
ನಾವೆಲ್ಲಾ ಒಂದಾಗಿ ಇರುವುದೇ ದಡ್ಡತನ ಅನ್ನೋದಾದ್ರೆ, ನಾವು ದಡ್ಡರಾಗೇ ಇರ್ತಿವಿ”
ದ್ವೇಷದ ರೋಗದಿಂದ ನರಳುತ್ತಿರುವ ಸಮಾಜಕ್ಕೆ “ಅಲೈ ದೇವರು” ನಾಟಕ ಅತ್ಯುತ್ತಮ ಔಷಧ. ಈ ನಾಟಕ ಎಲ್ಲೇ ಪ್ರದರ್ಶನವಾದರೂ ನಿಮ್ಮ ಕುಟುಂಬ, ಸ್ನೇಹಿತರು, ಸಂಘಟನಾ ಸಂಗಾತಿಗಳೊಂದಿಗೆ ತಪ್ಪದೇ ಹೋಗಿ ನೋಡಿ. “ಹೆಂಗಿದ್ರು ಊದಿನಕಡ್ಡಿ ಹಚ್ಚಿದ್ದೇವೆ ಎಲ್ಲಾ ದೇವರಿಗೆ ಬೆಳಗಿಬಿಡೋಣ ಬಿಡು”. ಎನ್ನುವ ನಾಟಕದ ಈ ಸಾಲು ನಮ್ಮ ಜನರನ್ನು ತಲುಪಿಬಿಟ್ಟರೆ ಸಾಕು. ಈ ನಾಟಕ ಜನಸಾಮಾನ್ಯರನ್ನು ಹೆಚ್ಚು ಹೆಚ್ಚು ತಲುಪಿದಷ್ಟು ನಮ್ಮೆಲ್ಲಾ ಹೋರಾಟಗಳು ಗೆಲ್ಲುವ ವೇಗ ಹೆಚ್ಚುತ್ತದೆ. ದೇಶ ಸೌಹಾರ್ದತಯಿಂದ ನೆಮ್ಮದಿಯಾಗಿ ಇರಬೇಕು ಎಂದರೆ ಅಲೈ ದೇವರು ಇರಬೇಕು. ಯಾಕೆಂದರೆ ಈ ದೇವರ ಜೊತೆ ಭಕ್ತರು ಸಲೀಸಾಗಿ ನಿಲ್ಲಿಸಿ ಜಗಳವಾಡುವ ಅವಕಾಶವಿದೆ. ದೇವರು ಹೇಳಿದ್ದಕ್ಕೆಲ್ಲ ಕೇಳಿಕೊಂಡು ಸುಮ್ಮನಿರದೆ ನನ್ನ ಮಾತೂ ಕೇಳಪ್ಪ ಎಂದು ಗದರಿಸಿ ನಮ್ಮ ಮಾತೂ ಕೇಳುವಂತೆ ದೇವರಿಗೆ ಮಾಡಬಹುದು!
ನಿಜಕ್ಕು ಇಂಥಹ ನಾಟಕ ಪ್ರದರ್ಶನ ಮಾಡಲು ಎದೆಗಾರಿಕೆ ಮತ್ತು ತಾಯಿ ಹೃದಯ ಇರಬೇಕು. ಈ ಎರಡೂ ನಮಗಿದೆ ಎಂದು ತೋರಿಸಿದ ಇಡೀ ತಂಡಕ್ಕೆ ದೊಡ್ಡ ಸಲಾಂ.
ಇನ್ನೊಂದು ವಿಚಾರ ಹಂಚಿಕೊಳ್ಳಲೇಬೇಕು. ಈ ನಾಟಕಕ್ಕೆ ನಾನು ಚಪ್ಪಾಳೆ ಮತ್ತು ಶಿಳ್ಳೆ ಹೊಡೆದಷ್ಟು ಯಾವ ನಾಟಕ ಸಿನೆಮಾಗೂ ಹೊಡೆದಿಲ್ಲ. ಅಕ್ಷರ ಸಹ ನಾನು ನಮ್ಮ ತಂಡದವರು ಕುರ್ಚಿಯಿಂದ ಮೇಲೆದ್ದು ಕುಣಿದೆವು. ಈ ನಾಟಕ ಪ್ರತಿಯೊಬ್ಬರು ನಿಮ್ಮ ಮಿತ್ರರ ಜೊತೆ ನೋಡಬೇಕೆಂದು ಶಿಫಾರಸ್ಸು ಮಾಡುತ್ತೇನೆ.