ದೇವರ ನಾಡಿನಲ್ಲಿ ಹೆಣ್ಣಿನ ಮೇಲೆ ಅತ್ಯಾಚಾರ, ಚಿತ್ರಹಿಂಸೆ, ಕೊಲೆ : ನಾಯಕರೆಲ್ಲಿದ್ಧಾರೆ?

ೇರಳದಲ್ಲಿ ಹೀಗಾಗಿದೆ ಎಂದು ನಂಬಲು ಆಗುತ್ತಿಲ್ಲ. ದಲಿತ ಯುವತಿ ಜಿಶಾಳ ಮೇಲೆ ನಡೆದ ಅತ್ಯಾಚಾರ, ಕಗ್ಗೊಲೆಗಳ ಭಯಾನಕ ವಿವರ ಓದಿ ನಡುಗಿ ಹೋದೆ. sanath-kumar-belagaliನೂರಕ್ಕೆ ನೂರರಷ್ಟು ಸಾಕ್ಷರತೆಗೆ ಹೆಸರಾದ ದೇವರ ನಾಡಿನಲ್ಲಿ ಒಬ್ಬ ಹೆಣ್ಣಿನ ಮೇಲೆ ಈ ಪರಿ ಅತ್ಯಾಚಾರ, ಚಿತ್ರಹಿಂಸೆ, ಕೊಲೆ ಹೇಗೆ ನಡೆಯಲು ಸಾಧ್ಯ? ಆದರೆ ಇದು ನಡೆದಿದೆ. ಘಟನೆ ನಡೆದ ಹತ್ತು ದಿನಗಳ ನಂತರವೂ ಪಾತಕಿಗಳನ್ನು ಬಂಧಿಸಿಲ್ಲ. ಅಲ್ಲಿನ ಚಾಂಡಿ ಸರಕಾರ ಹತ್ತು ಲಕ್ಷ ಕೊಟ್ಟು ಕೈ ತೊಳೆದುಕೊಂಡಿದೆ.
ಎರ್ನಾಕುಲಂನಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದ ಜಿಶಾ ರಜೆಯಲ್ಲಿ ತನ್ನ ಊರಿಗೆ ಬಂದಾಗ ಈ ನೀಚ ಕೃತ್ಯ ನಡೆದಿದೆ. ಈಕೆಯ ದೇಹದ ಮೇಲೆ ಮೂವತ್ತು ಬಾರಿ ಇರಿದ ಗುರುತುಗಳಿವೆ. ಮರ್ಮಾಂಗಕ್ಕೆ ಕಬ್ಬಿಣದ ಸಲಾಕೆಯಿಂದ ಇರಿದು ಹೊಟ್ಟೆಯ ಕರುಳೆಲ್ಲ ಹೊರಗೆ ಬಿದ್ದಿದೆ. ಈಕೆಯ ತಂದೆ ಯಾವಾಗಲೋ ಮನೆ ಬಿಟ್ಟು ಹೋದವರು ಪತ್ತೆ ಇಲ್ಲ. ತಾಯಿ ರಾಜೇಶ್ವರಿ ಕೂಲಿ ನಾಲಿ ಮಾಡಿ ಮಗಳನ್ನು ವಕೀಲೆಯನ್ನಾಗಿ ಮಾಡುವ ಕನಸು ಕಂಡಿದ್ದಳು. ಈ ಕನಸು ನುಚ್ಚುನೂರಾಗಿದೆ.
