ನಾಡಿನ ಹೆಮ್ಮೆಯ ಚೇತನ
ದೊರೆಸ್ವಾಮಿ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪ

ಬೆಂಗಳೂರು:
ನಮ್ಮ ನಡುವೆ ಆತ್ಮಸಾಕ್ಷಿಯಂತಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ಕೋವಿಡ್ ಸೋಂಕು ಗೆದ್ದು ಬಂದಿದ್ದು ಸಂತೋಷವಾಗಿತ್ತು. ದುರಾದೃಷ್ಟವಶಾತ್ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದು ನೋವಿನ ಸಂಗತಿ.

ದೊರೆಸ್ವಾಮಿ ಅವರು ಸ್ವತಃ ಪತ್ರಕರ್ತರಾಗಿ, ಹೋರಾಟಗಾರರಾಗಿ ಸಾರ್ವಜನಿಕ ಬದುಕಿನಲ್ಲಿ ಗಮನಸೆಳೆದ ನಾಡಿನ ಹೆಮ್ಮೆಯ ವ್ಯಕ್ತಿತ್ವ ಅವರದು.

ಒಂದು ಅವಧಿಗೆ ದೊರೆಸ್ವಾಮಿ ಅವರು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಕೂಡ ಅಭಿಮಾನದ ಸಂಗತಿ.

ಸುಧೀರ್ಘ ಅವಧಿ ಸೇವೆ ಸ್ಮರಿಸಿ, ಮೈಸೂರಿನ ಸುತ್ತೂರಿನಲ್ಲಿ ನಡೆದ 34ನೇ ಕೆಯುಡಬ್ಲ್ಯೂಜೆ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಶತಾಯುಷಿಗಳಾದ ಎಚ್.ಎಸ್. ದೊರೆಸ್ವಾಮಿ ಅವರನ್ನು ಅಭಿಮಾನದಿಂದ ಅಭಿನಂದಿಸಲಾಗಿತ್ತು.

ಹಿರಿಯ ಚೇತನ ದೊರೆಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಪ್ರಾರ್ಥಿಸಿದ್ದಾರೆ.

Please follow and like us:
error