ನಾಳೆ ಕೊಪ್ಪಳ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಿಎಸ್ವೈ ಪ್ರವಾಸ


ಕೊಪ್ಪಳ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜನವರಿ. 09 ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಮುಖ್ಯಮAತ್ರಿಗಳು ಅಂದು ಬೆಳಿಗ್ಗೆ 09-30 ಗಂಟೆಗೆ ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ನಿರ್ಗಮಿಸಿ ವಿಶೇಷ ವಿಮಾನದ ಮೂಲಕ ಬೆಳಿಗ್ಗೆ 10-30 ಗಂಟೆಗೆ ಕೊಪ್ಪಳ ತಾಲ್ಲೂಕಿನ ಗಿಣಿಗೇರಾ ಏರ್‌ಸ್ಟಿçಪ್(ಎಂ.ಎಸ್.ಪಿ.ಎಲ್ ವಿಮಾನ ನಿಲ್ದಾಣ) ಗೆ ಆಗಮಿಸುವರು. ಬೆಳಿಗ್ಗೆ 10-40 ಗಂಟೆಗೆ ಗಿಣಿಗೇರಾ ಏರ್‌ಸ್ಟಿçಪ್‌ನಿಂದ ನಿರ್ಗಮಿಸಿ ರಸ್ತೆ ಮಾರ್ಗವಾಗಿ ಬೆಳಿಗ್ಗೆ 11 ಗಂಟೆಗೆ ಕುಕನೂರು ತಾಲ್ಲೂಕಿನ ಭಾನಾಪುರ ಗ್ರಾಮಕ್ಕೆ ಆಗಮಿಸುವರು.
ಭಾನಾಪುರ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿರುವ ಮಣ್ಣು ಪರೀಕ್ಷಾ ಸಂಚಾರಿ ವಾಹನಗಳಿಗೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡುವರು. ನಂತರ ಎಂ/ಎಸ್ ಏಕಸ್ (M/S AEQUS) ಸಂಸ್ಥೆಯ ವತಿಯಿಂದ ಆಯೋಜಿಸಿರುವ ಕೊಪ್ಪಳದ ಆಟಿಕೆಗಳ ಕ್ಲಸ್ಟರ್‌ನ ಭೂಮಿ ಪೂಜೆ ನೆರವೇರಿಸುವರು. ಮಧ್ಯಾಹ್ನ 12-30 ಗಂಟೆಗೆ ಕಾರ್ಯಕ್ರಮವನ್ನು ಕಾಯ್ದಿರಿಸಲಾಗಿದೆ.

ಮಧ್ಯಾಹ್ನ 01 ಗಂಟೆಗೆ ಭಾನಾಪುರ ಗ್ರಾಮದಿಂದ ನಿರ್ಗಮಿಸಿ ರಸ್ತೆ ಮಾರ್ಗವಾಗಿ ಮಧ್ಯಾಹ್ನ 1-20 ಗಂಟೆಗೆ ಗಿಣಿಗೇರಾ ಏರ್‌ಸ್ಟಿçಪ್‌ಗೆ ಆಗಮಿಸುವರು. ಮಧ್ಯಾಹ್ನ 1-30 ಗಂಟೆಗೆ ಗಿಣಿಗೇರಾ ಏರ್‌ಸ್ಟಿçಪ್‌ನಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರು ಕಡೆಗೆ ಪ್ರಯಾಣ ಬೆಳಸುವರು ಎಂದು ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ತಿಳಿಸಿದ್ದಾರೆ.

Please follow and like us:
error