ಹತ್ತು ವರ್ಷಗಳ ಹಿಂದೆ ಮಹಾರಾಷ್ಟ್ರದ ಖೈರ್ಲಾಂಜಿಯಲ್ಲೂ ಹೀಗೆ ಆಗಿತ್ತು. ದಲಿತ ತಾಯಿ ಮಗಳನ್ನು ನಡು ರಸ್ತೆಗೆ ಎಳೆದು ತಂದು ಬೀದಿಯಲ್ಲೇ ಅತ್ಯಾಚಾರ ಮಾಡಿ ಕೊಂದು ಹೊಳೆಗೆ ಬಿಸಾಡಿದ್ದರು. ಈ ಪ್ರಕರಣದ ಆರೋಪಿಗಳನ್ನು ದಹಿಸಲು ಆಗ ಮಹಾರಾಷ್ಟ್ರದ ಪ್ರಭಾವಿ ರಾಜಕಾರಣಿಗಳು ಹರಸಾಹಸಪಟ್ಟರು. ಕೊನೆಗೂ ಅಪರಾಧಿಗಳು ಪಾರಾಗಿ ಬಂದರು. ನಮ್ಮ ನ್ಯಾಯಾಂಗ ವ್ಯವಸ್ಥೆಯ ಲೋಪಗಳು ಇವರನ್ನು ಮುಕ್ತಗೊಳಿಸಿದವು.

kERALA-MURDER-jisha
ಆಗ ದಿಲ್ಲಿಯ ಕಾರ್ಯಾಗಾರವೊಂದಕ್ಕೆ ಹೋಗಿದ್ದ ನಾನು ಅತ್ಯಾಚಾರಕ್ಕೆ ಒಳಗಾಗಿ ಬೀದಿ ಹೆಣವಾಗಿದ್ದ ತಾಯಿ ಮಗಳ ಸಂಬಂಧಿಕರನ್ನು ಭೇಟಿ ಮಾಡಿದ್ದೆ. ನ್ಯಾಯ ಅರಸಿ ಅವರು ದಿಲ್ಲಿjisha-murder-keralaಗೆ ಬಂದಿದ್ದರು. ಈ ಹೃದಯವಿದ್ರಾವಕ ಪೈಶಾಚಿಕ ಘಟನೆ ಮೊದಲು ಮಾಧ್ಯಮಗಳಲ್ಲಿ ಬೆಳಕಿಗೆ ಬರಲಿಲ್ಲ. ಜನಪರ ದಲಿತ ಸಂಘಟನೆಗಳು ಬೀದಿಗಿಳಿದು ಹೋರಾಡಿದ ನಂತರ ಇಂಥದೊಂದು ಘಟನೆ ನಡೆದದ್ದು ಜಗತ್ತಿಗೆ ಗೊತ್ತಾಯಿತು.
ಈಗ ಜಿಶಾ ಅತ್ಯಾಚಾರ ಪ್ರಕರಣದಲ್ಲೂ ಹಾಗೇ ಆಗಿದೆ. ಘಟನೆ ನಡೆದು ಒಂದು ವಾರವಾದರೂ ತಾಯಿ ದೂರು ನೀಡಿದರೂ ಪೊಲೀಸರು ಅತ್ತ ಸುಳಿಯಲಿಲ್ಲ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಅಂದರೆ ಎಲ್ಲ ಗೊತ್ತಿದ್ದೂ ಮಾಧ್ಯಮಗಳು ನೀಚ ವೌನ ತಾಳಿದವು. ಮೋದಿ ಸರಕಾರದ ಹಿತಾಸಕ್ತಿ ರಕ್ಷಿಸಲು ದಿನಾಲು ಗಂಟಲು ಹರಿದುಕೊಳ್ಳುವ ಅರ್ನಾಬ್ ಗೋಸ್ವಾಮಿಯೂ ಬಾಯಿ ಮುಚ್ಚಿ ತೆಪ್ಪಗಿದ್ದರು.modi-oomen-chandy
ದಿಲ್ಲಿಯ ನಿರ್ಭಯಾ ಅತ್ಯಾಚಾರ ಪ್ರಕರಣ ನಡೆದಾಗ ಹೀಗಾಗಿರಲಿಲ್ಲ. ಇಂಗ್ಲಿಷ್ ಟಿವಿ ಚಾನಲ್‌ಗಳು, ಪತ್ರಿಕೆಗಳು ಆಗ ತಕ್ಷಣ ಸ್ಪಂದಿಸಿದ್ದವು. ಯಾಕೆಂದರೆ ಆ ಘಟನೆ ರಾಜಧಾನಿ ದಿಲ್ಲಿಯಲ್ಲಿ ನಡೆದಿತ್ತು. ಘಟನೆಯು ವರದಿಯಾಗುತ್ತಿದ್ದಂತೆ ದಿಲ್ಲಿಯ ವಿದ್ಯಾರ್ಥಿಗಳು ಇಂಡಿಯಾ ಗೇಟ್ ಬಳಿ ನುಗ್ಗಿ ಪ್ರತಿಭಟನೆ ನಡೆಸಿದ್ದರು. ಆಗ ಕೇಂದ್ರದಲ್ಲಿ ಯುಪಿಎ ಸರಕಾರ ಇತ್ತು. ಹೀಗಾಗಿ ಸುದ್ದಿ ಬಯಲಾಯಿತು.
