾಗಿ ದಂಡ ವಿಧಿಸಲಾಯಿತು. ಕರೋನಾ ಹರಡುವದನ್ನು ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ. ಸರಕಾರದ ಆದೇಶಗಳ ಹೊರತಾಗಿಯೂ ಈ ರೀತಿ ಅಂಗಡಿಗಳನ್ನು ತೆರೆಯುವುದು ಸರಿಯಲ್ಲ ,ತೆರೆದರೆ ದಂಡ ವಿಧಿಸಲಾಗುವುದು, ಸೀಲ್ ಮಾಡಲಾಗವುದು ಎಂದು ಉಪವಿಭಾಗ ಅಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ ಎಚ್ಚರಿಕೆ ನೀಡಿದರು. ಬಂದೋಬಸ್ತಿನ ಸಂದರ್ಭದಲ್ಲಿ ಡಿಸ್ಪಿ, ಟ್ರಾಪಿಕ್ ಠಾಣೆಯ ಅಧಿಕಾರಿಗಳು,ಪೋಲಿಸರು ಹಾಗೂ ಮಗರಸಭೆಯ ಅಧಿಕಾರಿಗಳು ಜೊತೆಗಿದ್ದರು.

Please follow and like us:
error