ನಾನು ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ- ಡಿಸಿಎಂ ಲಕ್ಷ್ಮಣ ಸವದಿ

ಅಥಣಿ : ನಾನೇ ಅಭ್ಯರ್ಥಿ ಆಗಬೇಕು ಅಂತಾ ಕಾರ್ಯಕರ್ತರು ಬಯಸಿದ್ರುಹೀಗಾಗಿ ಕಾರ್ಯಕರ್ತರಲ್ಲಿ ಗೊಂದಲಗಳಿದ್ದವು ನಿನ್ನೆ ಸಿಎಂ ಬಂದ ಮೇಲೆ ಆ ಗೊಂದಲಗಳಿಗೆಲ್ಲ ತೆರೆ ಬಿದ್ದಿದೆ ನನ್ನ ಭಾಷಣಕ್ಕೆ ಸಿಎಂ ಕೂಡ ನಿನ್ನೆ ಭಾವುಕರಾಗಿದ್ದಾರೆ ನಾನು ಬಿಚ್ಚು ಮನಸ್ಸಿನಿಂದ ಎಲೆಕ್ಷನ್ ಮಾಡ್ತೇನೋ ಇಲ್ಲೋ ಅನ್ನೋ ಸಂಶಯ ಅವರಿಗಿತ್ತು ಆದರೆ ನಿನ್ನೆ ಅವರಿಗೆ ಎಲ್ಲವೂ ಕ್ಲಿಯರ್ ಆಗಿ 
ಭಾವುಕರಾಗಿದ್ದರು ನಾನು ಪಕ್ಷದ ಶಿಸ್ತಿನ ಸಿಪಾಯಿ ಯಾವ ಪಕ್ಷದಲ್ಲಿ ಇದ್ದರೂ ಇರೋ ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೈ ಕಾಲು ಹಿಡಿದು ಅನರ್ಹರು ಅನುದಾನ ತರಬಹುದಿತ್ತು ಎಂಬ ಹೆಬ್ಬಾಳಕರ ಹೇಳಿಕೆ ಗೆ ಪ್ರತಿಕ್ರಿಯೆ ನೀಡಿ ಸಮ್ಮಿಶ್ರ ಸರ್ಕಾರದಲ್ಲಿ ಆ ಸಂಸ್ಕೃತಿ ಇತ್ತು ಕಾಂಗ್ರೆಸ್ ಆ ಸಂಸ್ಕೃತಿ ಮುಂದುವರೆಸಿಕೊಂಡು ಬಂದಿದೆ ನಮ್ಮ ಪಕ್ಷದಲ್ಲಿ ಕಾಲು ಬೀಳುವ ಆ ಸಂಸ್ಕೃತಿಯೇ ಇಲ್ಲ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲ ಇಲ್ಲ ಅಂತಾ ಅಲ್ಲಿನ ಬಹುತೇಕರಿಗೆ ಮನವರಿಕೆ ಆಗಿದೆ ಆ ವಾತಾವರಣ ನೋಡಿ ಬಿಜೆಪಿಗೆ ಬಂದ್ರೆ ನಮಗೆ ಒಳ್ಳೆ ಭವಿಷ್ಯ ಇದೆ ಅಂತಾ ತಿಳಿದಿದ್ದಾರೆ ಮುಂದಿನ ದಿನಗಳಲ್ಲಿ ಇನ್ನು ಬಹಳಷ್ಟು ಜನ ಬಿಜೆಪಿಗೆ ಬರಬಹುದು ಅವರ ಪಕ್ಷದಲ್ಲಿ ಗುಂಪುಗಾರಿಕೆ ಇದೆ ಪರಮೇಶ್ವರ, ಖರ್ಗೆ, ಡಿಕೆಶಿ, ಸಿದ್ದರಾಮಯ್ಯ ಗುಂಪುಗಳಿವೆ ಸದ್ಯಕ್ಕಂತೂ ಕಾಂಗ್ರೆಸ್.ಗೆ ಭವಿಷ್ಯ ಇಲ್ಲ ಎಂದು ಟಾಂಗ್ ನೀಡಿದರು.

Please follow and like us:
error