ನಾಡೋಜ ಹಂಪನಾ ಅಪಮಾನ : ನಾಳೆ ಖಂಡನಾ ಸಭೆ

ಕನ್ನಡನೆಟ್ ನ್ಯೂಸ್ : ಹಿರಿಯ ಸಾಹಿತಿ , ನಾಡೋಜ ಹಂಪನಾ ಅವರನ್ನು ಪೊಲೀಸ್ ಠಾಣೆಗೆ ಕರೆಸಿ , ಅಪಮಾನಿಸಿದ ಘಟನೆ ವಿರೋಧಿಸಿ ನಾಳೆ ( 25-1-2021 ) ಸಂಜೆ 4 ಗಂಟೆಗೆ ಬೆಂಗಳೂರಿನ ಗಾಂಧಿನಗರದ 5 ನೇ ಮುಖ್ಯರಸ್ತೆಯ ಹೋಟೆಲ್ ಜಿಯಾನ್ ಸಭಾಂಗಣದಲ್ಲಿ ಖಂಡನಾ ಸಭೆ ಏರ್ಪಡಿಸಿದ್ದೇವೆ . ನಾಡಿನ ಹೆಸರಾಂತ ಸಾಹಿತಿಗಳು , ನಿವೃತ್ತ ನ್ಯಾಯಮೂರ್ತಿಗಳು , ಪ್ರಾಜ್ಞರು ಪಾಲ್ಗೊಳ್ಳಲಿದ್ದಾರೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ್ರು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ್ದಾರೆ.

Please follow and like us:
error