ನದಾಫ್/ಪಿಂಜಾರ್ ಸಮುದಾಯದಿಂದ ರಾಜ್ಯಾದ್ಯಂತ ಜ.20ರಂದು ಸಾಂಕೇತಿಕ ಧರಣಿ

ಕೊಪ್ಪಳ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ  ಕರ್ನಾಟಕ ರಾಜ್ಯ ನದಾ ಫ್ / ಪಿಂಜಾರ ಸಂಘ ( ರಿ ) ಜಿಲ್ಲಾ ಘಟಕದ ಪರವಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ರಚನೆ ಹಾಗೂ ಇತರ ನ್ಯಾಯಯುತ ಬೇಡಿಕೆಗಳ ಒತ್ತಾಯಕ್ಕಾಗಿ ದಿನಾಂಕ 20-01-2021 ರಂದು ರಾಜ್ಯಾದ್ಯಂತ ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಗುವುದು ಎಂದು ಸಂಘದ ರಾಜ್ಯ ಸಹಕಾರ್ಯದರ್ಶಿ ಶಹಾಬೂದ್ದೀನ್ ಸಾಬ ಹೇಳಿದರು.

ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಸುಮಾರು 25 ಲಕ್ಷಗಳಿಗೂ ಅಧಿಕ ಜನಸಂಖ್ಯೆ ಹೊಂದಿರುವ ನದಾಫ್ / ಪಿಂಜಾರ ಜನಾಂಗವು ಶೋಷಿತ ಹಾಗೂ ಕಡು ಬಡತನದ ನೆರಳಲ್ಲಿ ಕಷ್ಟಕರ ಜೀವನವನ್ನು ನಡೆಸುತ್ತಿರುವ ಅತಿ ಹಿಂದುಳಿದ ಜನಾಂಗವಾಗಿದೆ . ಈ ಜನಾಂಗದ ಅಭಿವೃದ್ಧಿಗಾಗಿ ಹತ್ತಾರು ವರ್ಷಗಳಿಂದ ಸರಕಾರಕ್ಕೆ ಅವಶ್ಯ ಇರುವ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಲು ಮನವಿ ನೀಡುತ್ತಾ ಬಂದಿದ್ದೇವೆ . ನಾವು ಆರ್ಥಿಕವಾಗಿ , ಶೈಕ್ಷಣಿಕವಾಗಿ , ಸಾಮಾಜಿಕವಾಗಿ , ರಾಜಕೀಯವಾಗಿ ಸದೃಡರು , ಪ್ರಬುದ್ಧರಿಲ್ಲ ಎನ್ನುವ ಕಾರಣಕ್ಕೆ ನಮ್ಮನು ಗಣನೆಗೆ ತೆಗೆದುಕೊಳ್ಳದೇ ಇಲ್ಲಿಯವರೆಗೂ ನಮ್ಮ ಬೇಡಿಕೆಗಳಿಗೆ ಯಾವದೇ ಸರಕಾರಗಳು ನ್ಯಾಯ ಒದಗಿಸಲು ಸ್ಪಂಧಿಸುತ್ತಿಲ್ಲ , ನಮ್ಮ ಜನಾಂಗದಲ್ಲಿ ಶೇಕಡ 90 ಕ್ಕೂ ಅಧಿಕ ಬಡವರಿದ್ದು ಇಂದಿನ ಸ್ಪರ್ಧಾತ್ಮಕ ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವ ಆರ್ಥಿಕ ಶಕ್ತಿ ಇಲ್ಲದೆ ಜೀವನದ ಹೋರಾಟದಲ್ಲಿ ಹಾಗೂ ಇನ್ನಿತರ ಎಲ್ಲಾ ಹಂತದಲ್ಲಿ ದುರ್ಬಲರಾಗಿದ್ದೇವೆ . ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವಂಥಹ ಮೂಲಭೂತವಾದ ಸೌಲಭ್ಯಗಳನ್ನು ಹಲವಾರು ತಾಂತ್ರಿಕ ದೋಷಗಳಂದ , ಅಧಿಕಾರಿಗಳ ನಿರ್ಲಕ್ಷ ಧೋರಣೆಯಿಂದ ಪಡೆಯಲು ಸಾಧ್ಯವಾಗುತ್ತಿಲ್ಲ . ನಮ್ಮ ಜನಾಂಗಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ರಚಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ ನಮ್ಮ ಬೇಡಿಕೆಗಳು ಪ್ರಮುಖವಾಗಿ , ಬೇಡಿಕೆ -1 ) . ನಧಾಫ್ ಹಿಂಜಾರ ಜನಾಂಗ ಎಲ್ಲಾ ಹಂತದಲ್ಲಿ ಹಿಂದುಳಿದಿದ್ದು ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಬೇಕು . ಬೇಡಿಕೆ -2 ) ನದಾಫ್ ಹಿಂಜಾರ ಜನಾಂಗವು ಪ್ರವರ್ಗ -1 ರಲ್ಲಿ ಸೇರ್ಪಡೆಯಾಗಿದ್ದು ಸದರಿ ದೃಢೀಕರಣ ಪತ್ರ ಪಡೆದುಕೊಳ್ಳುವಲ್ಲಿ ಅಧಿಕಾರಿಗಳಿಂದ ತೊಂದರೆ ಅನುಭವಿಸುತ್ತಿದ್ದು , ಸರಕಾರದಿಂದ ಲಭ್ಯವಾಗಬೇಕಾದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ . ಪ್ರವರ್ಗ -1 ರ ಪ್ರಮಾಣ ಪತ್ರ ನೀಡಲು 1996 ರಿಂದ ಇಲ್ಲಿಯವರೆಗೂ 3-4 ಸುತ್ತೋಲೆಗಳ ಬಂದಿರುತ್ತವೆ . ಅದರಲ್ಲಿ ಶಾಲಾ ದಾಖಲೆಗಳನ್ನು ಪರಿಶೀಲಿಸದೆ ಅರ್ಜಿದಾರರಿಂದ ಪ್ರಮಾಣ ಪತ್ರ ( ಅಫಿಡಾವೆಟ್ ) ಪಡೆದು , ಸ್ಥಳ ಪರಿಶೀಲನೆ ಮಾಡಿ ಜಾತಿಪತ್ರ ನೀಡಲು ಸೂಚಿಸಿದ್ದರೂ ಸಹ ತಹಸೀಲ್ದಾರರು ಪರಿಗಣಿಸುತ್ತಿಲ್ಲ . ಹಾಗೂ ಭಾರತದ ಸರ್ವೋಚ್ಛ ನ್ಯಾಯಾಲಯ ರಹ ಶಾಲಾ ದಾಖಲಾತಿಗಳು ನೈಜ ಜಾತಿ ಎಂದು ಪರಿಗಣಿಸಬಾರದು ಎಂದು ನೀಡಿರುವ ಆದೇಶವನ್ನು ಸಹ ಕಂದಾಯ ಇಲಾಖಾ ಅಧಿಕಾರಿಗಳು ಪರಿಗಣಿಸುತ್ತಿಲ್ಲ . ನೈಜ ಜಾತಿ ಪತ್ರ ಪಡೆದುಕೊಳ್ಳುವಲ್ಲಿ ನಮ್ಮ ಜನಾಂಗ ಸರಕಾರದ ಶೈಕ್ಷಣಿಕ ಹಾಗೂ ಆರ್ಥಿಕ ಸೌಲಭ್ಯಗಳಿಂದ ವಂಚಿತ ರಾಗುತ್ತಿದ್ದಾರೆ , ಈ ಗೊಂದಲವನ್ನು ಸರಿಪಡಿಸಲು ಭಾರತದ ಸರ್ವೋಚ್ಛ ನ್ಯಾಯಾಲಯದ ಆದೇಶದ ಅನ್ವಯ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಾಗಿ ದಂದಾಯ ಇಲಾಖಖೆಗೆ ಆದೇಶ ನೀಡಲು ಕೋರಿದೆ . ಬೇಡಿಕೆ -3 ) ನಮ್ಮ ಜನಾಂಗ ಆರ್ಥಿಕವಾಗಿ , ಶೈಕ್ಷಣಿಕವಾಗಿ , ಸಾಮಾಜಿಕವಾಗಿ ಹಾಗೂ ಔದ್ಯೋಗಿಕವಾಗಿ ಅತ್ಯಂತ ಹಿಂದುಳಿದಿದ್ದು ನಿರುದ್ಯೋಗ ನಿರ್ಮೂಲನೆಗೆ ಪೂರಕವಾಗುವ ವಿವಿಧ ತರಬೇತಿ ಕೇಂದ್ರಗಳಿಗೆ , ಸಾಂಸ್ಕೃತಿಕ ಚಟುವಟಿಕೆಗಳಿಗೆ , ಶೈಕ್ಷಣಿಕ ಚಟುವಟಿಕೆಗಳಿಗೆ ಖುಲ್ಲಾ ಜಾಗೆಗಳ ಆವಶ್ಯಕತೆ ಇದೆ . ನಮ್ಮ ಜನಾಂಗ ಆರ್ಥಿಕವಾಗಿ ಹಿಂದುಳಿದಿರುವದರಿಂದ ಆಸ್ತಿ ಖರೀದಿಸುವ ಶಕ್ತಿ ಇರುವದಿಲ್ಲ . ಆದ್ದರಿಂದ ಪ್ರಮುಖವಾಗಿ ಜಿಲ್ಲಾ ಕೇಂದ್ರಗಳಲ್ಲಿ ಉಚಿತವಾಗಿ ಅಥವಾ ನಮ್ಮ ಆರ್ಥಿಕ ಶಕ್ತಿಗೆ ಅನುಗುಣವಾಗಿ ಕನಿಷ್ಠ ಬೆಲೆಗೆ ಜಾಗೆಯ ವ್ಯವಸ್ಥೆ ಮಾಡಿಕೊಂಡಲು ಮನವಿ ನೀಡಲಾಗಿದೆ .

. ಮತ್ತು ಇದಲ್ಲದೆ ರಾಜ್ಯದಲ್ಲಿ ಅನೇಕ ಜಿಲ್ಲಾ ಕೇಂದ್ರಗಳಲ್ಲ “ ವಲ್ಡ್ ” ಇಲಾಖೆಯ ಒಳಪಟ್ಟು ಜಾಗೆಗಳಿದ್ದು ಅವುಗಳನ್ನು ಪೂರ್ಣ ಪ್ರಮಾಣದಲ್ಲ “ ವಕ್ಸ್ ” ಇಲಾಖೆ ಉಪಯೋಗಿಸುತ್ತಿಲ್ಲ . ಇಂಥಹ ಜಾರ್ಗಗಳನ್ನು ನಿಯಮಾವಳ ಅನುಸಾರ ಗುತ್ತಿಗೆ ಆಧಾರದ ಮೇಲೆ ನಮ್ಮ ಸಮಾಜದ ಉಪಯೋಗಕ್ಕಾಗಿ ನೀಡುವಂತೆ ಸರಕಾರ ಕಟ್ಟುನಿಟ್ಟಿನ ಆದೇಶವನ್ನು ನೀಡಲು ಕೋರಲಾಗಿದೆ . ಬೆಡಿಕೆ -4 ) ನಮ್ಮ ಜನಾಂಗದಲ್ಲಿ ರಾಜಕೀಯ ಹಿನ್ನಲೆ ಹಾಗೂ ಪ್ರಬುದ್ಧತೆ ಇಲ್ಲದಿರುವದರಿಂದ ರಾಜಕೀಯ ವ್ಯವಸ್ಥೆಯಲ್ಲಿ ಪ್ರಾತಿನಿದ್ಯ ಎಲ್ಲಿಯೂ ಕಂಡುಬರುತ್ತಿಲ್ಲ . ಕಾರಣ ಸಮಾಜದ ಪ್ರಗತಿಗೆ ಪ್ರತಿಕೂಲ ವಾಗುವಂಥಹ ಜಿಲ್ಲಾ ಮಟ್ಟದಲ್ಲಿ ವಕ್ಸ್ ಕರ್ಮಿಗಳು , ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಸಮಿತಿಗಳಲ್ಲಿ ಹಾಗೂ ಇನ್ನಿತರ ಸರಕಾರದ ಯಾವದೇ ಸಮಿತಿಗಳಲ್ಲಿ ನಮ್ಮ ಜನಾಂಗದವರಿಗೆ ಆದ್ಯತೆ ನೀಡುವದರ ಮೂಲಕ ನಾಮ ನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಿ ಕೊಳ್ಳಲು ಸೂಕ್ತ ಕ್ರಮ ವಹಿಸಬೇಕೆಂದು ಕೋರಿದೆ . -0-0-0-0-0 ಈಗಾಗಲೇ ನಮ್ಮ ರಾಜ್ಯ ಸಂಘದ ನಿಯೋಗದೊಂದಿಗೆ 2 ಸಾರೆ ಮುಖ್ಯ ಮಂತ್ರಿಗಳನ್ನು ನೇರವಾಗಿ ಭೇಟಿಮಾಡಿ ಮನವಿ ನೀಡಲಾಗಿದೆ . ಹಾಗೂ ಇತ್ತೀಚೆಗೆ 2 ಸಾರೆ ರಾಜ್ಯಾದ್ಯಂತ ಎಲ್ಲಾ ತಾಲೂಕಗಳಿಂದ ಮಾನ್ಯ ತಹಸೀಲದಾರರ ಮೂಲಕ ಹಾಗೂ ಎಲ್ಲಾ ಜಿಲ್ಲಾ ಕೇಂದ್ರಗಳಿಂದ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮನವಿ ನೀಡಲಾಗಿದೆ ಸರಕಾರ ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕ ವಾಗಿ ಸ್ಪಂಧಿಸುವವರೆಗೂ ನಮ್ಮ ಪ್ರಯತ್ನಗಳು ನಿಲ್ಲುವದಿಲ್ಲ . ಮುಂದಿನ ದಿನಗಳಲ್ಲಿ ಸರಕಾರದ ಮನ ಒಲಿಸಲು ರಾಜ್ಯಾದ್ಯಂತ ಉಪವಾದ ಹಾಗೂ ಇನ್ನಿತರ ಬೃಹತ್ ಪ್ರಮಾಣದ ದರಣಿಗಳನ್ನು ನಡೆಡಲಾಗುವದು , ಈ ಪ್ರಯತ್ನ ಕ್ಕಾಗಿ ಸಾಂಕೇತಿಕ ಧರಣಿ ಮಾಡುತ್ತಿದ್ದು ಮುಖ್ಯ ಮಂತ್ರಿಗಳು ತಕ್ಷಣ ಬೇಡಿಕೆಗಳನ್ನೂ ಈಡೇರಿಸಬೇಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆ.ಎಫ್.ಮುದ್ದಾಬಳ್ಳಿ, ಉಪಾಧ್ಯಕ್ಷ ಹೊನ್ನೂರಸಾಬ ಬೈರಾಪೂರ, ಅಲ್ಲಾಸಾಬ ಹಿರೇಬಗನಾಳ , ಅನ್ವರಸಾಬ ಉಪಸ್ಥಿತರಿದ್ದರು.

Please follow and like us:
error