ಈಗ ಈ ಜಿಶಾ ಪ್ರಕರಣದಲ್ಲಿ ಹಾಗಾಗಲಿಲ್ಲ. ಕೇರಳವನ್ನು ಆಳುತ್ತಿರುವ ಉಮ್ಮನ್ ಚಾಂಡಿ ಚುನಾವಣೆಯಲ್ಲಿ ಮುಳುಗಿದ್ದಾರೆ. ಕೇಂದ್ರವನ್ನು ಆಳುತ್ತಿರುವ ನರೇಂದ್ರ ಮೋದಿ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೇಗೆ ನಾಶ ಮಾಡಬೇಕೆಂದು ನಿರಂತರ ಚಿಂತೆಯಲ್ಲಿದ್ದಾರೆ. ಅರುಣಾಚಲ, ಉತ್ತರಾಖಂಡದ ಚುನಾಯಿತ ಸರಕಾರಗಳನ್ನು ಉರುಳಿಸುವ ಮೋದಿ ಸಂಸತ್ತಿನಲ್ಲಿ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್‌ನ ಬಾಯಿ ಮುಚ್ಚಿಸಲು ಹುನ್ನಾರ ನಡೆಸಿದ್ದಾರೆ.
ಸಂಸತ್ತಿನ ಕಲಾಪವನ್ನು ಹಾಳುಗೆಡಿಸಲೆಂದೆ ಸುಬ್ರಮಣಿಯನ್ ಸ್ವಾಮಿ ಎಂಬ ಕೋಡಂಗಿಯನ್ನು ರಾಜ್ಯ ಸಭೆಗೆ ನಾಮಕರಣ ಮಾಡಿ ಪ್ರತಿಪಕ್ಷಗಳ ಮೇಲೆ ಸೇಡು ತಿರಿಸಿಕೊಳ್ಳಲು ಹೊರಟಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೇಲೆ ಆರೋಪಗಳ ಸುರಿಮಳೆ ಮಾಡಿ ವಿರೋಧಿಗಳ ಸದ್ದಡಗಿಸಲು ಮಸಲತ್ತು ನಡೆಸಿದ್ದಾರೆ.
