ನಾಲಗೆ ಜೊತೆಗೆ ಮರ್ಮಾಂಗಕ್ಕೂ ಕತ್ತರಿ!

crime_bangalore

ಬೆಂಗಳೂರು :  ನಗರದ ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳ ತಂಡ ಯುವಕನೊಬ್ಬನ ನಾಲಗೆಯ ಜೊತೆಗೆ ಮರ್ಮಾಂಗವನ್ನು ಕತ್ತರಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಇಮ್ಮಡಿಹಳ್ಳಿಯಲ್ಲಿ ತಡರಾತ್ರಿ ದುಷ್ಕರ್ಮಿಗಳ ತಂಡವೊಂದು ಒಡಿಶಾ ಮೂಲದ ಬಿಜುನಾಯಕ್(20ವರ್ಷ) ಎಂಬ ಯುವಕನ ನಾಲಗೆಯನ್ನು ಕತ್ತರಿಸಿಹಾಕಿತ್ತು ಎಂದು ಮೊದಲು ವರದಿಯಾಗಿತ್ತು. ಇದೀಗ ನಾಲಿಗೆಯ ಜೊತೆಗೆ ಮರ್ಮಾಂಗಕ್ಕೂ ಕತ್ತರಿ ಹಾಕಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಗುರುವಾರ ಮಧ್ಯರಾತ್ರಿ ಮೂತ್ರವಿಸರ್ಜನೆಗೆ ತೆರಳಿದ್ದ ವೇಳೆ ದುಷ್ಕರ್ಮಿಗಳು ಬಿಜುನಾಯಕ್‌ನ ನಾಲಗೆಯ ಜೊತೆಗೆ ಮರ್ಮಾಂಗಕ್ಕೂ ಕತ್ತರಿ ಹಾಕಿದ್ದಾರೆಂದು ತಿಳಿದುಬಂದಿದೆ.

ಮಾತನಾಡಲು ಸಾಧ್ಯವಾಗದೇ, ಕೈಸನ್ನೆ ಮೂಲಕ ಘಟನೆಯ ವಿವರ ನೀಡಲು ಯತ್ನಿಸುತ್ತಿದ್ದ ಯುವಕನ ನೆರವಿಗೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಿಕಿತ್ಸೆಗಾಗಿ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Please follow and like us:

Leave a Reply