Koppal : ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ. ಲೋಕಸಭೆ ಚುನಾವಣೆಗೆ
ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಹಿರಿಯ ಕಾಂಗ್ರೆಸ್ ಮುಖಂಡ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ. ಬಿಜೆಪಿ ಸೇರ್ಪಡೆಯ ಕುರಿತು ಹಬ್ಬಿರುವ ವದಂತಿಗಳ ಬಗ್ಗೆ ಮಾತನಾಡಿದ ಅವರು
ಈಗಲೂ ನನಗೆ ಕಾಂಗ್ರೆಸ್ ನಿಂದಲೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೇಟ್ ನೀಡಲು ಪಕ್ಷ ಸಿದ್ದವಿದೆ ಆದರೆ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ನಿನ್ನೆ ರಾತ್ರಿ ರಾಜಶೇಖರ ಹಿಟ್ನಾಳ್ ಗೆ ಸಿದ್ದರಾಮಯ್ಯನವರ ಜೊತೆ ಕುಳಿತೇ ಟಿಕೇಟ್ ಫೈನಲ್ ಮಾಡಿದ್ದೇವೆ ಈಗಿರುವಾಗ ಬಿಜೆಪಿ ಸೇರುವ ಪ್ರಶ್ನೇಯೇ ಇಲ್ಲ. ಸೇರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಕೆಲವು ದಿನಗಳಿಂದ ಬಸವರಾಜ್ ರಾಯರೆಡ್ಡಿ ಬಿಜೆಪಿ ಪಕ್ಷ ಸೇರುತ್ತಾರೆ ಎನ್ನುವ ಗಾಳಿ ಸುದ್ದಿ ಹರಿದಾಡುತ್ತಿವೆ. ಇದರಿಂದಾಗಿ ಅವರ ಬೆಂಬಲಿಗರಲ್ಲಿಯೇ ಗೊಂದಲ ಸೃಷ್ಠಿಯಾಗಿದೆ. ಅಲ್ಲದೇ ಇದಕ್ಕೆ ಪುಷ್ಟಿ ಕೊಡುವಂತೆ ಯಲಬುರ್ಗಾದ ಕೆಲವು ಅಭಿಮಾನಿಗಳು ಫೇಸ್ ಬುಕ್ ನಲ್ಲಿ ರಾಯರೆಡ್ಡಿಯವರ ಫೋಟೊ ಹಾಕಿ ಬಿಜೆಪಿಯ ಚಿಹ್ನೆಯನ್ನು ಹಾಕಿ ಪೋಸ್ಟ್ ಮಾಡಿದ್ದಾರೆ. ದೇಶಕ್ಕಾಗಿ ಮೋದಿ ,ಮೋದಿಗಾಗಿ ನಾವು ಎನ್ನು ಪೋಸ್ಟ್ ಗಳನ್ನು ಶೇರ್ ಮಾಡಿದ್ದಾರೆ. ಇದು ಜಿಲ್ಲೆಯಾದ್ಯಂತ ಹೊಸ ಅಂಚಲನ ಸೃಷ್ಠಿಸಿದೆ.ಅಭಿಮಾಬಿಗಳಲ್ಲಿ ಆತಂಕ ಸೃಷ್ಠಿಸಿದೆ. ಈ ಹಿನ್ನೆಲಯಲ್ಲಿ ತಮ್ಮ ನಿಲುವನ್ನು ರಾಯರೆಡ್ಡಿಯವರು ಸ್ಪಷ್ಟಪಡಿಸಿದ್ದಾರೆ.
ಕೆಲವು ಬಿಜೆಪಿ ಅಭಿಮಾನಿಗಳು ಬಿಜೆಪಿಗೆ ಕರೆಯುತ್ತಿದ್ದಾರೆ. ಅವರಿಗೆ ಧನ್ಯವಾದಗಳು ಎಂದು ಹೇಳಿದರು.