ಜೆಎನ್‌ಯುನಲ್ಲಿ ಪ್ರತಿಭಟನೆಯ ದನಿಯೆತ್ತಿದ ಕನ್ಹಯ್ಯಿ ಕುಮಾರ್, ಉಮರ್ ಖಾಲಿದ್‌ರನ್ನು ರಾಷ್ಟ್ರದ್ರೋಹಿಗಳೆಂದು ಸುಳ್ಳು ಕತೆ ಕಟ್ಟಿ, ನಕಲಿ ಸಿಡಿ ಸೃಷ್ಟಿಸಿದ ಈ ನಾಝಿ ಪರಿವಾರದವರು ಚೆನ್ನಾಗಿ ಮುಖಭಂಗಕ್ಕೆ ಒಳಗಾದರು. ಕೊನೆಗೆ ಈ ವಿದ್ಯಾರ್ಥಿಗಳನ್ನು ದಂಡನೆಗೆ ಗುರಿಪಡಿಸಿದರು. ಇದನ್ನು ಪ್ರತಿಭಟಿಸಿ ಈಗ ಕನ್ಹಯ್ಯಾ ಕುಮಾರ್ ಹತ್ತು ದಿನಗಳಿಂದ ನಿರಶನ ಸತ್ಯಾಗ್ರಹ ನಡೆಸಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಭಾರತದ ದುರಂತವೆಂದರೆ ನರೇಂದ್ರ ಮೋದಿ, ಅಮಿತ್ ಶಾರಂಥ ಕುತಂತ್ರಿಗಳು ದಲ್ಲಾಲಿಗಳು ಈಗ ದೇಶದ ನಾಯಕರಾಗಿ ಮಿಂಚುತ್ತಿರುವುದು. ಅಂಬಾನಿ, ಅದಾನಿಗಳ ಅಕ್ರಮ ಹಣದ ನೆರವಿನಿಂದ ಅಧಿಕಾರಕ್ಕೆ ಬಂದ ಮೋದಿ ಜನನಾಯಕನಲ್ಲ. ಗುಜರಾತಿನಲ್ಲಿ ಆತ ಅಧಿಕಾರಕ್ಕೆ ಬಂದದ್ದು ಕೂಡ ಇಂತಹ ಕುತಂತ್ರಗಳಿಂದಲೇ. ಬಿಜೆಪಿಯಲ್ಲಿನ ಎದುರಾಳಿಗಳನ್ನು ಮೋದಿ ಹೊಸಕಿ ಹಾಕಿದರು.
ಭಾರತದಲ್ಲಿ ಒಂದು ಕಾಲದಲ್ಲಿ ಜವಾಹರಲಾಲ್ ನೆಹರೂ, ಬಾಬ ಸಾಹೇಬ ಅಂಬೇಡ್ಕರ್, ಸುಭಾಶ್ಚಂದ್ರ ಬೋಸ್, ಲಾಲ್‌ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಅವರಂಥ ಜನನಾಯಕರಿದ್ದರು. ಬಿಜೆಪಿಯಲ್ಲೂ ಕೂಡಾ ಅವರ ಸಿದ್ಧಾಂತವೇನೇ ಇರಲಿ ಅಟಲ್ ಬಿಹಾರಿ ವಾಜಪೇಯಿ ಅವರಂಥ ಮುತ್ಸದ್ದಿಗಳು ಜನನಾಯಕರಾಗಿದ್ದರು. ನರೇಂದ್ರ ಮೋದಿಯನ್ನು ಇವರೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ನರೇಂದ್ರ ಮೋದಿಯವರ ನಕಲಿ ಭಕ್ತರು ಫೋಟೊಶಾಫ್ ಬಳಸಿಕೊಂಡು ತಮ್ಮ ನಾಯಕನ ಇಮೇಜು ಹೆಚ್ಚಿಸಲು ನಕಲಿ ಚಿತ್ರಗಳನ್ನು ತಯಾರಿಸುತ್ತಿದ್ದಾರೆ. ಮೋದಿಯನ್ನು ವಿರೋಧಿಸುವ ಎಲ್ಲರನ್ನು ತೇಜೋವಧೆ ಮಾಡುತ್ತಿದ್ದಾರೆ. ನೆಹರೂ ಕಾಲದ ವಿಮಾನ ನಿಲ್ದಾಣ, ಅಣೆಕಟ್ಟು, ರೈಲು ನಿಲ್ದಾಣಗಳ ಚಿತ್ರ ತೋರಿಸಿ ಮೋದಿ ಮಾಡಿದ ಅಭಿವೃದ್ಧಿ ಎಂದು ತೋರಿಸುತ್ತಿದ್ದಾರೆ.
