ನಾಳೆ ಕೊಪ್ಪಳದಲ್ಲಿ ರಾಮಮಂದಿರ ನಿಧಿ ಸಮರ್ಪಣ ಅಭಿಯಾನ

ಕೊಪ್ಪಳ : ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟನ ಯೋಜನೆಯ ಅನ್ವಯ ಮಂದಿರ ನಿರ್ಮಾಣಕ್ಕಾಗಿ ಕೊಪ್ಪಳದಲ್ಲಿ ಧನ ಸಂಗ್ರಹಣೆ ಅಭಿಯಾನ ನಾಳೆ ನಡೆಯಲಿದೆ , ಕೊಪ್ಪಳ ನಗರದಲ್ಲಿ ನಾಳೆ ಬೀದಿ ಬೀದಿಗಳಲ್ಲಿ ಸಂಚರಿಸಿ ದೇಣಿಗೆ ಸಂಗ್ರಹಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಮನೋಹರ ಮಠದ ಹೇಳಿದರು.
ಇಡೀ ರಾಷ್ಟ್ರದಾದ್ಯಂತ ರಾಮ ಮಂದಿರ ಕಟ್ಟುವುದಕ್ಕೆ ನಿಧಿ ಸಂಗ್ರಹಣೆ ಮಾಡಲಾಗುತ್ತಿದ್ದು ೪ ಲಕ್ಷ ಹಳ್ಳಿಗಳನ್ನು ೧೧ ಕೋಟಿ ಕುಟುಂಭಗಳನ್ನು ತಲುಪಲಿದೆ. ನಿಧಿ ಸಂಗ್ರಹಣೆ‌ ಮಾಡಿ ಭಕ್ತರಿಗೆ ರಸೀದಿ ನೀಡಲಾಗುತ್ತೆ. ೫ ಕಾರ್ಯಕರ್ತರನ್ನು ಒಳಗೊಂಡ ತಂಡ ಈ ನಿಧಿ ಸಮರ್ಪಣಾ ಅಭಿಯಾನದಲ್ಲಿ ಸಂಗ್ರಹವಾದ ಹಣವನ್ನು ೪೮ ಗಂಟೆಯೊಳಗೆ ತೀರ್ಥಕ್ಷೇತ್ರ ಟ್ರಸ್ಟನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ೫ನೇ ತಾರೀಖು ಕೊನೆಯ ದಿನವಾಗಿದ್ದು ನಂತರ ಇಡೀ ಜಿಲ್ಲೆಯಲ್ಲಿ ಸಂಗ್ರಹವಾದ ದೇಣಿಗೆಯ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಬಸವರಾಜ್ ಡಂಬಳ, ಪ್ರಾಣೇಶ್ ಜೋಷಿ, ಶಿವಕುಮಾರ ಹಕ್ಕಾಪಕ್ಕಿ, ಅಯ್ಯನಗೌಡ್ರ, ವೇಣುಗೋಪಾಲ ಜಹಗೀರದಾರ ಉಪಸ್ಥಿತರಿದ್ದರು.

Please follow and like us:
error