ನಾಡೋಜ ಸುಭದ್ರಮ್ಮ ಮನ್ಸೂರು ಇನ್ನಿಲ್ಲ

ಹಿರಿಯ ರಂಗ ಕಲಾವಿದೆ

ಬಳ್ಳಾರಿ: ಹಿರಿಯ ರಂಗಭೂಮಿ ಕಲಾವಿದೆ, ಗಾಯಕಿ, ಸುಭದ್ರಮ್ಮ ಮನ್ಸೂರ್‌ ಬುಧವಾರ ಮಧ್ಯರಾತ್ರಿ 11.30 ರ ಸಮಯದಲ್ಲಿ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ಆಗಿತ್ತು.

ಬಳ್ಳಾರಿ ನಗರದ ರೇಡಿಯೋಪಾರ್ಕ್‌ ಪ್ರದೇಶದ ಅವರ ಮನೆಯಲ್ಲಿ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ತಕ್ಷಣ ಅಲ್ಲಿನ ವಿಮ್ಸ್‌ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದರು.
ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅವರು ಅಗಲಿದ್ದಾರೆ.

ಹಂಪಿ‌ಕನ್ನಡ ವಿವಿಯ ನಾಡೋಜ, ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಯಲಯದ ಗೌರವ ಡಾಕ್ಟರೇಟ್, ರಾಜ್ಯೋತ್ಸವ, ನಾಟಲ ಅಕಾಡೆಮಿ, ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು.

Please follow and like us:
error