ದೇವೇಗೌಡರು ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದ್ದಾರೆ: ಬಿ.ಸಿ.ಪಾಟೀಲ

ಕೊಪ್ಪಳ: ಮುಂದಿನ‌ ಚುನಾವಣೆಯಲ್ಲಿ ಜೆಡಿಎಸ್‌ನ್ನು ಅಧಿಕಾರಕ್ಕೆ ತಂದ ಮೇಲೆಯೇ ಕಣ್ಣು ಮುಚ್ಚುತ್ತೇನೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ ದೇವೇಗೌಡರದ್ದು ಹಗಲುಗನಸು ಎಂದು ವ್ಯಂಗ್ಯವಾಡಿದರು.

ಕೊಪ್ಪಳದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಜೆಡಿಎಸ್‌ಗೆ 40 ಸ್ಥಾನ ಬಂದಿವೆ. ಮುಂದಿನ ಚುನಾವಣೆಯಲ್ಲಿ ನಾಲ್ಕು ಸೀಟು ಬರೋದು ಕಷ್ಟ ಇದೆ. ತಮ್ಮ ಪಕ್ಷದ ಶಾಸಕರು ಬಿಟ್ಟು ಹೋಗ್ತಾರೆ ಅಂತಾ ದೇವೆಗೌಡರು ಆ ರೀತಿ ಹೇಳಿರಬಹುದು. ಈಗಾಗಲೇ ಕಾಂಗ್ರೆಸ್, ಬಿಜೆಪಿ‌ ಅಂತಾ ಒಬ್ಬೊಬ್ಬರು ಜೆಡಿಎಸ್ ಬಿಟ್ಟು ಹೋಗ್ತಾ ಇದ್ದಾರೆ ಎಂದು ಪಾಟೀಲ್ ಲೇವಡಿ ಮಾಡಿದರು.

Please follow and like us:
error