ನಂಜುಂಡೇಶ್ವರ ದೇವಾಲಯದಲ್ಲಿ ಸಿಕ್ಕ ನಿಷೇದಿತ ನೋಟುಗಳು ಎಷ್ಟು ಗೊತ್ತಾ?

ಮೈಸೂರು : ದಕ್ಷಿಣ ಕಾಶಿ ನಂಜನಗೂಡು ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು ಎರಡು ತಿಂಗಳ ಅವಧಿಯಲ್ಲಿ ೧,೯೮,೪೭,೨೯೦/-(೧ ಕೋಟಿ ೯೮ ಲಕ್ಷದ ೪೭ ಸಾವಿರದ ೨೯೦) ರೂ ಸಂಗ್ರಹವಾಗಿದೆ.
ಇದರಲ್ಲಿ ವಿಶೇಷ ಅಂದ್ರೆ ೭೯,೭೦೦ ರೂ ನಿಷೇಧಿತ ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿರುವುದು. ಈವರೆಗೆ ಇಷ್ಟೊಂದು ನಿಷೇದಿತ ನೋಟುಗಳು ಸಿಕ್ಕಿರಲಿಲ್ಲ. ೧೦೦೦ ಮೌಲ್ಯದ ೧೨ ನೋಟುಗಳು, ೫೦೦ ಮೌಲ್ಯದ ೧೭೦ ನೋಟುಗಳು ಹುಂಡಿಯಲ್ಲಿ ಸಂಗ್ರಹವಾಗಿವೆ

ನಿಷೇಧ ಹೇರಿ ೪ ವರ್ಷ ಕಳೆದರೂ ನಂಜುಂಡನ ಭಕ್ತರು  ಚಲಾವಣೆ ಆಗದ ನೋಟುಗಳನ್ನು ಹಾಕುತ್ತಲೇ ಇದ್ದಾರೆ. ದೇವಾಲಯದ ೩೭ ಹುಂಡಿಗಳ ಪೈಕಿ ೩೧ ಹುಂಡಿಗಳ ಎಣಿಕೆ ಕಾರ್ಯ ನೆರವೇರಿದ್ದು. ೨೦೦ ಸ್ವಸಹಾಯ ಸಂಘದ ಮಹಿಳೆಯರು ಹಾಗೂ ೫೦ ಮಂದಿ ದೇವಾಲಯದ ಸಿಬ್ಬಂದಿಗಳು ಸೇರಿದಂತೆ ೨೫೦ ಸಿಬ್ಬಂದಿಗಳಿಂದ ಎಣಿಕೆ ಕಾರ್ಯ ನಡೆಯಿತು. ಕೊರೊನಾ ಭೀತಿಯಲ್ಲೂ ೨ ಕೋಟಿಯಷ್ಟು  ಹಣ ಸಂಗ್ರಹವಾಗಿದೆ.ಕೊರೊನಾ ಭೀತಿಯನ್ನ ಲೆಕ್ಕಿಸದೆ ನಂಜುಂಡನ ಸನ್ನಿಧಿಗೆ ಭಕ್ತವೃಂದ ಬೇಟಿ ನೀಡುತ್ತಿದೆ.

ಅಕ್ಟೋಬರ್ ಸಂಗ್ರಹವಾಗಿದ್ದು ೭೩,೦೯,೬೨೦ ರೂ ಮತ್ತು ನಿನ್ನೆ ನಡೆದ ಎಣಿಕೆ ಕಾರ್ಯದಲ್ಲಿ ಸಂಗ್ರಹವಾಗಿದ್ದು ೧,೯೮,೪೭,೨೯೦/- ರೂ,
೭೭ ಗ್ರಾಂ ಚಿನ್ನ ಹಾಗೂ ೫ ಕೆಜಿ ೭೦೦ ಗ್ರಾಂ ಬೆಳ್ಳಿ ಸಂಗ್ರಹ. ಬ್ಯಾಂಕ್ ಆಫ್ ಬರೋಡ ದ ಹಿರಿಯ ಅಧಿಕಾರಿ ಹರ್ಷ ಹಾಗೂ ನಂಜುಂಡೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಪ್ರಸಾದ್ ಸಮ್ಮುಖದಲ್ಲಿ ನಡೆದ ಎಣಿಕೆ ಕಾರ್ಯ ನಡೆಯಿತು. ನಿಷೇದಿತ ನೋಟುಗಳು ಇನ್ನೂ ಜನರ ಬಳಿ ಉಳಿದಿರುವುದು ಆಶ್ಚರ್ಯ ಉಂಟು ಮಾಡಿದೆ

Please follow and like us:
error