ನಮ್ಮದೇ ಆದ ಪ್ರಾದೇಶಿಕ ಪಕ್ಷ ಬೇಕು- ಉಪೇಂದ್ರ

ಕೊಪ್ಪಳ : ಸುಮಲತಾ ಅವರು ಅಂಬರೀಷ ಅಣ್ಣವರ ಪತ್ನಿ ಅವರು ನಮಗೆ ಅತ್ತಿಗೆ ಇದ್ದಂಗೆ ಅವರಿಗೆ ಒಳ್ಳೆಯದಾಗಲಿ ಅಂತ ಬಯಸಬಲ್ಲೇ ಎಂದು ಕೊಪ್ಪಳದಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದರು. ಮಾಧ್ಯಮ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಉಪೇಂದ್ರ ನಾನು ರಾಜಕೀಯದ ಬಗ್ಗೆ ಮಾತನಾಡೋಕೆ ಬಂದಿಲ್ಲ ಪ್ರಜೆಗಳ ಬಗ್ಗೆ ಮಾತನಾಡೋಕೆ ಬಂದಿರುವೆ ನನಗೆ ರಾಜಕೀಯ ಬಗ್ಗೆ ಗೊತ್ತಿಲ್ಲ ಬಳ್ಳಾರಿ ಹೊರೆತುಪಡಿಸಿ ನಮ್ಮ‌ ಪಕ್ಷದಿಂದ ೨೭ ಅಭ್ಯರ್ಥಿಗಳನ್ನು ನಿಲ್ಲಿಸಿದ್ದೀನಿ ಎಲ್ಲಾ ಕಡೆ ಉತ್ತಮ‌ ಪ್ರತಿಕ್ರಿಯೆ ಸಿಗುತ್ತಿದೆ

ರಾಜಕೀಯ ಎನ್ನುವುದೇ ಒಂದು ಉತ್ತಮ ಸಮಾಜಸೇವೆ. ಇದೊಂದು ಬಂಡವಾಳ ಹಾಗೂ ಲಾಭ ಇಲ್ಲದ ಸೇವೆ ಪ್ರಜೆಗಳ ದುಡ್ಡನ್ನು ಪ್ರಜೆಗಳ ಸಮಾಜದ ಅಭಿವೃದ್ಧಿಗೆ ಬಳಸುವಂತ ಸೇವೆ ಆದರೆ ರಾಜಕೀಯ ಅನ್ನೋದೆ ಬದಲಾಗಿದೆ ೨೦ ವರ್ಷಗಳ ಹಿಂದೆನೆ ನಾನು ರಾಜಕೀಯಕ್ಕೆ ಬರಬೇಕು ಅನ್ನೋ ಆಸೆಯಿತ್ತು ಅದಕ್ಕಾಗಿಯೇ ನಾನು ಸಿನೆಮಾ ಕ್ಷೇತ್ರಕ್ಕೆ ಬಂದಿದ್ದು ನನಗೆ ಯಾವ ಪಕ್ಷವು ಬೆಸ್ಟ್ ಎಕ್ಸಾಂಪಲ್ ಅಲ್ಲ ನಮಗೆ ನಾವೇ ಬೆಸ್ಟ್ ಎಕ್ಸಾಂಪಲ್ ಜನರೇ ಇರುವಂತ ಒಂದು ಪ್ರಾದೇಶಿಕ ಪಕ್ಷ ಬೇಕು ಜನರಿಗೆ ಪಕ್ಷಕ್ಕೆ ಉತ್ತಮ ಸಂಬಂಧ ಇರುವಂತ ಪಕ್ಷ ಬೇಕು ಜನರು ಬೇಸೆತ್ತಿದ್ದಾರೆ, ಜನರೊಂದಿಗೆ ಉತ್ತಮ‌ ಒಡನಾಟ ಇರುವ ಪಕ್ಷ ಬೇಕು ಅಂತಿದ್ದಾರೆ ನಮ್ಮ ಸದ್ಯ ಇರುವ ರಾಜಕೀಯಕ್ಕೆ ತದ್ದವಿರುದ್ಧವಾಗಿದೆ ಎಲ್ಲರೂ ಹಣಕ್ಕೆ ಸಾರಾಯಿಗೆ ಮಾರಾಟವಾಗಲ್ಲ ಮಾರಾಟವಾಗಿದ್ರೆ ೩೦% ಮತದಾನ ಯಾಕೆ ಆಗುತ್ತೆ ನೂರಕ್ಕೆ ನೂರರಷ್ಟು ಮತದಾನ ಆಗಬೇಕಿತ್ತು ರಾಜಕೀಯ ವ್ಯವಸ್ಥೆಯಿಂದ ಜನರಿಗೆ ಅಸಹ್ಯ ಹುಟ್ಟಿದೆ ಅದಕ್ಕಾಗಿ ಏನು ಇಲ್ಲ ಅನ್ನೋದೆ ನಮ್ಮ‌ ಪಕ್ಷದ ಪ್ರಣಾಳಿಕೆ ಜನರೇ ತೀರ್ಮಾನ ಮಾಡಬೇಕು ಏನು ಬೇಕು ಅಂತ ನಾವು ಅದು ಕೊಡ್ತೀವಿ ಇದು ಕೊಡ್ತೀವಿ ಅಂತ ಹೇಳೋದಿಲ್ಲ ಜನರು ಬುದ್ಧಿವಂತರು, ಸತ್ಯಕ್ಕಿಂತ ದೊಡ್ಡ ಬುದ್ದಿವಂತರು ಯಾರು ಇಲ್ಲ ಜನರು ಸತ್ಯವನ್ನು ಪರಿಶೀಲನೆ ಮಾಡುವಷ್ಟು ಬುದ್ದಿವಂತರು ನನಗೆ ಜನರು ಗೆಲ್ಲಬೇಕು, ಅದಕ್ಕಾಗಿ ಜನರಿಗಾಗಿ ಪಕ್ಷ ಕಟ್ಟಿದ್ದು ಸಂವಿಧಾನವನ್ನು ಬದಲಾಯಿಸುವಷ್ಟು ದೊಡ್ಡವನು ನಾನಲ್ಲ ಜನರಿಗೆ ಏನು ಬೇಕು ಅದನ್ನು ಕೊಡುವುದೇ ಅಷ್ಟೇ ನಮ್ಮ‌ ಉದ್ದೇಶ ಎಲ್ಲೋ ಒಂದು ಕಡೆ ನನಗೆ ಆಶಾ ಭಾವನೆ ಇದೆ ಅಲ್ಪ ಮಟ್ಟಿಗೆ ನಾವು ಗೆಲವು ಸಾಧಿಸಿದ್ದೀವೆ ಎಂದು ಉಪೇಂದ್ರ ಹೇಳಿದರು ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಉಪಸ್ಥಿತರಿದ್ದರು.

Please follow and like us:

Related posts