ಹಿಂದಿನ ಯುಪಿಎ ಸರಕಾರದಿಂದ ದೇಶ ದಿವಾಳಿಯಾಯಿತು. ನೆಹರೂ ಕಾಲದಿಂದ ಈ ದೇಶ ಅಭಿವೃದ್ಧಿಯನ್ನು ಕಂಡಿರಲಿಲ್ಲ. ಗುಜರಾತ್‌ನಲ್ಲಿ ಬಡವರೇ ಇಲ್ಲ. ಅಲ್ಲಿ ಸ್ವರ್ಗ ನಿರ್ಮಾಣವಾಗಿದೆ ಎಂಬ ಕಟ್ಟು ಕಥೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತೇಲಿ ಬಿಡುತ್ತಿದ್ದಾರೆ. ಹಿಂದೆ ಇಂಥ ಕಟ್ಟುಕಥೆಗಳನ್ನು ಹರಡಿ ಲೋಕಸಭಾ ಚುನಾವಣೆಯಲ್ಲಿ ಜನ ಮೋದಿಗೆ ಓಟು ಹಾಕಿದರು.
ಆದರೆ ಬಾಬಾ ಸಾಹೇಬರ ಸಂವಿಧಾನದ ಅಡಿಪಾಯದ ಮೇಲೆ ರೂಪುಗೊಂಡ ಈ ದೇಶ ಕಳೆದ ಅರವತ್ತು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ನೆಹರೂರಿಂದ ವಾಜಪೇಯಿಯವರೆಗೆ ಸಾಗಿ ಬಂದ ಅಭಿವೃದ್ಧಿ ಪಥದಲ್ಲಿ ಈಗ ಒಮ್ಮೆಲೆ ಧೂಮಕೇತುವಿನಂತೆ ಕಾಣಿಸಿಕೊಂಡ ಮೋದಿ ಕಳೆದ ಅರವತ್ತು ವರ್ಷಗಳಿಂದ ಸಾಧಿಸಲಾಗದ್ದನ್ನು ತಾನು ಸಾಧಿಸುತ್ತಿದ್ದೇನೆಂದು ಬುರುಡೆ ಬಿಡುತ್ತಿದ್ದಾರೆೆ.
ಕಳೆದ ವರ್ಷ ನೆರೆ ಹಾವಳಿ ಎಂದಾಗ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ದರೆಂದು ನಕಲಿ ಛಾಯಾ ಚಿತ್ರವನ್ನು ಫೋಟೊಶಾಫ್ ಬಳಸಿ ಪ್ರಕಟಿಸಿದ ಕೇಂದ್ರದ ವಾರ್ತಾ ಮತ್ತು ಪ್ರಚಾರ ಸಚಿವ ಖಾತೆಯು ಛೀಮಾರಿ ಹಾಕಿ ಕೊಂಡಿತ್ತು. ನರೇಂದ್ರ ಮೋದಿಯವರಂಥ ಸರ್ವಶಕ್ತ ನಾಯಕ ಈ ಜಗತ್ತಿನಲ್ಲಿ ಯಾರೂ ಇಲ್ಲ ಎಂದು ಬಿಂಬಿಸುವ ಯತ್ನ ಅವರ ಭಕ್ತ ಸಮೂಹದಿಂದ ನಡೆಯುತ್ತಿದೆ.
ಫೋಟೋಶಾಫ್‌ನಲ್ಲಿ ತಮ್ಮ ನಾಯಕನನ್ನು ಅಮೇರಿಕದ ಅಧ್ಯಕ್ಷರ ಪಕ್ಕದಲ್ಲಿಟ್ಟು ರೋಮಾಂಚನಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವ ಮೋದಿ ಭಕ್ತರ ಕುಚೇಷ್ಟೆಗಳನ್ನು ನೋಡಿ ಜನ ನಗುತ್ತಿದ್ದಾರೆ. ನೆಹರೂ, ಶಾಸ್ತ್ರಿ, ಇಂದಿರಾ ಗಾಂಧಿ , ದೇವೇಗೌಡ, ಗುಜ್ರಾಲ್, ವಿ.ಪಿ.ಸಿಂಗ್ ಕುಳಿತ ಪ್ರಧಾನಿ ಸ್ಥಾನದಲ್ಲಿ ಇಂಥ ವ್ಯಕ್ತಿಯನ್ನು ನಾವು ನೋಡಬೇಕಾಗಿ ಬಂದಿದೆ.
