ನಾಡಕವಿ ಗವಿಸಿದ್ಧ ಎನ್. ಬಳ್ಳಾರಿ – ಕಾವ್ಯ ಪ್ರಶಸ್ತಿಗೆ : ಹಸ್ತಪ್ರತಿ ಆಹ್ವಾನ

ಕೊಪ್ಪಳ : ೨೦೨೦ ನೇ ಸಾಲಿನ ನಾಡಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿಗಳನ್ನು ರಾಜ್ಯಮಟ್ಟದಲ್ಲಿ ಆಹ್ವಾನಿಸಲಾಗಿದೆ. ಕಳೆದ ವರ್ಷದಿಂದ ಕೊಡಮಾಡುತ್ತಿರುವ ಈ ಪ್ರಶಸ್ತಿಯು ರೂ. ೫,೦೦೦ ಮತ್ತು ಬೆಳ್ಳಿ ಪದಕ ಒಳಗೊಂಡಿದೆ. ಆಯ್ಕೆಯಾದ ಹಸ್ತಪ್ರತಿಯನ್ನು ತಳಮಳ ಪ್ರಕಾಶನದಲ್ಲಿ ಮುದ್ರಿಸಲಾಗುತ್ತದೆ. ೨೦‍‍೧೯ ನೇ ಸಾಲಿನ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಶಿವಮೊಗ್ಗದ ಎನ್. ರವಿಕುಮಾರ್ ಟೆಲೆಕ್ಸ್ ಅವರ ಹಸ್ತಪ್ರತಿ ಆಯ್ಕೆಯಾಗಿತ್ತು. ಕವಿಗಳು ತಮ್ಮ ಹಸ್ತಪ್ರತಿಯ ಕುರಿತಾಗಿ ಚರ್ಚೆ ಮಾಡುವದಾಗಲೀ ಅಥವಾ ಪತ್ರ ವ್ಯವಹಾರಕ್ಕಾಗಲೀ ಅವಕಾಶವಿಲ್ಲ. ಹಸ್ತಪ್ರತಿ ತಲುಪಿದ ಕೂಡಲೇ ಕವಿಗಳಿಗೆ ತಿಳಿಸಲಾಗುವುದು. ಹಸ್ತಪ್ರತಿಯ ಯಾವುದೇ ಪುಟದಲ್ಲಿ ಕವಿಗಳು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ನಮೂದಿಸಬಾರದು. ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಪ್ರತ್ಯೇಕ ಪುಟದಲ್ಲಿರಲಿ. ಹಸ್ತಪ್ರತಿಗಳನ್ನು ಯಾವುದೇ ಕಾರಣಕ್ಕೂ ಮರಳಿಸಲಾಗುವುದಿಲ್ಲವಾದ್ದರಿಂದ ಹಸ್ತಪ್ರತಿಯ ಒಂದು ಪ್ರತಿಯನ್ನು ಕವಿಗಳು ತಮ್ಮ ಬಳಿ ಇಟ್ಟುಕೊಂಡಿರುವುದು ಒಳಿತು. ಆಸಕ್ತ ಕವಿಗಳು ತಮ್ಮ ಹಸ್ತಪ್ರತಿಗಳನ್ನು : ಮಹೇಶ ಬಳ್ಳಾರಿ, ಜವಾಹರ ರಸ್ತೆ, ಕೊಪ್ಪಳ – ೫೮೩ ೨೩೧, ಮೊ. ೯೦೦೮೯೯೬೬೨೪ ವಿಳಾಸಕ್ಕೆ ದಿನಾಂಕ : ೨೬-೦೯-೨೦೨೦ ರ ಒಳಗಾಗಿ ಕಳುಹಿಸಬಹುದು. ಮಾಹಿತಿಗಾಗಿ ರಮೇಶ ಬನ್ನಿ‍ಕೊಪ್ಪ ೯೯೦೨೭೪೬೨೩೫ ಇವರನ್ನೂ ಸಂಪರ್ಕಿಸಬಹುದು.

Please follow and like us:
error