ಇತ್ತೀಚೆಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀರು ಕುಡಿಯುವ ಚಿತ್ರವನ್ನು ಬಿಯರ್ ಕುಡಿಯುವ ಚಿತ್ರವನ್ನಾಗಿ ಫೋಟೊಶಾಫ್‌ನಲ್ಲಿ ಮಾಡಿ ಅವರ ತೇಜೋವಧೆ ಮಾಡುವ ಯತ್ನ ನಡೆಯಿತು. ಗಾಂಧಿ ನೆಹರೂ ಚಿತ್ರಗಳ ಜೊತೆ ಬೆತ್ತಲೆ ಹೆಂಗಸರ ಚಿತ್ರ ಕೊಲಾಜ್ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಡಲಾಗಿದೆ.
ಒಂದೆಡೆ ದಲಿತ ಹೆಣ್ಣುಮಕ್ಕಳು ಅತ್ಯಾಚಾರಕ್ಕೆ ಒಳಗಾಗಿ ಕೊಲೆಗೀಡಾಗುತ್ತಿದ್ದರೆ, ಮೋದಿ-ಅಮಿತ್ ಶಾರಂತಹ ಜೋಡಿ ಗುಜರಾತ್‌ನಲ್ಲಿ ಪ್ರತಿಪಕ್ಷಗಳನ್ನು ಕುತಂತ್ರಗಳ ಮೂಲಕ ಹೆಣೆಯುವಂತೆ ದೇೀಶದಲ್ಲಿ ಬ್ಲಾಕ್‌ಮೇಲ್ ತಂತ್ರ ನಡೆಸಿವೆ. ರಾಷ್ಟ್ರೀಕೃತ ಬ್ಯಾಂಕುಗಳಿಗೆ 70 ಸಾವಿರ ಕೋಟಿ ರೂ. ಟೋಪಿ ಹಾಕಿದ ಅದಾನಿಯಂತಹವರಿಗೆ ರಕ್ಷಣೆ ನೀಡುತ್ತಿದೆ.
ಆತ ಏನಾದರೂ ಮಾಡಿಕೊಳ್ಳಲ್ಲಿ ತಮ್ಮ ಮನುವಾದಿ ಅಜೆಂಡಾ ಜಾರಿಗೆ ತಂದರೆ ಸಾಕು ಎಂದು ಆರೆಸ್ಸೆಸ್ ಈ ಮಂಗಾಟಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಒಟ್ಟಾರೆ ಅಂತಹವರು ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ಈ ದೇಶವನ್ನು ದೇಶ ವಿದೇಶಗಳ ಕಾರ್ಪೊರೇಟ್ ಕಂಪೆನಿಗಳಿಗೆ ಮಾರಾಟ ಮಾಡಲು ಹೊರಟ ಈ ನಿರಂತರ ವಿದೇಶ ಪ್ರವಾಸ ಪ್ರಧಾನಿಗೆ ಜನ ಪಾಠ ಕಲಿಸಬೇಕಾಗಿದೆ. ಕೇರಳದ ಜನತೆ ಇಷ್ಟರಲ್ಲೇ ಈ ಅದಾನಿ ಚೇಲಾ ಗ್ಯಾಂಗ್‌ಗೆ ತಪರಾಕಿ ನೀಡಲಿದ್ದಾರೆ.

courtesy : varthabharati

Please follow and like us:
error

Related posts

Leave a Comment